ETV Bharat / bharat

ಭಾರತದಲ್ಲಿ ಕಳೆದ 24 ಗಂಟೆಯಲ್ಲಿ 243 ಹೊಸ ಕೋವಿಡ್ 19 ಪ್ರಕರಣಗಳು ಪತ್ತೆ - ಕೋವಿಡ್ ಪ್ರಕರಣಗಳು

ದೇಶದಲ್ಲಿ ಹೊಸದಾಗಿ 243 ಕೋವಿಡ್ ಪ್ರಕರಣಗಳು ದೃಢಪಟ್ಟಿವೆ. ಸಕ್ರಿಯ ಪ್ರಕರಣಗಳ ಸಂಖ್ಯೆ 3,609ಕ್ಕೆ ಏರಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಟಣೆಯಿಂದ ತಿಳಿದು ಬಂದಿದೆ.

ಕೋವಿಡ್ 19 ಪ್ರಕರಣಗಳು
ಕೋವಿಡ್ 19 ಪ್ರಕರಣಗಳು
author img

By

Published : Dec 30, 2022, 1:25 PM IST

ನವದೆಹಲಿ: ಕಳೆದ 24 ಗಂಟೆಗಳಲ್ಲಿ 243 ಹೊಸ ಕೊರೊನಾ ವೈರಸ್ ಪ್ರಕರಣಗಳು ವರದಿಯಾಗಿವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಶುಕ್ರವಾರ ಮಾಹಿತಿ ನೀಡಿದೆ.

ಆರೋಗ್ಯ ಸಚಿವಾಲಯದ ಪ್ರಕಾರ, ಭಾರತದಲ್ಲಿ ಪ್ರಸ್ತುತ 3,609 ಸಕ್ರಿಯ ಪ್ರಕರಣಗಳಿವೆ. ಇದು ಶೇಕಡಾ 0.01 ರಷ್ಟಿದೆ. ಇಲ್ಲಿಯವರೆಗೆ ದೇಶದಲ್ಲಿ ಒಟ್ಟು 4,41,43,850 ಜನ ಕೋವಿಡ್ -19 ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ದೇಶದ ಪ್ರಸ್ತುತ ಚೇತರಿಕೆ ದರವು ಶೇಕಡಾ 98.8 ರಷ್ಟಿದೆ ಎಂದು ಸಚಿವಾಲಯ ತಿಳಿಸಿದೆ.

ಒಟ್ಟು 220.09 ಜನರಿಗೆ ಲಸಿಕೆ: ರಾಷ್ಟ್ರವ್ಯಾಪಿ ವ್ಯಾಕ್ಸಿನೇಷನ್ ಡ್ರೈವ್ ಅಡಿ ಕೇಂದ್ರವು ಒಟ್ಟು 220.09 ಕೋಟಿ ಲಸಿಕೆ ಡೋಸ್‌ಗಳನ್ನು ನೀಡಿದೆ. ಅದರಲ್ಲಿ 95.13 ಕೋಟಿ ಎರಡನೇ ಡೋಸ್‌ಗಳು ಮತ್ತು 22.39 ಕೋಟಿ ಮುನ್ನೆಚ್ಚರಿಕೆ ಡೋಸ್‌ಗಳಾಗಿವೆ ಎಂದು ಅದು ಹೇಳಿದೆ. ಕಳೆದ 24 ಗಂಟೆಗಳಲ್ಲಿ 81,097 ಕೊರೊನಾ ಲಸಿಕೆ ಡೋಸ್‌ಗಳನ್ನು ನೀಡಲಾಗಿದೆ.

ಇದನ್ನೂ ಓದಿ: ಚೀನಾದಿಂದ ಬಂದ ತಾಯಿ ಮಗಳಿಗೆ ಕೊರೊನಾ ಪಾಸಿಟಿವ್..ಸೂರತ್​ನಲ್ಲಿ ದುಬೈನಿಂದ ಬಂದ ಯುವಕನಿಗೆ ಕೋವಿಡ್​

ಆರೋಗ್ಯ ಸಚಿವಾಲಯದ ಪ್ರಕಾರ, ಭಾರತದ ದೈನಂದಿನ ಧನಾತ್ಮಕತೆಯ ದರ ಮತ್ತು ಸಾಪ್ತಾಹಿಕ ಧನಾತ್ಮಕತೆಯ ದರವು ಶೇ 0.11 ರಷ್ಟಿದೆ ಮತ್ತು ಶೇಕಡಾ 0.16 ರಷ್ಟಿದೆ. ಭಾರತವು ಇದುವರೆಗೆ 91.05 ಕೋಟಿ ಪರೀಕ್ಷೆಗಳನ್ನು ನಡೆಸಿದೆ. ಅದರಲ್ಲಿ ಕಳೆದ 24 ಗಂಟೆಗಳಲ್ಲಿ 2,13,080 ಪರೀಕ್ಷೆಗಳನ್ನು ಕೈಗೊಳ್ಳಲಾಗಿದೆ.

ವಿದೇಶಿ ಪ್ರಯಾಣಿಕರಿಗೆ ಪರೀಕ್ಷೆ ಕಡ್ಡಾಯ: ಜಾಗತಿಕ ಮಟ್ಟದಲ್ಲಿ ಕೋವಿಡ್ -19 ಸೋಂಕು ಉಲ್ಬಣವಾಗುತ್ತಿದೆ. ಚೀನಾ, ಹಾಂಕಾಂಗ್, ಜಪಾನ್, ದಕ್ಷಿಣ ಕೊರಿಯಾ, ಸಿಂಗಾಪುರ್ ಮತ್ತು ಥಾಯ್ಲೆಂಡ್​ನಿಂದ ಭಾರತಕ್ಕೆ ಪ್ರಯಾಣಿಸುವ ಎಲ್ಲ ಅಂತಾರಾಷ್ಟ್ರೀಯ ಪ್ರಯಾಣಿಕರು ಕಡ್ಡಾಯವಾಗಿ ಆರ್‌ಟಿ - ಪಿಸಿಆರ್ ಪರೀಕ್ಷೆಗೆ ಒಳಗಾಗಬೇಕಾಗುತ್ತದೆ. ಅಲ್ಲದೇ ಈ ಬಗ್ಗೆ ಏರ್ ಸುವಿಧಾ ಪೋರ್ಟಲ್‌ನಲ್ಲಿ ವರದಿಯನ್ನು ಜನವರಿ 1, 2023 ರಿಂದ ಅಪ್‌ಲೋಡ್ ಮಾಡಬೇಕಾಗುತ್ತದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಮೂಲಗಳು ತಿಳಿಸಿವೆ.

ಇದನ್ನೂ ಓದಿ: ವಿದೇಶದಿಂದ ಶಿವಮೊಗ್ಗಕ್ಕೆ ಬಂದ ವ್ಯಕ್ತಿಗೆ ಕೋವಿಡ್ ಪಾಸಿಟಿವ್: ಇಬ್ಬರು ಹೋಂ ಐಸೋಲೇಷನ್

ಮುಂದಿನ 40 ದಿನಗಳು ನಿರ್ಣಾಯಕ: ಜನವರಿ ಮಧ್ಯದಲ್ಲಿ ಭಾರತವು ಕೋವಿಡ್ ಪ್ರಕರಣಗಳ ಉಲ್ಬಣವನ್ನು ನೋಡ ಬಹುದಾದ್ದರಿಂದ ಮುಂದಿನ 40 ದಿನಗಳು ನಿರ್ಣಾಯಕವಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಮೂಲಗಳು ಬುಧವಾರ ತಿಳಿಸಿವೆ. ದೇಶವು ಅನುಭವಿಸಿದ ಕೋವಿಡ್ ಉಲ್ಬಣದ ಹಿಂದಿನ ಪ್ರವೃತ್ತಿಗಳನ್ನು ವಿಶ್ಲೇಷಿಸಿದ ನಂತರ ಮೌಲ್ಯಮಾಪನವನ್ನು ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಕೆಲವು ದೇಶಗಳಲ್ಲಿ ಕೋವಿಡ್ ಪ್ರಕರಣಗಳು ಏರಿಕೆಯಾಗುತ್ತಿರುವುದರಿಂದ, ಮತ್ತೊಂದು ಅಲೆ ಬಂದರೇ ಅದನ್ನು ಎದುರಿಸಲು ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಸಿದ್ಧವಾಗಿರಬೇಕು ಎಂದು ಕೇಂದ್ರ ಸರ್ಕಾರ ಹೇಳಿದೆ. ಅಲ್ಲದೇ ಆರೋಗ್ಯ ಸೌಲಭ್ಯಗಳನ್ನು ಒದಗಿಸಲು ಎಲ್ಲ ಸಿದ್ಧತೆಯನ್ನು ಮಾಡಿಕೊಳ್ಳಲಾಗಿದೆ ಎಂದು ಪರಿಶೀಲಿಸಲಾಗುತ್ತಿದೆ.

ಇದನ್ನೂ ಓದಿ: ಮೂಗಿನ ಮೂಲಕ ಹಾಕುವ ಇಂಕೋವ್ಯಾಕ್ಸ್​ ಕೊರೊನಾ ಲಸಿಕೆಗೆ ದರ ನಿಗದಿ.. ದರ ಎಷ್ಟು ಗೊತ್ತಾ?

ಪ್ರಪಂಚದಾದ್ಯಂತ ಕೋವಿಡ್ ಪ್ರಕರಣಗಳಲ್ಲಿ ಇತ್ತೀಚಿನ ದಿನಗಳಲ್ಲಿ ಉಲ್ಬಣವು ಕಂಡುಬಂದಿದೆ. ಏಕೆಂದರೆ BF.7 ರೂಪಾಂತರವು ಚೀನಾ ಮತ್ತು US ನಂತಹ ದೇಶಗಳಲ್ಲಿ ಉಲ್ಬಣಗೊಳ್ಳುವಿಕೆಯ ಹಿಂದಿನ ಪ್ರಮುಖ ಅಂಶವಾಗಿದೆ ಎಂದು ನಂಬಲಾಗಿದೆ.

ಕೊರೊನಾ ಮಾರಿಗೆ ಕೊವ್ಯಾಕ್ಸಿನ್​ ಮದ್ದು ಅರೆದಿದ್ದ ಭಾರತ್ ಬಯೋಟೆಕ್‌ ಸಂಸ್ಥೆ ಇದೀಗ ವಿಶ್ವದಲ್ಲಿಯೇ ಮೊದಲ ಇಂಟ್ರಾನಾಸಲ್​ ಲಸಿಕೆಯನ್ನು ಪರಿಚಯಿಸಿದ್ದು, ದರ ಕೂಡ ನಿಗದಿ ಮಾಡಿದೆ. ಬೂಸ್ಟರ್​ ಡೋಸ್​ ಆಗಿ ಮೂಗಿನ ಮೂಲಕ ಪಡೆಯುವ ಇಂಕೋವ್ಯಾಕ್​ ಲಸಿಕೆಯನ್ನು CoWin ವೆಬ್​ಸೈಟ್​ನಲ್ಲಿ ಲಭ್ಯವಿದೆ.

ಇದನ್ನೂ ಓದಿ: ಅಮೆರಿಕದಿಂದ ಆಗಮಿಸಿದ ಗಂಗಾವತಿ ಯುವತಿಗೆ ಕೋವಿಡ್ ಸೋಂಕು​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.