GDS ನೇಮಕಾತಿ 2022 : ಭಾರತೀಯ ಅಂಚೆ ಸೇವೆಯಲ್ಲಿ ನೇಮಕಾತಿಗಳಿಗಾಗಿ ಅಧಿಸೂಚನೆಯನ್ನು ಹೊರಡಿಸಲಾಗಿದೆ. 38,926 ಹುದ್ದೆಗಳನ್ನು ತುಂಬಿಕೊಳ್ಳಲು ಇಂಡಿಯಾ ಪೋಸ್ಟ್ ಗ್ರಾಮೀಣ ಡಾಕ್ ವರ್ಕರ್ ಹುದ್ದೆಗಳಿಗೆ ಪ್ರಕಟಣೆ ಪ್ರಕಟಿಸಿದೆ. ಅಧಿಸೂಚನೆಯ ವಿವರಗಳು ಈ ಕೆಳಗಿನಂತಿವೆ.
ಖಾಲಿ ಹುದ್ದೆಗಳು : ದೇಶಾದ್ಯಂತ 38,926 ಹುದ್ದೆಗಳು ಖಾಲಿ ಇವೆ. ಬ್ರಾಂಚ್ ಪೋಸ್ಟ್ ಮಾಸ್ಟರ್, ಅಸಿಸ್ಟೆಂಟ್ ಬ್ರಾಂಚ್ ಪೋಸ್ಟ್ ಮಾಸ್ಟರ್ ಮತ್ತು ಡಾಕ್ ಸೇವಕ್ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
ವಿದ್ಯಾರ್ಹತೆ : ಹತ್ತನೇ ತರಗತಿ ಓದಿರಬೇಕು. ಹತ್ತನೇ ತರಗತಿಯಲ್ಲಿ ಸ್ಥಳೀಯ ಭಾಷೆಯನ್ನು ಕಲಿತಿರಬೇಕು. ಬೈಸಿಕಲ್ ಬರಬೇಕು.
ವಯಸ್ಸು: 18 ವರ್ಷಕ್ಕಿಂತ ಮೇಲ್ಪಟ್ಟವರು ಮತ್ತು 40 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಈ ಕೆಲಸಕ್ಕೆ ಅರ್ಜಿ ಸಲ್ಲಿಸಬಹುದು.
ವೇತನ : ಬ್ರಾಂಚ್ ಪೋಸ್ಟ್‌ಮಾಸ್ಟರ್ ಕೆಲಸಕ್ಕೆ ಆಯ್ಕೆಯಾದರೆ ತಿಂಗಳಿಗೆ ರೂ.12000 ವೇತನ. ಸಿ ಅಸಿಸ್ಟೆಂಟ್ ಬ್ರಾಂಚ್ ಪೋಸ್ಟ್ ಮಾಸ್ಟರ್ ಮತ್ತು ಡಾಕ್ ಸೇವಕ್ ಹುದ್ದೆಗಳಿಗೆ ರೂ.10,000 ವೇತನ.
ಆಯ್ಕೆ ಹೇಗೆ? : ಅಭ್ಯರ್ಥಿಗಳನ್ನು ಹತ್ತನೇ ತರಗತಿಯ ಅರ್ಹತೆಯ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ. ನಿಯಮಗಳ ಪ್ರಕಾರ ಮೆರಿಟ್ ಪಟ್ಟಿಯನ್ನು ತಯಾರಿಸಲಾಗುವುದು.
ಅರ್ಜಿ ಹಾಕುವ ವಿಧಾನ : indiapostgdsonline.gov.in ವೆಬ್‌ಸೈಟ್‌ನಲ್ಲಿ ಅರ್ಜಿ ಭರ್ತಿ ಮಾಡಬೇಕು. ಜೂನ್ 5ಕ್ಕೆ ಅರ್ಜಿ ಹಾಕುವ ದಿನಾಂಕ ಕೊನೆಯದಾಗಿರುತ್ತದೆ. ಅರ್ಜಿ ಶುಲ್ಕ 100 ರೂ. ಆಗಿದೆ.