ನ್ಯೂಯಾರ್ಕ್: ವಿಶ್ವಸಂಸ್ಥೆಯ ಭಾರತದ ಖಾಯಂ ಪ್ರತಿನಿಧಿ ಟಿ. ಎಸ್. ತಿರುಮೂರ್ತಿ ಮಂಗಳವಾರ ಈ ವರ್ಷದ ಯುಎನ್ ನಿಧಿಯ ಚಟುವಟಿಕೆಗಳಿಗೆ 150,000 ಯುಎಸ್ಡಿ ಡಾಲರ್ ಘೋಷಿಸಿದ್ದಾರೆ.
"ನಾವು ಶಾಂತಿ ನಿರ್ಮಾಣ ನಿಧಿಯ ಚಟುವಟಿಕೆಗಳಿಗೆ ನಮ್ಮ ಬೆಂಬಲವನ್ನು ನೀಡುತ್ತೇವೆ. ನಮ್ಮ ಬೆಂಬಲದ ಸಂಕೇತವಾಗಿ, ಈ ವರ್ಷದ ನಿಧಿಯ ಚಟುವಟಿಕೆ ಮತ್ತು ಕಾರ್ಯಕ್ರಮಗಳಿಗೆ ಭಾರತವು 150,000 ಯುಎಸ್ ಡಾಲರ್ ನೀಡಲಿದೆ" ಎಂದು ಟಿ.ಎಸ್. ತಿರುಮೂರ್ತಿ ಹೇಳಿದ್ದಾರೆ.
ಶಾಂತಿ ನಿರ್ಮಾಣ ಮಾಡಲು 2021 ನಮಗೆ ಅವಕಾಶವನ್ನು ನೀಡುತ್ತದೆ ಎಂದು ನಾವು ನಂಬುತ್ತೇವೆ. ವಿಶೇಷವಾಗಿ ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ ನಾವು ಗಳಿಸುವುದಕ್ಕಿಂತ ಕಳೆದುಕೊಳ್ಳುವುದೇ ಹೆಚ್ಚಾಗಲಿದೆ ಎಂಬ ಭಯ ಇದೆ" ಎಂದು ಅವರು ಹೇಳಿದರು.
ಓದಿ:ಖಲಿಸ್ತಾನ್ ಬೆಂಬಲಿಗರಿಂದ ನ್ಯೂಯಾರ್ಕ್‌ನಲ್ಲೂ ಪ್ರತಿಭಟನೆ
"ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವವಾಗಿ, ಪ್ರಜಾಪ್ರಭುತ್ವ ಮತ್ತು ಕಾನೂನಿನ ನಿಯಮವನ್ನು ಬಲಪಡಿಸಲು ಆಡಳಿತ ರಚನೆಯನ್ನು ನಿರ್ಮಿಸಲು ಆದ್ಯತೆ ನೀಡುವ ಅಗತ್ಯತೆಯ ಬಗ್ಗೆ ನಮಗೆ ಅರಿವಿದೆ. ಮಹಿಳೆಯರು ವಹಿಸಿದ ನಿರ್ಣಾಯಕ ಪಾತ್ರವನ್ನು ಭಾರತವು ಗುರುತಿಸುತ್ತದೆ. ಶಾಂತಿ ನಿರ್ಮಾಣ ಚಟುವಟಿಕೆಗಳಲ್ಲಿ ಯುವಕರು, ಭದ್ರತಾ ಪಡೆ ಬಲಪಡಿಸುವುದು ಮತ್ತು ಉತ್ತಮ ಆಡಳಿತದ ನಾಗರಿಕರನ್ನು ಬಲಪಡಿಸುವುದಕ್ಕೆ ಕೈಜೋಡಿಸುತ್ತೇವೆ" ಎಂದು ಯುಎನ್‌ನಲ್ಲಿ ಭಾರತದ ಶಾಂತಿ ನಿರ್ಮಾಣ ಪ್ರಯತ್ನಗಳ ಕುರಿತು ರಾಯಭಾರಿ ತಿರುಮೂರ್ತಿ ಮಾತನಾಡಿದರು.
ಶಾಂತಿ ನಿರ್ಮಾಣದ ನಮ್ಮ ನಿರ್ದಿಷ್ಟ ಅಂಶಕ್ಕೆ ಜಗತ್ತು ಆದ್ಯತೆ ನೀಡಬೇಕಿದೆ. ವಿಶ್ವ ವೇದಿಕೆಯಲ್ಲಿ ಭಾರತದ ಪಾತ್ರದ ಬಗ್ಗೆ ಮಾತನಾಡುತ್ತಾ, "ಅಭಿವೃದ್ಧಿಶೀಲ ರಾಷ್ಟ್ರಗಳೊಂದಿಗೆ ಅದರಲ್ಲೂ ವಿಶೇಷವಾಗಿ ಆಫ್ರಿಕಾ ಮತ್ತು ಏಷ್ಯಾದೊಂದಿಗಿನ ವ್ಯಾಪಕವಾದ ಅಭಿವೃದ್ಧಿ ಸಹಭಾಗಿತ್ವದ ಮೂಲಕ ಶಾಂತಿ ನಿರ್ಮಾಣದ ಸಂದರ್ಭದಲ್ಲಿ ಭಾರತ ಯಾವಾಗಲೂ ರಚನಾತ್ಮಕ ಮತ್ತು ಮಹತ್ವದ ಪಾತ್ರವನ್ನು ವಹಿಸಲಿದೆ ಎಂದು ತಿರುಮೂರ್ತಿ ಪ್ರತಿಪಾದಿಸಿದರು.