ETV Bharat / bharat

ಭಾರತ-ಪಾಕಿಸ್ತಾನ ಸೇನಾ ಶಸ್ತ್ರಾಸ್ತ್ರ ಸಾಮರ್ಥ್ಯ ಹೇಗಿದೆ? - India Army Capacity

ಭಾರತದ ಶತ್ರು ಪಾಕ್‌ನ ವಾರ್ಷಿಕ ರಕ್ಷಣಾ ಬಜೆಟ್‌ ಕೇವಲ ₹45,500 ಕೋಟಿ. ಇದು ವಿವಾದಿತ ರಫೇಲ್​ ಡೀಲ್​ನ ₹59 ಸಾವಿರ ಕೋಟಿ ಸಹ ದಾಟುವುದಿಲ್ಲ. ಪಾಕ್‌ ಬಳಿ 6 ಲಕ್ಷ ಸಕ್ರಿಯ ಸೇನಾ ಸಿಬಂದಿ ಇದ್ದು, ಆ ದೇಶದ ಬಳಿ 914 ಯುದ್ಧ ವಿಮಾನಗಳಿವೆ. 2017ರಲ್ಲಿ ಒಟ್ಟು ಬಂಡವಾಳ ವೆಚ್ಚದಲ್ಲಿ ಶೇ 16.7ರಷ್ಟು ಮಾತ್ರವೇ ಖರ್ಚು ಮಾಡಿದೆ.

Narendra Modhi
ಪ್ರಧಾನಿ ನರೇಂದ್ರ ಮೋದಿ
author img

By

Published : Feb 24, 2022, 9:38 PM IST

ನವದೆಹಲಿ: ಈ ಮಧ್ಯೆ ಜಗತ್ತಿನಲ್ಲೇ ಆರ್ಥಿಕವಾಗಿ ಪ್ರಬಲ ರಾಷ್ಟ್ರವಾಗಿ ಹೊರಹೊಮ್ಮುತ್ತಿರುವ ಭಾರತ ಸೇನಾ ಸಾಮರ್ಥ್ಯದಲ್ಲೂ ಗಣನೀಯ ಪ್ರಗತಿ ಸಾಧಿಸಿದೆ. ವಿಶ್ವದಲ್ಲೇ 5ನೇ ಬಲಾಢ್ಯ ಸೈನ್ಯ ಹೊಂದಿದ ಹೆಗ್ಗಳಿಕೆ ಭಾರತದ್ದು. ಹಾಗಿದ್ದರೆ ಪಾಕ್​ ಸೈನ್ಯ ಭಾರತೀಯ ಸೈನಿಕರ ಪ್ರತಿದಾಳಿ ಎದುರಿಸುವಷ್ಟು ಶಕ್ತವಾಗಿದೆಯಾ?

ವಾರ್ಷಿಕ ₹3.36 ಲಕ್ಷ ಕೋಟಿ ರಕ್ಷಣಾ ಬಜೆಟ್‌ ಹೊಂದಿರುವ ಭಾರತ 13 ಲಕ್ಷ ಸಕ್ರಿಯ ಸೇನಾ ಸಿಬ್ಬಂದಿ ಹೊಂದಿದೆ. ದಶಕಗಳಿಂದ ಸದಾ ಕಾಲುಕೆದರಿ ಜಗಳಕ್ಕೆ ಬರುತ್ತಿರುವ ಪಾಕ್​ ಮತ್ತು ಚೀನಾವನ್ನು ಎದುರಿಸಲು ಒಟ್ಟು ಬಂಡವಾಳ ವೆಚ್ಚದಲ್ಲಿ ಶೇ 32.19ರಷ್ಟು ಹಣವನ್ನು ಮಿಲಿಟರಿಗೆ ವಿನಿಯೋಗಿಸುತ್ತಿದೆ. ಈ ವರ್ಷ ಶೇ 6.87ರಷ್ಟು ಹಣವನ್ನು ಹೆಚ್ಚುವರಿಯಾಗಿ ಏರಿಸಲಾಗಿದೆ.

India-Pakistan Army capacity
ಭಾರತ-ಪಾಕಿಸ್ತಾನ ಸೈನ್ಯದ ಶಸ್ತ್ರಾಸ್ತ್ರ ಸಾಮರ್ಥ್ಯ

ಭಾರತದ ಶತ್ರು ಪಾಕ್‌ನ ವಾರ್ಷಿಕ ರಕ್ಷಣಾ ಬಜೆಟ್‌ ಕೇವಲ ₹ 45,500 ಕೋಟಿ. ಇದು ವಿವಾದಿತ ರಫೇಲ್​ ಡೀಲ್​ನ ₹ 59 ಸಾವಿರ ಕೋಟಿ ದಾಟುವುದಿಲ್ಲ. ಪಾಕ್‌ ಬಳಿ 6 ಲಕ್ಷ ಸಕ್ರಿಯ ಸೇನಾ ಸಿಬ್ಬಂದಿ ಇದ್ದು, ಆ ದೇಶದ ಬಳಿ 914 ಯುದ್ಧ ವಿಮಾನಗಳಿವೆ. 2017ರಲ್ಲಿ ಒಟ್ಟು ಬಂಡವಾಳ ವೆಚ್ಚದಲ್ಲಿ ಶೇ 16.7ರಷ್ಟು ಮಾತ್ರವೇ ಖರ್ಚು ಮಾಡಿದೆ.

ಸೈನಿಕ ಸಾಮರ್ಥ್ಯದಲ್ಲಿ ವಿಶ್ವದ 11ನೇ ಸ್ಥಾನದಲ್ಲಿರುವ ಪಾಕ್​, 'ಯುದ್ಧ ಭೂಮಿಯಲ್ಲಿ ಭಾರತವನ್ನು ನೋಡಿಕೊಳ್ಳುತ್ತೇವೆ' ಎಂಬ ಹೇಳಿಕೆಯನ್ನು ಅಲ್ಲಿನ ಪ್ರಧಾನಿ, ಸೇನಾ ಮುಖ್ಯಸ್ಥರು ನೀಡುತ್ತಿದ್ದಾರೆ. ತನ್ನದೇ ಭೂಪ್ರದೇಶ ನಾಶವಾದರೂ ಚಿಂತೆಯಿಲ್ಲ ಭಾರತದ ಮೇಲೆ ಪ್ರತಿದಾಳಿ ಮಾಡುತ್ತೇವೆ ಎನ್ನುವಂತಿದೆ ಈ ನಡೆ.

ವಿಧ್ವಂಸಕ ಕ್ಷಿಪಣಿ ಸಾಮರ್ಥ್ಯ.. ಉಭಯ ರಾಷ್ಟ್ರಗಳು ಎರಡೂ ದೇಶಗಳನ್ನು ತಲುಪಬಲ್ಲ ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿದ್ದರೂ ಭಾರತೀಯ ಪಡೆಯಲ್ಲಿ ಆಗಸವನ್ನೇ ಸೀಳಿಕೊಂಡು, ಭೂಮಿಯನ್ನೇ ತುಂಡು ಮಾಡುವಂತಹ ಮಿಸೈಲ್​​ಗಳಿವೆ.

ಭಾರತದ ಬತ್ತಳಿಕೆಯಲ್ಲಿ ಸದ್ಯ ಅಗ್ನಿ ಸರಣಿಯ 4 ಕ್ಷಿಪಣಿಗಳಿವೆ. ಅಗ್ನಿ-1: 700 ಕಿ.ಮೀ. ಅಗ್ನಿ-2: 2,000 ಕಿ.ಮೀ. ಅಗ್ನಿ-3: 2500 ಕಿ.ಮೀ. ಮತ್ತು ಅಗ್ನಿ-4: 3500 ಕಿ. ಮೀ ವ್ಯಾಪ್ತಿಗೆ ತಲುಪುವ ಸಾಮರ್ಥ್ಯ ಹೊಂದಿದೆ.

ಅಗ್ನಿ-5 ಕ್ಷಿಪಣಿ ನಿಖರವಾಗಿ ತನ್ನ ಗುರಿ ತಲುಪುವ ಪ್ರಯೋಗ ಯಶಸ್ವಿಯಾಗಿದೆ. ಹೀಗಾಗಿ, ಅಗ್ನಿ-5 ಕ್ಷಿಪಣಿ ಭಾರತ ಸೇನೆಯ ಬತ್ತಳಿಕೆ ಸೇರುವ ಹಂತದಲ್ಲಿದ್ದು, ಇದು ಸೇರ್ಪಡೆಗೊಂಡರೆ ಪಾಕ್​ನ ಒಂದು ನಗರವನ್ನೇ ಬೂದಿ ಮಾಡಬಲ್ಲದು. ಚೀನಾದ ಸಹಾಯದಿಂದ ನಿರ್ಮಿಸಲಾದ ಪಾಕಿಸ್ತಾನದ ಕ್ಷಿಪಣಿಗಳು ಭಾರತದ ಯಾವುದೇ ಭಾಗವನ್ನು ತಲುಪುವ ಸಣ್ಣ ಮತ್ತು ಮಧ್ಯಮ ಶ್ರೇಣಿಯ ಶಸ್ತ್ರಾಸ್ತ್ರಗಳನ್ನು ಮಾತ್ರ ಒಳಗೊಂಡಿವೆ.

ಭಾರತ 12 ಲಕ್ಷ ಬಲಿಷ್ಠ​ ಸೈನ್ಯವನ್ನು ಹೊಂದಿದೆ. 3,565ಕ್ಕೂ ಹೆಚ್ಚು ಯುದ್ಧ ಟ್ಯಾಂಕರ್​, 3,100 ಪದಾತಿ ಹೋರಾಟದ ವಾಹನಗಳು, 336 ಶಸ್ತ್ರಸಜ್ಜಿತ ಸಿಬ್ಬಂದಿ ವಾಹಕಗಳು ಮತ್ತು 9,719 ಫಿರಂಗಿಗಳನ್ನು ಒಳಗೊಂಡಿದೆ. ಪಾಕಿಸ್ತಾನದ ಸೈನ್ಯವು ಚಿಕ್ಕದಾಗಿದ್ದು 2,496 ಟ್ಯಾಂಕರ್​ಗಳು, 1,605 ಶಸ್ತ್ರಸಜ್ಜಿತ ಸಿಬ್ಬಂದಿ ವಾಹಕಗಳು ಮತ್ತು 375 ಸ್ವಯಂಚಾಲಿತ ಹೊವಿಟ್ಜರ್​ ಫಿರಂಗಿ, 4,472 ಆರ್ಟಿಲರಿ ಬಂದೂಕು ಪಡೆ ಸೇರಿದಂತೆ 6 ಲಕ್ಷ ಸೈನಿಕರಿದ್ದಾರೆ.

ಮಿಂಚಿನ ದಾಳಿಯ ವಾಯುಪಡೆ.. ಭಾರತದ ವಾಯುಪಡೆಯಲ್ಲಿ 1.27 ಲಕ್ಷ ಸೈನಿಕರಿದ್ದು, 814 ಫೈಟರ್​ ವಿಮಾನಗಳಿವೆ. ಫೈಟರ್​ಗಳ ಸಂಖ್ಯೆ ಹೆಚ್ಚಾಗಿದ್ದರೂ ಜೆಟ್​ ಫೈಟರ್​ ಕುರಿತು ಒಂದಿಷ್ಟು ಆತಂಕವಿದೆ. ಚೀನಾ ಮತ್ತು ಪಾಕ್ ಅನ್ನು ಸಮರ್ಥವಾಗಿ ಬಡಿಯಲು ಭಾರತಕ್ಕೆ 42 ಸ್ಕ್ವಾಡ್ರನ್​ ಸೇರಿ 750 ಯುದ್ಧ ವಿಮಾನಗಳಿವೆ. ರಫೇಲ್​ ಯುದ್ಧವಿಮಾನಗಳು ಸೇನೆಗೆ ಭರ್ತಿಗೊಂಡಿದ್ದರಿಂದ ವಾಯುಪಡೆ ಬಲ ಹೆಚ್ಚಿಸಿದೆ.

ಅತ್ತ ಚೀನಾ ಮೂಲದ ಎಫ್​- 7 ಜಿಪಿ ಮತ್ತು ಅಮೆರಿಕದ ಎಫ್-16 ಫೈಟಿಂಗ್ ಫಾಲ್ಕನ್ ಜೆಟ್​ ಸೇರಿದಂತೆ 425 ಯುದ್ಧ ವಿಮಾನಗಳನ್ನು ಮಾತ್ರ ಪಾಕಿಸ್ತಾನ ಹೊಂದಿದೆ.

ನೌಕಾಪಡೆಯ ಶಕ್ತಿ.. ಭಾರತದ ನೌಕಾಪಡೆಯು ಒಂದು ವಿಮಾನವಾಹಕ ನೌಕೆ, 16 ಜಲಾಂತರ್ಗಾಮಿಗಳು, 14 ವಿಧ್ವಂಸಕ ಅಸ್ತ್ರಗಳು, 13 ಯುದ್ಧನೌಕೆಗಳು, 106 ಗಸ್ತು ಹಡಗುಗಳು, ಹಲವು ಕರಾವಳಿ ಫೈಟರ್​ ನೌಕೆಗಳು ಹಾಗೂ 75 ಯುದ್ಧ ವಿಮಾಗಳನ್ನು ಸಾಗಿಸುವ ಜಲಾಂತರ್ಗಾಮಿ ನೌಕೆ ಸೇರಿದಂತೆ 67,700 ಸಿಬ್ಬಂದಿ ಇದ್ದಾರೆ.

ಚಿಕ್ಕ ಜಲಮಾರ್ಗ ಹೊಂದಿರುವ ಪಾಕಿಸ್ತಾನ 9 ಫ್ರಿಗೇಟ್​, 8 ಜಲಾಂತರ್ಗಾಮಿ, 17 ಗಸ್ತು ಮತ್ತು ಕರಾವಳಿ ಹಡಗುಗಳು ಹಾಗೂ 8 ಫೈಟರ್​ ವಿಮಾನಗಳನ್ನು ಹೊಂದಿದೆ.

ಓದಿ: ತೋಟದ ಮನೆಯಲ್ಲಿ ಕತ್ತು ಸೀಳಿ ವ್ಯಕ್ತಿಯ ಬರ್ಬರ ಕೊಲೆ.. ಕೆ ಆರ್​ ನಗರದಲ್ಲಿ ಹರಿಯಿತು ನೆತ್ತರು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.