ನವದೆಹಲಿ: ದೇಶದಲ್ಲಿ ಈ ವರ್ಷ ವಾಡಿಕೆಗಿಂತ ಕಡಿಮೆ ಮಳೆಯಾಗುವ ಸಾಧ್ಯತೆಯಿದೆ. 20 ಪ್ರತಿಶತದಷ್ಟು ಬರಗಾಲ ಬರಲಿದೆ ಎಂದು ಖಾಸಗಿ ಹವಾಮಾನ ಸಂಸ್ಥೆ ಸ್ಕೈಮೆಟ್ ಮನ್ಸೂಚನೆ ನೀಡಿದ್ದು, ರೈತರಲ್ಲಿ ಆತಂಕ ಉಂಟು ಮಾಡಿದೆ. ಆದ್ರೆ ಈ ಬಗ್ಗೆ ಸರ್ಕಾರಿ ಹವಾಮಾನ ಇಲಾಖೆ ಯಾವುದೇ ವರದಿಯನ್ನು ಬಿಡುಗಡೆ ಮಾಡಿಲ್ಲ.
ಸತತ 4 ವರ್ಷಗಳಿಂದ ದೇಶದಲ್ಲಿ ಉತ್ತಮ ಮಳೆಯಾಗಿತ್ತು. ಈ ಬಾರಿ ಅದು ಕಡಿಮೆಯಾಗಲಿದೆ. ಬೆಳೆಗಳು ಮಾನ್ಸೂನ್ ಮಳೆಯ ಮೇಲೆ ಹೆಚ್ಚು ಅವಲಂಬಿತವಾಗಿದೆ. ಜೂನ್‌ನಿಂದ ಸೆಪ್ಟೆಂಬರ್‌ವರೆಗಿನ 4 ತಿಂಗಳ ಅವಧಿಯಲ್ಲಿ 868.6 ಮಿಮೀ ಸರಾಸರಿ ಮಳೆಯಾಗಲಿದೆ ಎಂದು ಸ್ಕೈಮೆಟ್ ಅಂದಾಜಿಸಿದೆ.
ಹವಾಮಾನ ಸೂಚಕಗಳಾದ "ಲಾ ನಿನಾ" ಪರಿಸ್ಥಿತಿಯು ಬದಲಾಗಿ ಮತ್ತು "ಎಲ್ ನಿನೊ" ಹಿಡಿತ ಸಾಧಿಸುವ ಸಾಧ್ಯತೆಯಿಂದಾಗಿ ದೇಶದಲ್ಲಿ ಬರಗಾಲ ಉಂಟಾಗಲಿದೆ. ಶೇ.20 ರಷ್ಟು ಬರ ಬರುವ ಸಾಧ್ಯತೆಯಿದೆ. ದೇಶದ ಉತ್ತರ ಮತ್ತು ಮಧ್ಯ ಭಾಗಗಳಲ್ಲಿ ಮಳೆ ಕೊರತೆ ಹೆಚ್ಚಿರಲಿದೆ ಎಂದು ಖಾಸಗಿ ಹವಾಮಾನ ಸಂಸ್ಥೆ ಸೋಮವಾರ ಹೇಳಿದೆ.
ಗುಜರಾತ್, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರದಲ್ಲಿ ಜುಲೈ ಮತ್ತು ಆಗಸ್ಟ್‌ನ ಮಾನ್ಸೂನ್ ತಿಂಗಳಲ್ಲಿ ಅಸಮರ್ಪಕ ಮಳೆಯಾಗಲಿದೆ. ಉತ್ತರ ಭಾರತದ ಪಂಜಾಬ್, ಹರಿಯಾಣ, ರಾಜಸ್ಥಾನ ಮತ್ತು ಉತ್ತರ ಪ್ರದೇಶ ಋತುವಿನ ದ್ವಿತೀಯಾರ್ಧದಲ್ಲಿ ವಾಡಿಕೆಗಿಂತ ಕಡಿಮೆ ಮಳೆ ಪಡೆಯಲಿವೆ ಸಾಧ್ಯತೆಯಿದೆ.
ದೇಶದಲ್ಲಿ ಬರಗಾಲ: ಅಧಿಕ ಮಳೆಯಾಗುವ ಮುನ್ಸೂಚನೆ ಇಲ್ಲದ ಕಾರಣ, ದೇಶದಲ್ಲಿ ಶೇಕಡಾ 20 ರಷ್ಟು ಬರಗಾಲದ ಸಾಧ್ಯತೆ ಇರಲಿದೆ. ಸಾಮಾನ್ಯಕ್ಕಿಂತ 15 ಪ್ರತಿಶತದಷ್ಟು ಕಡಿಮೆ (ಶೇಕಡಾ 105 ರಿಂದ 110 ರ ನಡುವೆ), 25 ಪ್ರತಿಶತದಷ್ಟು (ಶೇ 96 ರಿಂದ 104 ರ ನಡುವೆ) ಸಾಮಾನ್ಯ ಮಳೆಯಾಗುವ ಸಾಧ್ಯತೆಯಿದೆ. ಸಾಮಾನ್ಯಕ್ಕಿಂತ ಕಡಿಮೆ ಮಳೆಯಾಗುವ ಸಾಧ್ಯತೆ ಶೇ 40. ರಷ್ಟಿದೆ ಎಂದು ಹೇಳಿದೆ.
ಭಾರತದ ಹವಾಮಾನ ಇಲಾಖೆ (ಐಎಂಡಿ) ಮಾನ್ಸೂನ್ ಋತುವಿನ ಮುನ್ಸೂಚನೆಯನ್ನು ಇನ್ನೂ ಬಿಡುಗಡೆ ಮಾಡಿಲ್ಲ. ಆದರೆ, ಇದು ಏಪ್ರಿಲ್ನಿಂದ ಜೂನ್ವರೆಗೆ ದೇಶದ ಹೆಚ್ಚಿನ ಭಾಗಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ತಾಪಮಾನ ಮತ್ತು ಶಾಖ ಇರಲಿದೆ ಎಂದು ಹೇಳಿದೆ.
ಸ್ಕೈಮೆಟ್‌ನ ವ್ಯವಸ್ಥಾಪಕ ನಿರ್ದೇಶಕ ಜತಿನ್ ಸಿಂಗ್ ಪ್ರಕಾರ, ಎಲ್ ನಿನೊ ಕಾರಣದಿಂದಾಗಿ ಈ ವರ್ಷ ದುರ್ಬಲ ಮಾನ್ಸೂನ್ ಅನ್ನು ಉಂಟು ಮಾಡಲಿದೆ. ಇದು ಬರಗಾಲವನ್ನೂ ತರಲಿದೆ ಎಂದು ಹೇಳಿದ್ದಾರೆ.
ಎಲ್ ನಿನೋ ಅರ್ಥ: ಎಲ್ ನಿನೋ ಅಂದರೆ ದಕ್ಷಿಣ ಅಮೆರಿಕಾದ ಬಳಿ ಪೆಸಿಫಿಕ್ ಮಹಾಸಾಗರದಲ್ಲಿ ನೀರಿನ ಉಷ್ಣವನ್ನು ಹೆಚ್ಚಿಸುತ್ತದೆ. ಇದು ಮಾನ್ಸೂನ್ ಮಾರುತಗಳನ್ನು ದುರ್ಬಲಗೊಳಿಸುತ್ತದೆ. ಈ ಮಾನ್ಸೂನ್ ಮಾರುತಗಳು ಭಾರತದಲ್ಲಿ ಕಡಿಮೆ ಮಳೆ ಬೀಳುವಂತೆ ಮಾಡುತ್ತವೆ.
ಲಾ ನಿನಾ ಅಂದರೆ, ದಕ್ಷಿಣ ಅಮೆರಿಕಾದ ಬಳಿಯ ಪೆಸಿಫಿಕ್ ಸಾಗರದಲ್ಲಿನ ನೀರು ತಂಪಾಗುತ್ತದೆ. ಇದು ಭಾರತದಲ್ಲಿನ ಮಾನ್ಸೂನ್‌ಗೆ ಅನುಕೂಲಕರವಾಗಿದೆ.
ಇದನ್ನೂ ಓದಿ: ಶ್ರೀನಗರ - ಲೇಹ್ ಹೆದ್ದಾರಿಯಲ್ಲಿ Z-ಮೋರ್ಹ್ ಸುರಂಗ ಮಾರ್ಗ ಪರಿಶೀಲಿಸಿದ ಕೇಂದ್ರ ಸಚಿವ ಗಡ್ಕರಿ..