ನವದೆಹಲಿ : ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 2,075 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, 71 ಜನರು ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಇಂದು ತಿಳಿಸಿದೆ.
ಸೋಂಕಿಗೊಳಗಾದ 71 ಮಂದಿ ಸಾವನ್ನಪ್ಪುವ ಮೂಲಕ ಒಟ್ಟು ಸಾವಿನ ಸಂಖ್ಯೆ 5,16,352ಕ್ಕೆ ಏರಿದೆ. ದಿನೇದಿನೆ ಸೋಂಕು ಪ್ರಕರಣ ಇಳಿಮುಖವಾಗುತ್ತಿವೆ. ಸಕ್ರಿಯ ಪ್ರಕರಣಗಳ ಸಂಖ್ಯೆ 27,802ಕ್ಕೆ ಇಳಿದಿದೆ. ಸದ್ಯ ಶೇ.0.06ರಷ್ಟು ಕೋವಿಡ್ ಸಕ್ರಿಯ ಪ್ರಕರಣಗಳಿವೆ.
- " class="align-text-top noRightClick twitterSection" data="">
ಇನ್ನೂ ಕಳೆದ 24 ಗಂಟೆಗಳಲ್ಲಿ ಒಟ್ಟು 3,383 ಸೋಂಕಿತರು ಚೇತರಿಸಿಕೊಂಡಿದ್ದಾರೆ. ಕೋವಿಡ್ ಪ್ರಾರಂಭವಾದಾಗಿನಿಂದ ಕೊರೊನಾ ವಿರುದ್ಧ ಹೋರಾಡಿ ಗುಣಮುಖರಾದವರ ಸಂಖ್ಯೆ 4,24,61,926 ಚೇತರಿಕೆಯ ಪ್ರಮಾಣವು ಶೇ.98.73ರಷ್ಟಿದೆ.
ಇದುವರೆಗೆ 78.22 ಕೋಟಿ ಕೋವಿಡ್ ಪರೀಕ್ಷೆ ಕೈಗೊಳ್ಳಲಾಗಿದೆ. ಸದ್ಯ ವಾರದ ಕೋವಿಡ್ ಪಾಸಿಟಿವಿಟಿ ದರವು ಶೇ.0.41ರಷ್ಟಿದ್ದರೆ, ದೈನಂದಿನ ಕೋವಿಡ್ ಪಾಸಿಟಿವಿಟಿ ದರ ಶೇ.0.56ರಷ್ಟಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಪಂಜಾಬ್ನಲ್ಲಿ ಕ್ಯಾಬಿನೆಟ್ ರಚನೆ: 10 ಶಾಸಕರು ನೂತನ ಸಚಿವರಾಗಿ ಪ್ರಮಾಣವಚನ
ಇಂದು ಬೆಳಗ್ಗೆ 7 ಗಂಟೆಯವರೆಗೆ ವರದಿಗಳ ಪ್ರಕಾರ, ಭಾರತದ ಕೋವಿಡ್ ವ್ಯಾಕ್ಸಿನೇಷನ್ ವ್ಯಾಪ್ತಿಯು 181.04 ಕೋಟಿ ತಲುಪಿದೆ. 12 ರಿಂದ 14 ವಯೋಮಾನದವರಿಗೆ ಲಸಿಕೆ ಹಾಕಲಾಗುತ್ತಿದೆ. 11ಲಕ್ಷಕ್ಕೂ ಹೆಚ್ಚು ಮಕ್ಕಳಿಗೆ ಲಸಿಕೆಯ ಮೊದಲ ಡೋಸ್ ಅನ್ನು ನೀಡಲಾಗಿದೆ. 17.15ಕ್ಕಿಂತ ಹೆಚ್ಚು ಬಳಕೆಯಾಗದ ಕೋವಿಡ್ ಲಸಿಕೆಗಳು ಇನ್ನೂ ರಾಜ್ಯಗಳಲ್ಲಿ ಲಭ್ಯವಿದೆ.