ನವದೆಹಲಿ: ಹೊಸ ರೂಪಾಂತರ ಕೊರೊನಾ ಹರಡುವಿಕೆ ಆತಂಕದ ಹೆಚ್ಚಳದ ಹಿನ್ನೆಲೆಯಲ್ಲಿ ಭಾರತ ಮತ್ತು ಯುನೈಟೆಡ್ ಕಿಂಗ್‌ಡಮ್ ನಡುವಿನ ವಿಮಾನಗಳನ್ನು ಡಿಸೆಂಬರ್ 31ರ ನಂತರವು ಸ್ಥಗಿತಗೊಳಿಸುವ ಬಗ್ಗೆ ಸರ್ಕಾರ ಸುಳಿವು ನೀಡಿತು.
"ಈ ತಾತ್ಕಾಲಿಕ ಅಮಾನತುಗೊಳಿಸುವಿಕೆಯ ಬಗ್ಗೆ ನಾನು ಒಂದು ಸಣ್ಣ ಮುನ್ಸೂಚನೆ ನೀಡುತ್ತೇನೆ. ಈ ವಿಸ್ತರಣೆಯು ದೀರ್ಘ ಅಥವಾ ಅನಿರ್ದಿಷ್ಟವಾಗಿರುವುದು ಎಂದು ಹೇಳಲಾಗುವುದಿಲ್ಲ. ಇದು ಒಂದು ಸಣ್ಣ ವಿಸ್ತರಣೆಯಾಗಿರಬಹುದು" ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಯುಕೆನಲ್ಲಿ ಕೊರೊನಾ ವೈರೆಸ್ನ ಹೊಸ ರೂಪಾಂತರ ಹಾಗೂ ಸೋಂಕಿನ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಒತ್ತಡ ಆರಂಭವಾದ ಬಳಿಕ ಯುಕೆ ಯಿಂದ ಬರುವ ವಿಮಾನಗಳಿಗೆ ತಾತ್ಕಾಲಿಕ ಅಮಾನತು ವಿಧಿಸಲು ಭಾರತ ಡಿಸೆಂಬರ್ 21 ರಂದು ಆದೇಶಿಸಿತು.
ಮಂಗಳವಾರ ಭಾರತದಲ್ಲಿ ಹೊಸ ರೂಪಾಂತರ COVID-19ನ ಆರು ಪ್ರಕರಣಗಳನ್ನು ವರದಿಯಾಗಿದೆ. ಇದು ಶೇಕಡಾ 70 ರಷ್ಟು ಹೆಚ್ಚು ಹರಡಬಲ್ಲದು ಎಂಬ ಕುರಿತು ಯುಕೆಯಲ್ಲಿ ಮೊದಲು ವರದಿಯಾಗಿದೆ. ಪರೀಕ್ಷಿಸಿದ ಎಲ್ಲ ಮಾದರಿಗಳಲ್ಲಿ ಬೆಂಗಳೂರಿನ ನಿಮಾನ್ಸ್ನಲ್ಲಿ ಮೂರು, ಸಿಸಿಎಂಬಿ, ಹೈದರಾಬಾದ್‌ನಲ್ಲಿ ಎರಡು ಮತ್ತು ಪುಣೆಯ ಎನ್‌ಐವಿಯಲ್ಲಿ ಒಂದು ಮಾದರಿ ಪತ್ತೆಯಾಗಿದೆ.
ಏರ್ ಬಬಲ್ನ ವ್ಯವಸ್ತೆ ಅಡಿ, ಭಾರತ-ಯುಕೆ 67 ಸಾಪ್ತಾಹಿಕ ವಿಮಾನಗಳನ್ನು ಏರ್ ಇಂಡಿಯಾ, ವಿಸ್ತಾರಾ, ಬ್ರಿಟಿಷ್ ಏರ್ವೇಸ್ ಮತ್ತು ವರ್ಜಿನ್ ಅಟ್ಲಾಂಟಿಕ್ ಕಾರ್ಯ ನಿರ್ವಹಿಸುತ್ತಿದ್ದು, ಭಾರತೀಯ ಮೆಟ್ರೋಗಳಿಂದ ಸುಮಾರು 2,000 ಪ್ರಯಾಣಿಕರು ನಿತ್ಯ ಲಂಡನ್‌ಗೆ ಹಾರಾಟ ನಡೆಸುತ್ತಿದ್ದಾರೆ.