ETV Bharat / bharat

ಭಾರತ ಮಹಿಳೆಯರಿಗೆ ಸುರಕ್ಷಿತ ದೇಶ: ಸಂದೇಶ ಸಾರಲು ಸೈಕಲ್ ಯಾತ್ರೆ ಕೈಗೊಂಡ ಯುವತಿ - ಆಶಾಗೆ ಚಿಕ್ಕಂದಿನಿಂದಲೂ ಅಥ್ಲೆಟಿಕ್ಸ್​ನಲ್ಲಿ ಆಸಕ್ತಿ

ಭಾರತ ದೇಶವು ಮಹಿಳೆಯರಿಗೆ ಸಂಪೂರ್ಣ ಸುರಕ್ಷಿತವಾಗಿದೆ ಎಂಬ ಸಂದೇಶ ಸಾರಲು ಮಧ್ಯ ಪ್ರದೇಶದ ಯುವತಿಯೊಬ್ಬರು ಸೈಕಲ್ ಮೇಲೆ ಭಾರತ ಯಾತ್ರೆ ಕೈಗೊಂಡಿದ್ದಾರೆ. ಸದ್ಯ ಇವರು ತೆಲುಗು ರಾಜ್ಯಗಳ ಮುಖಾಂತರ ಸಾಗುತ್ತಿದ್ದು, ಮಾರ್ಗಮಧ್ಯೆ ಈಟಿವಿ ಭಾರತ್​ದೊಂದಿಗೆ ಮಾತನಾಡಿದರು.

India is a safe country for women young woman embarked on a cycle journey

author img

By

Published : Feb 7, 2023, 2:34 PM IST

ಹೈದರಾಬಾದ್: ನಮ್ಮ ದೇಶದಲ್ಲಿ ಮಹಿಳೆಯರ ಸುರಕ್ಷತೆಗೆ ಯಾವುದೇ ಅಪಾಯವಿಲ್ಲ ಎಂಬುದನ್ನು ಸಾರಲು ಮಧ್ಯಪ್ರದೇಶದ ಯುವತಿಯೊಬ್ಬರು ಸೈಕಲ್ ಯಾತ್ರೆ ಕೈಗೊಂಡಿದ್ದಾರೆ. ದೇಶದ ಎಲ್ಲ ಪ್ರಮುಖ ನಗರಗಳನ್ನು ಸಂಪರ್ಕಿಸುವ 25 ಸಾವಿರ ಕಿಲೋಮೀಟರ್ ವರೆಗೆ ಈ ಟ್ರಿಪ್ ನಡೆಯುತ್ತಿದೆ. ತೆಲುಗು ರಾಜ್ಯಗಳ ಮೂಲಕ ಸೈಕಲ್ ಯಾತ್ರೆ ಸಾಗಿದ ಸಂದರ್ಭದಲ್ಲಿ ಈಟಿವಿ ಭಾರತ್ ಅವರನ್ನು ವಿಶೇಷವಾಗಿ ಸ್ವಾಗತಿಸಿತು.

ಯಾರೀ ಯುವತಿ: ಕತ್ತಲನ್ನು ಸೀಳಿ ಉದಯಿಸುವ ಸೂರ್ಯನಂತೆ ಸೈಕಲ್ ತುಳಿಯುತ್ತಿರುವ ಈ ಯುವತಿಯ ಹೆಸರು ಆಶಾ ಮಾಳವೀಯ. ಇತ್ತೀಚೆಗೆ ಅವರು ಸಂಪೂರ್ಣ ಭಾರತ ಯಾತ್ರೆ ಆರಂಭಿಸಿದ್ದಾರೆ. ಇಡೀ ಭಾರತವನ್ನು ಸುತ್ತಲು ಅವರು ನಿರ್ಧರಿಸಿದ್ದಾರೆ. ದೇಶದ ಎಲ್ಲ ರಾಜ್ಯಗಳು ಮತ್ತು 4 ಕೇಂದ್ರಾಡಳಿತ ಪ್ರದೇಶಗಳಿಗೆ ಸೈಕಲ್ ಯಾತ್ರೆ ಭೇಟಿ ನೀಡಲಿದೆ. 1 ನವೆಂಬರ್ 2022 ರಂದು ಮಧ್ಯಪ್ರದೇಶದ ಸ್ವಾತಂತ್ರ್ಯ ದಿನದ ಸಂದರ್ಭದಲ್ಲಿ ಯಾತ್ರೆಯು ಭೋಪಾಲ್‌ನಲ್ಲಿ ಪ್ರಾರಂಭವಾಯಿತು. ಆಶಾ ಮಾಳವೀಯ ಅವರ ಸೈಕಲ್ ಯಾತ್ರೆ ಇದುವರೆಗೆ 8 ರಾಜ್ಯಗಳ ಮೂಲಕ ಸಾಗಿದೆ. ಮಧ್ಯಪ್ರದೇಶ, ಗುಜರಾತ್, ಮಹಾರಾಷ್ಟ್ರ, ಗೋವಾ, ತಮಿಳುನಾಡು, ಕೇರಳ, ಕರ್ನಾಟಕ ಮತ್ತು ಆಂಧ್ರಪ್ರದೇಶ ರಾಜ್ಯಗಳಲ್ಲಿ ಯಾತ್ರೆ ಸಾಗಿ ಬಂದಿದೆ.

ಮಹಿಳಾ ಸಬಲೀಕರಣ ಮತ್ತು ಸುರಕ್ಷತೆಯ ಘೋಷವಾಕ್ಯದೊಂದಿಗೆ ಸೈಕಲ್ ಯಾತ್ರೆ ಮಾಡುತ್ತಿದ್ದೇನೆ ಎಂದು ಆಶಾ ಮಾಳವೀಯ ಹೇಳಿದ್ದಾರೆ. ನಮ್ಮ ದೇಶದಲ್ಲಿ ಮಹಿಳೆಯರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ಅವರ ಸುರಕ್ಷತೆಗೆ ಯಾವುದೇ ಧಕ್ಕೆ ಇಲ್ಲ ಎನ್ನುತ್ತಾರೆ ಆಶಾ. ಈ ಸಂದೇಶವನ್ನು ಎಲ್ಲರಿಗೂ ತಲುಪಿಸಲು ಯಾತ್ರೆ ಮಾಡಲಾಗುತ್ತಿದೆ. ಪ್ರವಾಸದ ವೇಳೆ ಪ್ರವಾಸಿ ಸ್ಥಳಗಳಿಗೂ ಭೇಟಿ ನೀಡುತ್ತಾರೆ ಆಶಾ. ಭಾರತ ಸುರಕ್ಷಿತ ದೇಶವಾಗಿದ್ದು, ಅಂತಾರಾಷ್ಟ್ರೀಯ ಪ್ರವಾಸಿಗರು ಭಾರತಕ್ಕೆ ಧೈರ್ಯದಿಂದ ಬರಬಹುದು, ಇಲ್ಲಿ ಅವರ ಸುರಕ್ಷತೆಗೆ ಯಾವುದೇ ಬೆದರಿಕೆ ಇಲ್ಲ ಎಂಬ ಸಂದೇಶವನ್ನು ಆಶಾ ಜಗತ್ತಿಗೆ ಈ ಮೂಲಕ ರವಾನಿಸುತ್ತಿದ್ದಾರೆ.

ಆಶಾಗೆ ಚಿಕ್ಕಂದಿನಿಂದಲೂ ಅಥ್ಲೆಟಿಕ್ಸ್​ನಲ್ಲಿ ಆಸಕ್ತಿ: ಮಧ್ಯಪ್ರದೇಶದ ರಾಜ್‌ಘಡ್ ಜಿಲ್ಲೆಯ ನತಾರಾಮ್ ಗ್ರಾಮದವರಾದ ಆಶಾ ಅವರ ತಂದೆ ಚಿಕ್ಕವಳಿದ್ದಾಗ ನಿಧನರಾದರು. ತಾಯಿ ದಿನಗೂಲಿ ಕೆಲಸ ಮಾಡುತ್ತಾರೆ. ಆದರೆ ಆಶಾ ಮತ್ತು ಅವರ ಸಹೋದರಿ ಇಬ್ಬರೂ ಜೊತೆಯಾಗಿ ಕಷ್ಟಪಟ್ಟು ಓದುತ್ತಿದ್ದಾರೆ. ಆಶಾ ದೈಹಿಕ ಶಿಕ್ಷಣದಲ್ಲಿ ಪಿಜಿ ಮುಗಿಸಿದ್ದಾರೆ. ಬಾಲ್ಯದಿಂದಲೂ ಇವರಿಗೆ ಕ್ರೀಡೆಗಳಲ್ಲಿ ಆಸಕ್ತಿ ಇತ್ತು. ಅಥ್ಲೆಟಿಕ್ಸ್‌ನಲ್ಲಿ ಮೇಲುಗೈ ಸಾಧಿಸಿದ್ದಾರೆ. ಇವರು ಪರ್ವತಾರೋಹಣ ತರಬೇತಿ ಕೂಡಾ ಪಡೆದಿದ್ದಾರೆ.

ಹಿಮಾಲಯದಲ್ಲಿ 20,500 ಅಡಿ ಎತ್ತರಕ್ಕೆ ಏರಿ ದೇಶದ ತ್ರಿವರ್ಣ ಧ್ವಜ ಹಾರಿಸಿದ್ದಾರೆ ಆಶಾ. ಆ ಸ್ಪೂರ್ತಿಯೊಂದಿಗೆ ಈಗ ದೇಶಾದ್ಯಂತ ಪ್ರವಾಸ ಮಾಡುತ್ತಿದ್ದೇನೆ ಎನ್ನುತ್ತಾರೆ ಆಶಾ. ಯಾವುದಕ್ಕೂ ಭಯಪಡಬೇಡಿ... ಗುರಿ ಸ್ಪಷ್ಟವಾಗಿರಲಿ. ಅದನ್ನು ಸಾಧಿಸುವವರೆಗೆ ವಿಶ್ರಮಿಸಬೇಡಿ ಎಂಬ ಸಂದೇಶವನ್ನು ಆಕೆ ಯುವತಿಯರಿಗೆ ನೀಡುತ್ತಾಳೆ. ಯುವಕರು ಆತ್ಮಹತ್ಯೆ ಮಾಡಿಕೊಳ್ಳಬಾರದು, ಎಲ್ಲ ಸಮಸ್ಯೆಗಳಿಗೂ ಪರಿಹಾರವಿದೆ ಎಂಬುದು ಅವರ ದೃಢ ವಿಶ್ವಾಸವಾಗಿದೆ.

ಮಧ್ಯ ಪ್ರದೇಶ ಸರ್ಕಾರವು ಆಶಾ ಅವರ ಯಾತ್ರೆಗೆ ಅಗತ್ಯವಿರುವ ಸೈಕಲ್ ಅನ್ನು ನೀಡಿದೆ. ತನ್ನ ಪ್ರವಾಸದ ಭಾಗವಾಗಿ, ಆಶಾ ರಾಜ್ಯದ ರಾಜಧಾನಿಗಳು, ಪ್ರಮುಖ ನಗರಗಳು ಮತ್ತು ಪಟ್ಟಣಗಳ ಮೂಲಕ ಸೈಕ್ಲಿಂಗ್ ಮಾಡುತ್ತಿದ್ದಾರೆ. ಆಯಾ ರಾಜ್ಯಗಳ ಗಣ್ಯರನ್ನು ಭೇಟಿಯಾಗುತ್ತಿದ್ದಾರೆ. ಆಶಾ ಅವರು ಕೇರಳ ಮುಖ್ಯಮಂತ್ರಿ ವಿಜಯನ್ ಮತ್ತು ತಮಿಳುನಾಡು ಸಿಎಂ ಸ್ಟಾಲಿನ್ ಅವರನ್ನು ಭೇಟಿ ಮಾಡಿದ್ದಾರೆ. ಇನ್ನು ಕೆಲವೆಡೆ ಸಚಿವರು, ಜಿಲ್ಲಾಧಿಕಾರಿಗಳು, ಎಸ್ಪಿಗಳನ್ನು ಭೇಟಿಯಾಗಿದ್ದಾರೆ. ತನ್ನ ಪ್ರವಾಸದ ಉದ್ದೇಶವನ್ನು ಎಲ್ಲರಿಗೂ ವಿವರಿಸುತ್ತಾ ಆಕೆ ಮುಂದೆ ಸಾಗುತ್ತಿದ್ದಾರೆ.

ಇದನ್ನೂ ಓದಿ: ಭಾರತ ಹೆಣ್ಣು ಮಕ್ಕಳ ಸುರಕ್ಷಿತ ತಾಣ: ನಿರೂಪಣೆಗಾಗಿ ಸೈಕಲ್ ಮೂಲಕ ದೇಶ ಪರ್ಯಟನೆ ಹೊರಟ ಯುವತಿ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.