ETV Bharat / bharat

ಶ್ರೀಲಂಕಾದ ತುರ್ತು ಮನವಿಗೆ ಭಾರತ ತ್ವರಿತವಾಗಿ ಸ್ಪಂದಿಸಿದೆ: ಗೋಪಾಲ್‌ ಬಾಗ್ಲೆ - ಗೋಪಾಲ್‌ ಬಾಗ್ಲೆ ಹೇಳಿಕೆ

ಶ್ರೀಲಂಕಾದಲ್ಲಿನ ಆರ್ಥಿಕ ಬಿಕ್ಕಟ್ಟು, ಹಿಂಸಾತ್ಮಕ ಪ್ರತಿಭಟನೆಗಳ ನಡುವೆ ತುರ್ತು ವಿನಂತಿಗಳಿಗೆ ಭಾರತ ತ್ವರಿತವಾಗಿ ಸ್ಪಂದಿಸಿದೆ ಎಂದು ಭಾರತದ ಹೈಕಮಿಷನರ್‌ ಗೋಪಾಲ್‌ ಬಾಗ್ಲೆ ತಿಳಿಸಿದ್ದಾರೆ.

High Commissioner  Gopal Baglay
ಗೋಪಾಲ್‌ ಬಾಗ್ಲೆ
author img

By

Published : Apr 3, 2022, 1:36 PM IST

ನವದೆಹಲಿ: ಈ ವರ್ಷದ ಜನವರಿಯಿಂದ, ಭಾರತದಿಂದ ಶ್ರೀಲಂಕಾಕ್ಕೆ ನೀಡಿದ ನೆರವು 2.5 ಶತಕೋಟಿ ಮೀರಿದೆ ಎಂದು ಭಾರತದ ಹೈಕಮಿಷನರ್‌ ಗೋಪಾಲ್‌ ಬಾಗ್ಲೆ ತಿಳಿಸಿದರು. ದ್ವೀಪರಾಷ್ಟ್ರದ ಆರ್ಥಿಕ ಬಿಕ್ಕಟ್ಟು ನಿವಾರಿಸಲು ಸಹಾಯ ಮಾಡಲು ಕೈಗೊಂಡ ಕ್ರಮಗಳನ್ನು ಅವರು ವಿವರಿಸಿದರು.

  • India has responded to urgent requests from Sri Lanka with promptness. Since January this year, support from India to Sri Lanka exceeds US dollars 2.5 billion: India's High Commissioner to Sri Lanka, Gopal Baglay to ANI

    (file photo) pic.twitter.com/PC8ZQWaUDa

    — ANI (@ANI) April 3, 2022 " class="align-text-top noRightClick twitterSection" data=" ">

ಫೆಬ್ರವರಿಯಿಂದ ಒಟ್ಟು 150,000 ಟನ್‌ಗಳಷ್ಟು ಜೆಟ್ ಏವಿಯೇಷನ್ ​​ಇಂಧನ, ಡೀಸೆಲ್ ಮತ್ತು ಪೆಟ್ರೋಲ್‌ ವಿತರಿಸಲಾಗಿದೆ. ಅಲ್ಲದೇ ಆಹಾರ, ಔಷಧ ಮತ್ತು ಅಗತ್ಯ ವಸ್ತುಗಳಿಗೆ $1 ಬಿಲಿಯನ್ ಸಾಲ ನೀಡಲು ಸಹಿ ಹಾಕಲಾಗಿದೆ. ಆರ್‌ಬಿಐ USD 400 ಮಿಲಿಯನ್ ಕರೆನ್ಸಿ ವಿನಿಮಯವನ್ನು ವಿಸ್ತರಿಸಿದೆ ಎಂದರು ತಿಳಿಸಿದರು.

ಶ್ರೀಲಂಕಾದಲ್ಲಿ ಏನಾಗುತ್ತಿದೆ?: ಶ್ರೀಲಂಕಾದ ಆರ್ಥಿಕ ಸ್ಥಿತಿ ನಿರಂತರವಾಗಿ ಕುಸಿಯುತ್ತಿದ್ದು, ಅಧ್ಯಕ್ಷ ಗೊಟಾಬಯ ರಾಜಪಕ್ಸೆ ರಾಷ್ಟ್ರವ್ಯಾಪಿ ಸಾರ್ವಜನಿಕ ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ. ಅಧ್ಯಕ್ಷರ ನಿವಾಸದ ಹೊರಗೆ ಹಿಂಸಾಚಾರ ಭುಗಿಲೆದ್ದಿದ್ದು, ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ. ಪರಿಸ್ಥಿತಿಯನ್ನು ಹತೋಟಿಗೆ ತರುವ ಪ್ರಯತ್ನದಲ್ಲಿ, ಶ್ರೀಲಂಕಾ ಪೊಲೀಸರು ಪ್ರತಿಭಟನಾಕಾರರ ಮೇಲೆ ಅಶ್ರುವಾಯು ಹಾರಿಸಿದ್ದಾರೆ. ಘಟನೆಯಲ್ಲಿ ಹಲವರನ್ನು ಬಂಧಿಸಲಾಗಿದೆ.

ಇದನ್ನೂ ಓದಿ: ಶ್ರೀಲಂಕಾದಲ್ಲಿ ಸಾಮಾಜಿಕ ಮಾಧ್ಯಮಗಳಿಗೆ ನಿರ್ಬಂಧ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.