ನವದೆಹಲಿ : ಸ್ವಿಟ್ಜರ್‌ಲ್ಯಾಂಡ್‌ನೊಂದಿಗೆ ಸ್ವಯಂಚಾಲಿತ ಮಾಹಿತಿ ವಿನಿಮಯ ಒಪ್ಪಂದದಡಿ ಭಾರತವು ಸ್ವಿಸ್ ಬ್ಯಾಂಕ್ನಿಂದ ಭಾರತೀಯರ ಖಾತೆಗಳ ಮಾಹಿತಿ ಪಡೆದಿದೆ.
ಸ್ವಯಂಚಾಲಿತ ಮಾಹಿತಿ ವಿನಿಮಯದಡಿ ಯುರೋಪಿಯನ್ ರಾಷ್ಟ್ರವು 96 ದೇಶಗಳೊಂದಿಗೆ 33 ಲಕ್ಷ ಹಣಕಾಸು ಖಾತೆಗಳ ವಿವರಗಳನ್ನು ಹಂಚಿಕೊಂಡಿದೆ. ಫೆಡರಲ್ ಟ್ಯಾಕ್ಸ್ ಅಡ್ಮಿನಿಸ್ಟ್ರೇಷನ್ (ಎಫ್‌ಟಿಎ) ಈ ವರ್ಷ ಮಾಹಿತಿ ವಿನಿಮಯವು ಇನ್ನೂ 10 ದೇಶಗಳನ್ನು ಒಳಗೊಂಡಿದೆ.
ಆಂಟಿಗುವಾ ಮತ್ತು ಬಾರ್ಬುಡಾ, ಅಜೆರ್ಬೈಜಾನ್, ಡೊಮಿನಿಕಾ, ಘಾನಾ, ಲೆಬನಾನ್, ಮಕಾವು, ಪಾಕಿಸ್ತಾನ, ಕತಾರ್, ಸಮೋವಾ ಮತ್ತು ವೌಟು ರಾಷ್ಟ್ರಗಳಿಗೂ ಈ ವರ್ಷದಿಂದ ಮಾಹಿತಿ ವಿನಿಮಯ ಮಾಡಲಾಗುತ್ತದೆ.
ಎಫ್‌ಟಿಎ, ಎಲ್ಲಾ 96 ದೇಶಗಳ ಹೆಸರುಗಳು ಮತ್ತು ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸದಿದ್ದರೂ, ಭಾರತವು ಸತತ 3ನೇ ವರ್ಷ ಖಾತೆಗಳ ವಿವರಗಳನ್ನು ಪಡೆದಿದೆ ಎಂದು ಮಾಹಿತಿ ನೀಡಿದೆ. ಸ್ವಿಟ್ಜರ್ಲೆಂಡ್ ಮುಂದಿನ ಮಾಹಿತಿಯನ್ನು ಸೆಪ್ಟೆಂಬರ್ 2022ರಲ್ಲಿ ಹಂಚಿಕೊಳ್ಳಲಿದೆ. ಸೆಪ್ಟೆಂಬರ್ 2019ರಲ್ಲಿ ಸ್ವಯಂಚಾಲಿತ ಮಾಹಿತಿ ವಿನಿಮಯದಡಿ ಭಾರತವು ಸ್ವಿಟ್ಜರ್ಲೆಂಡ್ ನಿಂದ ಮೊದಲ ವಿವರಗಳನ್ನು ಪಡೆಯಿತು.