ETV Bharat / bharat

ಪರಿಸರ ಸಂರಕ್ಷಣೆಗೆ ಒಗ್ಗೂಡಿದ ಭಾರತ - ಫ್ರೆಂಚ್​: ನೂತನ ಯೋಜನೆ ಜಾರಿ

'ಇಂಡೋ - ಫ್ರೆಂಚ್ ಪರಿಸರ ವರ್ಷ'ವನ್ನು ಕೇಂದ್ರ ಪರಿಸರ ಸಚಿವ ಪ್ರಕಾಶ್ ಜಾವಡೇಕರ್ ಮತ್ತು ಫ್ರೆಂಚ್ ಪರಿಸರ ಸಚಿವ ಬಾರ್ಬರಾ ಪೊಂಪಿಲಿ ಪ್ರಾರಂಭಿಸಿದ್ದು, ಇದು ದೇಶಗಳ ಸಹಕಾರವನ್ನು ಬಲಪಡಿಸಲು ಮತ್ತು ಜಾಗತಿಕ ಪರಿಸರ ಸಂರಕ್ಷಣೆಯ ಪರವಾಗಿ ಕ್ರಮಗಳನ್ನು ಯೋಜಿಸಲು ಸಹಾಯ ಮಾಡುತ್ತದೆ.

India-France
ಭಾರತ- ಫ್ರೆಂಚ್
author img

By

Published : Jan 29, 2021, 7:38 AM IST

ನವದೆಹಲಿ: ಸುಸ್ಥಿರ ಅಭಿವೃದ್ಧಿಯಲ್ಲಿ ಎರಡು ದೇಶಗಳ ಸಹಕಾರವನ್ನು ಬಲಪಡಿಸಲು ಮತ್ತು ಜಾಗತಿಕ ಪರಿಸರ ಸಂರಕ್ಷಣೆಯ ಪರವಾಗಿ ಕ್ರಮಗಳನ್ನು ಯೋಜಿಸಲು ಕೇಂದ್ರ ಪರಿಸರ ಸಚಿವ ಪ್ರಕಾಶ್ ಜಾವಡೇಕರ್ ಮತ್ತು ಫ್ರೆಂಚ್ ಪರಿಸರ ಸಚಿವೆ ಬಾರ್ಬರಾ ಪೊಂಪಿಲಿ ಅವರು 'ಇಂಡೋ-ಫ್ರೆಂಚ್ ಪರಿಸರ ವರ್ಷ'ವನ್ನು ಪ್ರಾರಂಭಿಸಿದರು.

ಈ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವರು, ಭಾರತ - ಚೀನಾ ಮೈತ್ರಿಕೂಟದ ಮಹತ್ವ ಹೇಳಿದರು. "ಪ್ರಧಾನಿ ನರೇಂದ್ರ ಮೋದಿ ಅವರು ಪ್ರಾರಂಭಿಸಿದ ಅಂತಾರಾಷ್ಟ್ರೀಯ ಸೌರ ಮೈತ್ರಿಕೂಟದ ಎರಡು ಪ್ರಮುಖ ಸ್ತಂಭಗಳು ನಾವು. ಜಾಗತಿಕ ಪರಿಸರ ಸಂರಕ್ಷಣೆಯ ಬಗೆಗಿನ ಈ ಸಹಭಾಗಿತ್ವವು ಪ್ರಪಂಚದ ಉಳಿದ ಭಾಗಗಳಿಗೆ ಸುಸ್ಥಿರ ಅಭಿವೃದ್ಧಿಯತ್ತ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡಲು ಒಂದು ಉದಾಹರಣೆಯಾಗುತ್ತದೆ" ಎಂದು ಹೇಳಿದರು.

"ಭಾರತವು ಹವಾಮಾನ ಬದಲಾವಣೆಯ ಕ್ರಿಯೆಯತ್ತ ಗಮನಾರ್ಹ ಪ್ರಗತಿಯನ್ನು ಸಾಧಿಸಿದೆ. ಮತ್ತು ಈಗಾಗಲೇ ಹೊರಸೂಸುವಿಕೆಯ ತೀವ್ರತೆಯ ಶೇಕಡಾ 26 ರಷ್ಟು ಕಡಿತವನ್ನು ಸಾಧಿಸಿದೆ. 2020ರ ವೇಳೆಗೆ, ಭಾರತದಲ್ಲಿ ನವೀಕರಿಸಬಹುದಾದ ಸಾಮರ್ಥ್ಯವು 90 ಗಿಗಾ ವ್ಯಾಟ್​ ಆಗಿದ್ದು, ಇದರಲ್ಲಿ ಸೌರಶಕ್ತಿ 36 ಗಿಗಾ ವ್ಯಾಟ್​ ಕೂಡಾ ಸೇರಿದೆ" ಎಂದರು.

ಬಳಿಕ ಮಾತನಾಡಿದ ಪೊಂಪಿಲಿ, "ಭಾರತ ಮತ್ತು ಫ್ರಾನ್ಸ್ ವಿಶ್ವದ ಇತರ ಭಾಗಗಳಿಗೆ ಒಂದು ಉದಾಹರಣೆ ನೀಡಲು ಎದುರು ನೋಡುತ್ತಿವೆ. ಸುಸ್ಥಿರ ಅಭಿವೃದ್ಧಿ ಕ್ಷೇತ್ರದಲ್ಲಿ ಭಾರತವು ಅನೇಕ ದೇಶಗಳನ್ನು ಪ್ರೇರೇಪಿಸುತ್ತದೆ" ಎಂದು ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.