ಮುಂಬೈ(ಮಹಾರಾಷ್ಟ್ರ): ನ್ಯಾಷನಲ್ ಹೈಸ್ಪೀಡ್ ರೈಲ್ ಕಾರ್ಪೊರೇಷನ್ ಹೊಸ ಆಸ್ಟ್ರಿಯನ್ ಟರ್ನಿಂಗ್ ವಿಧಾನವನ್ನು ಬಳಸಿಕೊಂಡು ಭಾರತದ ಮೊದಲ ಸಮುದ್ರದೊಳಗಿನ ಸುರಂಗ ನಿರ್ಮಾಣಕ್ಕೆ ಟೆಂಡರ್ ಕರೆದಿದೆ. ಈ ಸುರಂಗ ನಿರ್ಮಾಣದ ನಂತರ ಮುಂಬೈ ಅಹಮದಾಬಾದ್ ಹೈಸ್ಪೀಡ್ ರೈಲ್ವೆ ಕಾಮಗಾರಿಯ ವೇಗ ಹೆಚ್ಚಾಗಲಿದೆ.
ಮೋದಿ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾಗಿದೆ ಈ ಬುಲೆಟ್ ಟ್ರೈನ್ ಯೋಜನೆ. ಮಹಾರಾಷ್ಟ್ರದಲ್ಲಿ ಹೊಸ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಅನೇಕ ಯೋಜನೆಗಳಿಗೆ ತುರ್ತಾಗಿ ಅನುಮೋದನೆ ನೀಡಿದ್ದು, ಸರ್ಕಾರ ಕೂಡ ಆದಷ್ಟು ಬೇಗ ಮುಂಬೈ-ಅಹಮದಾಬಾದ್ ಮಾರ್ಗದಲ್ಲಿ ಬುಲೆಟ್ ರೈಲು ಓಡಿಸಲು ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಈಗ ಭಾರತದ ಮೊದಲ ಸಮುದ್ರದೊಳಗೆ ಸುರಂಗ ನಿರ್ಮಾಣಕ್ಕಾಗಿ ರಾಷ್ಟ್ರೀಯ ಹೈಸ್ಪೀಡ್ ರೈಲ್ ಕಾರ್ಪೊರೇಷನ್ ಟೆಂಡರ್ ಆಹ್ವಾನಿಸಿದೆ.
ಸದ್ಯ ಸಮುದ್ರದೊಳಗೆ ಸುರಂಗ ನಿರ್ಮಾಣಕ್ಕೆ ಕರೆಯಲಾದ ಟೆಂಡರ್ ಕಾಮಗಾರಿಯು ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ ಮತ್ತು ಶೇಳಿ ಫಾಟಾಗಳ ಮಧ್ಯದ ಭೂಗತ ರೈಲು ನಿಲ್ದಾಣದ ಕಾಮಗಾರಿಯಾಗಿದೆ. ಸಮುದ್ರದ ಏಳು ಕಿಲೋಮೀಟರ್ ಆಳದಲ್ಲಿ ಪ್ರಪ್ರಥಮ ಬಾರಿಗೆ ನಿರ್ಮಾಣವಾಗುತ್ತಿರುವ ಈ ಸುರಂಗ ಮಾರ್ಗ ನಿರ್ಮಾಣಕ್ಕಾಗಿ ನ್ಯೂ ಆಸ್ಟ್ರಿಯನ್ ಟರ್ನಿಂಗ್ ವಿಧಾನವನ್ನು ಬಳಸಿಕೊಳ್ಳಲಾಗುವುದು.
ಸುರಂಗದ ಕೆಲಸ ಹೇಗಿರುತ್ತದೆ?: ಸುರಂಗವು ಒಂದು ರೀತಿಯ ಟ್ಯೂಬ್ ರನ್ನಿಂಗ್ ವಿಧಾನವಾಗಿರುತ್ತದೆ. ಸಾಮಾನ್ಯವಾಗಿ, ಸುರಂಗವನ್ನು ರಚಿಸಲು ಐದರಿಂದ ಆರು ಮೀಟರ್ ವ್ಯಾಸದ ಕಟ್ಟರ್ ಹೆಡ್ ಅನ್ನು ಬಳಸಲಾಗುತ್ತದೆ. ಆದರೆ ಇದರಲ್ಲಿ ಮಾತ್ರ 13.1 ಮೀಟರ್ ವ್ಯಾಸದ ಕಟ್ಟರ್ ಹೆಡ್ ಅನ್ನು ಬಳಸಲಾಗುತ್ತದೆ. ಹೈಸ್ಪೀಡ್ ರೈಲು ಸಾಗಬೇಕಾದರೆ ಅಷ್ಟು ದೊಡ್ಡ ವ್ಯಾಸದಲ್ಲಿ ಭೂಮಿಯನ್ನು ಕೊರೆಯಬೇಕಾಗುತ್ತದೆ.
16 ಕಿ.ಮೀ ಉದ್ದದ ಈ ಸುರಂಗ ನಿರ್ಮಾಣಕ್ಕೆ ಮೂರು ಟನೆಲ್ ಬೋರಿಂಗ್ ಯಂತ್ರಗಳನ್ನು ಬಳಸಲಾಗುವುದು. ಇದರಲ್ಲಿ 5 ಕಿಲೋಮೀಟರ್ ಸುರಂಗವನ್ನು ನ್ಯೂ ಆಸ್ಟ್ರೇಲಿಯಾ ಟರ್ನಿಂಗ್ ವಿಧಾನ ಬಳಸಿ ಕೊರೆಯಲಾಗುವುದು. ಈ ಸುರಂಗವು ಏಳು ಕಿಲೋಮೀಟರ್ ಉದ್ದವಿರುತ್ತದೆ.
ನೆಲದಿಂದ 25 ರಿಂದ 65 ಮೀಟರ್ ಆಳದಲ್ಲಿ ಸುರಂಗ : ಸುರಂಗವು ನೆಲದಿಂದ ಸರಿಸುಮಾರು 25 ರಿಂದ 65 ಮೀಟರ್ ಆಳದಲ್ಲಿರುತ್ತದೆ ಮತ್ತು ಅದರ ಬಿಂದುವು ಥಾಣೆ ಜಿಲ್ಲೆಯ ಶಿಳಪಾಟಾ ಬಳಿಯ ಪಾರ್ಸಿಕ್ ಬೆಟ್ಟದ 114 ಮೀಟರ್ ಕೆಳಗೆ ಇರುತ್ತದೆ. ಈ ಪರ್ವತದ ಕೆಳಗಿನ ಭಾಗಗಳಲ್ಲಿ ಸುರಂಗ ಮಾರ್ಗವನ್ನು ನೆಲದಡಿಯಲ್ಲಿ ಮಾಡಲಾಗುತ್ತದೆ. ಈ ನಿಟ್ಟಿನಲ್ಲಿ, 22 ಜುಲೈ 2022 ರಂದು ಟೆಂಡರ್‌ಗಳನ್ನು ಆಹ್ವಾನಿಸಲಾಗಿದೆ. 20 ಅಕ್ಟೋಬರ್ 2022 ರೊಳಗೆ ಈ ಟೆಂಡರ್‌ಗಳನ್ನು ಅಂತಿಮವಾಗಿ ಸಂಬಂಧಪಟ್ಟ ಪ್ರಾಧಿಕಾರಕ್ಕೆ ಸಲ್ಲಿಸಬೇಕು. ಟೆಂಡರ್ನ ಅಂತಿಮ ದಿನಾಂಕ ಜನವರಿ 19, 2023 ಆಗಿದೆ. ರಾಷ್ಟ್ರೀಯ ಹೈಸ್ಪೀಡ್ ರೈಲು ನಿಗಮದ ವಕ್ತಾರರಾದ ಸುಷ್ಮಾ ಗೌರ್ ಈ ಮಾಹಿತಿ ನೀಡಿದ್ದಾರೆ.