ದುಬೈ: ಚೀನಾದ ನಂತರ ಭಾರತವು ದುಬೈನ ಎರಡನೇ ಅತಿ ದೊಡ್ಡ ವ್ಯಾಪಾರ ಪಾಲುದಾರನಾಗಿ ಹೊರಹೊಮ್ಮಿದೆ. ದುಬೈ ಸರ್ಕಾರದ ಹೇಳಿಕೆಯ ಪ್ರಕಾರ, ಎಮಿರೇಟ್ 2021ರ ಎಚ್ 1 (first half of a financial year) ಮೊದಲಾರ್ಧದಲ್ಲಿ ಚೀನಾದೊಂದಿಗೆ 86.7 ಬಿಲಿಯನ್ ದಿರ್ಹಮ್ ವ್ಯಾಪಾರವನ್ನು ಹೊಂದಿತ್ತು. ಇನ್ನು ಭಾರತದೊಂದಿಗೆ 38.5 ದಿರ್ಹಮ್ ವ್ಯಾಪಾರ ವಹಿವಾಟು ನಡೆಸುತ್ತಿತ್ತು.
ಆದರೆ, ಇದೀಗ ವರ್ಷದಿಂದ ವರ್ಷಕ್ಕೆ ವಹಿವಾಟು ಬೆಳವಣಿಗೆಯಾಗುತ್ತಿದ್ದು, 38.5 ಬಿಲಿಯನ್ ದಿರ್ಹಮ್‌ನಿಂದ ಶೇ. 74.5ರಷ್ಟು ಏರಿಕೆ ಕಂಡು 67.1 ಬಿಲಿಯನ್ ದಿರ್ಹಮ್‌ಗೆ ಭಾರತದ ವ್ಯಾಪಾರ ವಹಿವಾಟು ವಿಸ್ತರಣೆಗೊಂಡಿದೆ. ಈ ಮೂಲಕ ಕ್ರಮವಾಗಿ ಭಾರತ ಎರಡನೇ ಸ್ಥಾನದಲ್ಲಿದ್ದು, ಅಮೆರಿಕ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ.
H1 2021 ರಲ್ಲಿ, ಅಮೆರಿಕ 32 ಬಿಲಿಯನ್ ದಿರ್ಹಮ್ ವ್ಯವಹಾರವನ್ನು ದುಬೈನೊಂದಿಗೆ ಮಾಡಿತ್ತು. ಇದು 31.7 ಬಿಲಿಯನ್ ದಿರ್ಹಮ್‌ನಿಂದ ವರ್ಷಕ್ಕೆ 1ರಷ್ಟು ಶೇಕಡಾದಷ್ಟು ಹೆಚ್ಚಾಗಿದೆ. ಸೌದಿ ಅರೇಬಿಯಾ 30.5 ಶತಕೋಟಿ ದಿರ್ಹಮ್‌ನೊಂದಿಗೆ 4 ನೇ ಸ್ಥಾನ ಪಡೆದುಕೊಂಡಿದೆ. ಇದು ಶೇ. 26ರಷ್ಟು ವಹಿವಾಟನ್ನು ಹೆಚ್ಚಿಸಿಕೊಂಡಿದೆ. ಈ ಬಳಿಕ ಸ್ವಿಟ್ಜರ್‌ಲ್ಯಾಂಡ್ 24.8 ಬಿಲಿಯನ್ ದಿರ್ಹಾಮ್ ವಹಿವಾಟು ಹೊಂದಿದೆ.
H1 2021ರಲ್ಲಿನ ಐದು ಅತಿದೊಡ್ಡ ವ್ಯಾಪಾರ ಪಾಲುದಾರರ ಒಟ್ಟು ಪಾಲು 241.21 ಬಿಲಿಯನ್ ದಿರ್ಹಮ್ ಆಗಿದ್ದು, H1 2020 ರಲ್ಲಿ 185.06 ಶತಕೋಟಿ ದಿರ್ಹಮ್‌ಗೆ ಹೋಲಿಸಿದರೆ, ಇದು 30.34 ರಷ್ಟು ಹೆಚ್ಚಾಗಿದೆ ಎಂದು ಅಲ್ಲಿನ ಸರ್ಕಾರದ ವರದಿ ಹೇಳಿದೆ.