ನವದೆಹಲಿ: ಕೆಲವು ದೇಶಗಳು ಮಾತ್ರ ಶ್ರೇಷ್ಠವಾದವು ಎಂಬ ಜಾಗತಿಕ ಅಭಿಪ್ರಾಯವನ್ನು ಭಾರತ ನಂಬುವುದಿಲ್ಲ. ಭದ್ರತೆ ಸಾಮೂಹಿಕವಾಗಿ ಜಾಗತಿಕ ಚೌಕಟ್ಟು ಎಂದು ನಾನು ನಂಬಿದ್ದೇನೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಿಳಿಸಿದರು. ನ್ಯಾಷನಲ್ ಡಿಫೆನ್ಸ್ ಕಾಲೇಜ್‌ನಲ್ಲಿ ಮಾತನಾಡಿದ ಅವರು ಇದೇ ವೇಳೆ ಸೈಬರ್ ಸೆಕ್ಯೂರಿಟಿ ಯುದ್ದದ ಬಗ್ಗೆ ಎಚ್ಚರಿಸಿದರು.
ನಮ್ಮ ಕಾರ್ಯತಂತ್ರಗಳು ನೈತಿಕವಾಗಿರಬೇಕು. ಕೆಲವು ಇತರೆ ದೇಶಗಳು ಉನ್ನತ ಎಂದು ಭಾವಿಸಿದೆ. ಆದರೆ, ಭಾರತ ಈ ಜಾಗತಿಕ ಆದೇಶದಲ್ಲಿ ನಂಬಿಕೆ ಹೊಂದಿಲ್ಲ. ಭಾರತ ಮಾನವ ಸಮಾನತೆ ಮತ್ತು ಗುಣಮಟ್ಟದ ಮಾರ್ಗದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಇದು ನಮ್ಮ ಪೂರ್ವ ಸಂಪ್ರದಾಯ ಮತ್ತು ನೈತಿಕ ಮೌಲ್ಯದ ಭಾಗವಾಗಿದ್ದು, ರಾಜಕೀಯ ಬಲವನ್ನು ನಮಗೆ ನೀಡುತ್ತದೆ. ನಮ್ಮ ಸ್ವತಂತ್ರ ಹೋರಾಟ ಕೂಡ ಉನ್ನತ ಆದರ್ಶ ಮೌಲ್ಯಗಳನ್ನು ಹೊಂದಿತ್ತು ಎಂದರು.
ಗಡಿ ನಿಯಂತ್ರಣ ರೇಖೆ ಸೇರಿದಂತೆ ಇಂಡೋ ಫೆಸಿಫಿಕ್ನಲ್ಲಿ ಚೀನಾದ ಆಕ್ರಮಣಕಾರಿ ಮಿಲಿಟರಿ ನಿಯೋಜನೆ ಕುರಿತು ಮಾತನಾಡಿದ ಅವರು, ಭದ್ರತೆ ನಿಜವಾಗಿ ಸಾಮೂಹಿಕವಾಗಿದ್ದಲ್ಲಿ, ಜಾಗತಿಕ ಆದೇಶ ನಮ್ಮೆಲ್ಲರಿಗೂ ಲಾಭಾದಾಯಕವಾಗಿರಬೇಕು ಎಂದು ಯೋಚಿಸುತ್ತೇವೆ ಎಂದರು.
ಅಧಿಕಾರ ಬಳಕೆ ಮತ್ತು ಹಂಚಿಕೆ ಹೆಚ್ಚು ಜಟಿಲವಾಗುತ್ತಿದ್ದು, ಇವುಗಳ ನಿವಾರಣೆಗೆ ಪರಿಣಾಮಕಾರಿಯಾಗಿ ಕೆಲಸಮಾಡುವುದು ಹೆಚ್ಚು ಸವಾಲು ಆಗಿದೆ.
ಸೈಬರ್ ದಾಳಿ ಮಾತ್ರವಲ್ಲದೇ ಸಾರಿಗೆ, ಸಾರ್ವಜನಿಕ ವಲಯ, ಟೆಲಿ ಕಮ್ಯೂನಿಕೇಷನ್ ಉದ್ಯಮಗಳು ಕೂಡ ದುರ್ಬಲವಾಗಿದೆ. ರಾಷ್ಟ್ರೀಯ ಭದ್ರತೆಯನ್ನು ಶೂನ್ಯ ಮೊತ್ತದ ಆಟವಾಗಿ ಪರಿಗಣಿಸಬಾರದು. ಅದನ್ನು ಗೆಲುವು- ಗೆಲುವಿನ ಆಟವಾಗಿ ಸೃಷ್ಟಿಸಬೇಕು. ದೀರ್ಘ ಲಾಭವಲ್ಲದ ಸ್ವಹಿತಾಸಕ್ತಿಗೆ ನಾವು ಬಲಿಯಾಗಬಾರದು. ಆದರೆ, ಸುಸ್ಥಿರ ಸ್ವಹಿತಾಸಕ್ತಿ ಆಗಿರಬೇಕು.
ಬಲ ಮತ್ತು ಸಮೃದ್ಧ ಭಾರತವನ್ನು ಇತರರ ಖರ್ಚಿನಲ್ಲಿ ನಿರ್ಮಾಣ ಮಾಡಬಾರದು. ಬದಲಿಗೆ ಇತರೆ ರಾಷ್ಟ್ರಗಳ ಸಾಮರ್ಥ್ಯ ತಿಳಿಯಲು ಸಹಾಯ ಮಾಡಬೇಕು. ನಮ್ಮ ಅಂತರ್ಸಂಪರ್ಕಿತ ಹಣಕಾಸು ವ್ಯವಸ್ಥೆ ಅಪಾಯದಲ್ಲಿದೆ. 2016ರಲ್ಲಿ ಬಾಂಗ್ಲಾದೇಶದ ಸೆಂಟ್ರಲ್ ಬ್ಯಾಂಕ್ನ 1 ಬಿಲಿಯನ್ ಡಾಲರ್ ಕದಿಯಲು ಹ್ಯಾಕರ್ಗಳು ಮುಂದಾದರು. ಹೆಚ್ಚಿನ ವಹಿವಾಟುಗಳನ್ನು ನಿರ್ಬಂಧಿಸಲಾಗಿದ್ದರೂ, 101 ಮಿಲಿಯನ್ ಡಾಲರ್‌ಗಳು ಇನ್ನೂ ಕಣ್ಮರೆಯಾಗಿವೆ ಎಂಬುದನ್ನು ಗಮನಿಸಬೇಕಿದೆ.
ಹಣಕಾಸು ವ್ಯವಸ್ಥೆ ಕೂಡ ಸೈಬರ್ ದಾಳಿ ಅಪಾಯದಲ್ಲಿದೆ ಎಂಬುದರ ಎಚ್ಚರಿಕೆ ಗಂಟೆ ಇದಾಗಿದೆ. ಇಂದು ಬಹುತೇಕ ಸೈಬರ್ ದಾಳಿಗಳು ನಮ್ಮ ಹಣಕಾಸಿನ ಸುಸ್ಥಿತಿ ಮೇಲೆ ಅಪಾಯ ತಂದೊಡ್ಡುತ್ತಿದೆ.
ಇದೇ ವೇಳೆ ಸಾಮಾಜಿಕ ಮಾಧ್ಯಮಗಳ ಬಗ್ಗೆ ಮಾತನಾಡಿದ ಅವರು. ಸುಳ್ಳು ಮತ್ತು ದ್ವೇಷ ಸುದ್ದಿಗಳನ್ನು ಸಮಾಜದಲ್ಲಿ ಹರಡುತ್ತಿರುವ ಬಗ್ಗೆ ಲೆಕ್ಕವಿಲ್ಲ. ಮಾಹಿತಿ ಯುದ್ಧವು ರಾಜಕೀಯ ಸ್ಥಿರತೆಗೆ ಧಕ್ಕೆ ತರುತ್ತಿದೆ ಎಂದರು.
ಇದನ್ನೂ ಓದಿ: ಲಕ್ಷ್ಮಿ ದೇವಿ ಕಮಲದ ಮೇಲೆ ಕುಳಿತುಕೊಳ್ಳುತ್ತಾಳೆ ಹೊರತು ಸೈಕಲ್ ಮೇಲೆ ಅಲ್ಲ: ರಾಜನಾಥ ಸಿಂಗ್