ETV Bharat / bharat

ದೇಶಾದ್ಯಂತ 157 ಜೆಎನ್.1; 702 ಕೋವಿಡ್ ಸೋಂಕಿತರು ಪತ್ತೆ - ಜೆಎನ್ 1 ಸೋಂಕು ಪ್ರಮಾಣ

ಜೆಎನ್ 1 ಸೋಂಕಿನಿಂದ ಬಳಲುತ್ತಿದ್ದ ಮಹಾರಾಷ್ಟ್ರದ ಇಬ್ಬರು ಸೋಂಕಿತರು ಮೃತಪಟ್ಟರೆ, ದೆಹಲಿ, ಕರ್ನಾಟಕ, ಕೇರಳ ಮತ್ತು ಪಶ್ಚಿಮ ಬಂಗಾಳದಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ.

JN1 strain
JN1 ರೂಪಾಂತರಿ ತಳಿ
author img

By ETV Bharat Karnataka Team

Published : Dec 28, 2023, 11:04 PM IST

ಹೈದ್ರಾಬಾದ್: ಭಾರತದಾದ್ಯಂತ ಕಳೆದ 24 ಗಂಟೆಗಳಲ್ಲಿ ಹೊಸದಾಗಿ 157 ಜನರಲ್ಲಿ ಜೆಎನ್ 1 ರೂಪಾಂತರಿ ದೃಢಪಟ್ಟರೆ, ಕೋವಿಡ್ ಸೋಂಕು 702 ಜನರಲ್ಲಿ ಪತ್ತೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಗುರುವಾರ ಮಾಹಿತಿ ನೀಡಿದೆ. JN.1 ಪ್ರಕರಣಗಳಲ್ಲಿ ಕೇರಳದಲ್ಲಿ ಅತಿ ಹೆಚ್ಚು 78 ಜನರಲ್ಲಿ ಸೋಂಕಿತರು ಕಾಣಿಸಿಕೊಂಡಿದ್ದರೆ, ಗುಜರಾತ್ 34 ಜನರಲ್ಲಿ ಜೆಎನ್ ಇರುವುದು ದೃಢಪಟ್ಟಿದೆ.

ಜೆಎನ್ 1 ಪ್ರಕರಣ: ಕೇರಳ (78), ಗುಜರಾತ್ (34), ಗೋವಾ (18), ಕರ್ನಾಟಕ (8), ಮಹಾರಾಷ್ಟ್ರ (7), ರಾಜಸ್ಥಾನ (5), ತಮಿಳುನಾಡು (4), ತೆಲಂಗಾಣ (2) ಮತ್ತು ದೆಹಲಿಯಲ್ಲಿ ಒಬ್ಬರಲ್ಲಿ ಜೆಎನ್ 1 ಸೋಂಕು ಪತ್ತೆಯಾಗಿದೆ.

ಆರು ಸಾವು: ಜೆಎನ್ 1 ಸೋಂಕಿನಿಂದ ಬಳಲುತ್ತಿದ್ದ ಮಹಾರಾಷ್ಟ್ರದ ಇಬ್ಬರು ಮೃತಪಟ್ಟರೆ, ದೆಹಲಿ, ಕರ್ನಾಟಕ, ಕೇರಳ ಮತ್ತು ಪಶ್ಚಿಮ ಬಂಗಾಳದಲ್ಲಿ ತಲಾ ಒಬ್ಬರು ಸೇರಿದಂತೆ ಆರು ಜನರು ಮೃತಪಟ್ಟಿರುವ ಕುರಿತು ವರದಿಯಲ್ಲಿ ತಿಳಿಸಲಾಗಿದೆ.

ರಾಜ್ಯದಲ್ಲಿ 8,350 ಜನರ ಪರೀಕ್ಷೆ: ರಾಜ್ಯದಲ್ಲಿಯೂ ಗುರುವಾರ ಕೋವಿಡ್ ಜೆಎನ್ 1ಗೆ ಸಂಬಂಧಿಸಿದ 8350 ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಶೇ 1.89ರಷ್ಟು ಜೆಎನ್ 1 ಸೋಂಕು ಪ್ರಮಾಣ ಏರಿಕೆಯಾಗಿದೆ. 14 ಜನ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, 40 ಸೋಂಕಿತರು ಸಾಮಾನ್ಯ ಹಾಸಿಗೆಯಲ್ಲಿ ಚಿಕಿತ್ಸೆ ತೆಗೆದುಕೊಳ್ಳುತ್ತಿದ್ದಾರೆ. ಸೋಂಕಿತರಲ್ಲಿ 69 ಜನರು ಚೇತರಿಸಿಕೊಂಡಿದ್ದಾರೆ. 19 ಜಿಲ್ಲೆಗಳಲ್ಲಿ ಹೊಸದಾಗಿ ಕೋವಿಡ್ ಜೆಎನ್1 ಪ್ರಕರಣಗಳು ದೃಢಪಟ್ಟಿವೆ.

ಇದನ್ನೂಓದಿ: ದೇಶದಲ್ಲಿ ಹರಡುತ್ತಿರುವ ಜೆಎನ್​.1 ತಳಿ; ಬೂಸ್ಟರ್ ಲಸಿಕೆ​ ಅಗತ್ಯವಿಲ್ಲ ಎಂದ ತಜ್ಞರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.