ನವದೆಹಲಿ: ಕಳೆದ 24 ಗಂಟೆಗಳಲ್ಲಿ ದೇಶದಾದ್ಯಂತ 3,157 ಹೊಸ ಕೋವಿಡ್-19 ಪ್ರಕರಣಗಳು ದೃಢಪಟ್ಟಿವೆ. ಒಟ್ಟು ಪ್ರಕರಣಗಳ ಸಂಖ್ಯೆ 4,30,82,345ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 19,500 ಇದೆ. ಕಳೆದ 24 ಗಂಟೆಯಲ್ಲಿ 26 ಮಂದಿ ಮೃತಪಟ್ಟಿದ್ದು, ಮೃತರ ಸಂಖ್ಯೆ 5,23,869ಕ್ಕೆ ಏರಿಕೆಯಾಗಿದೆ.
ದೇಶದಲ್ಲಿ ಚೇತರಿಕೆ ಪ್ರಮಾಣ ಶೇ. 98.74 ರಷ್ಟಿದೆ. ನಿನ್ನೆ 2,723 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದು, ಈ ವರೆಗೆ 4,25,38,976 ಮಂದಿ ಗುಣಮುಖರಾಗಿದ್ದಾರೆ. ದೈನಂದಿನ ಪಾಸಿಟಿವಿಟಿ ದರ ಶೇಕಡಾ 0.71 ರಿಂದ (ಭಾನುವಾರ) ಶೇಕಡಾ 1.07 ಕ್ಕೆ (ಸೋಮವಾರ) ಏರಿಕೆಯಾಗಿದೆೆ. ಸಾಪ್ತಾಹಿಕ ಪಾಸಿಟಿವಿಟಿ ದರ ದರ ಶೇ.0.68 ರಿಂದ (ಭಾನುವಾರ) ಶೇ.0.70 ಕ್ಕೆ (ಸೋಮವಾರ) ಏರಿಕೆಯಾಗಿದೆ.
ಕಳೆದ 24 ಗಂಟೆಗಳಲ್ಲಿ 2,95,588 ಕೋವಿಡ್-19 ಪರೀಕ್ಷೆಗಳನ್ನು ನಡೆಸಲಾಗಿದ್ದು, ಒಟ್ಟು ಪರೀಕ್ಷೆಗಳ ಸಂಖ್ಯೆ 83.82 ಕೋಟಿಗೆ ಏರಿದೆ. ರಾಷ್ಟ್ರವ್ಯಾಪಿ ವ್ಯಾಕ್ಸಿನೇಷನ್ ಡ್ರೈವ್ ಅಡಿ ನಿರ್ವಹಿಸಲಾದ ಒಟ್ಟು ಲಸಿಕೆಯ ಡೋಸ್ಗಳ ಸಂಖ್ಯೆ 189.17 ಕೋಟಿ ಆಗಿದೆ.
-
India records 3,157 new COVID19 cases today; Active caseload at 19,500 pic.twitter.com/CWfFIq2KJY
— ANI (@ANI) May 2, 2022 " class="align-text-top noRightClick twitterSection" data="
">India records 3,157 new COVID19 cases today; Active caseload at 19,500 pic.twitter.com/CWfFIq2KJY
— ANI (@ANI) May 2, 2022India records 3,157 new COVID19 cases today; Active caseload at 19,500 pic.twitter.com/CWfFIq2KJY
— ANI (@ANI) May 2, 2022
ಜಾಗತಿಕ ಕೋವಿಡ್ ವರದಿ: ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ಪ್ರಕಾರ ಜಗತ್ತಿನಾದ್ಯಂತ ಒಟ್ಟು ಪತ್ತೆಯಾದ ಪ್ರಕರಣಗಳ ಸಂಖ್ಯೆ 513.8 ಮಿಲಿಯನ್‌ಗೆ ಏರಿದೆ. 6.23 ಮಿಲಿಯನ್‌ಗಿಂತಲೂ ಹೆಚ್ಚು ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ವ್ಯಾಕ್ಸಿನೇಷನ್ 11.31 ಬಿಲಿಯನ್. ವಿಶ್ವದ ಅತಿ ಹೆಚ್ಚು ಪ್ರಕರಣಗಳು ಮತ್ತು ಸಾವು (ಕ್ರಮವಾಗಿ 81,365,218 ಮತ್ತು 993,733 ರಲ್ಲಿ) ಅಮೆರಿಕದಲ್ಲಿ ವರದಿಯಾಗಿದೆ. ಭಾರತ 43,079,188 ಪ್ರಕರಣಗಳೊಂದಿಗೆ ಎರಡನೇ ಸ್ಥಾನದಲ್ಲಿದೆ.
10 ಮಿಲಿಯನ್‌ಗಿಂತಲೂ ಹೆಚ್ಚು ಪ್ರಕರಣಗಳನ್ನು ಹೊಂದಿರುವ ಇತರ ದೇಶಗಳೆಂದರೆ:
- ಬ್ರೆಜಿಲ್-30,454,499
- ಫ್ರಾನ್ಸ್- 28,872,621
- ಜರ್ಮನಿ- 24,809,785
- ಯುಕೆ- 22,214,004
- ರಷ್ಯಾ- 17,924,145
- ದಕ್ಷಿಣ ಕೊರಿಯಾ-17,295,733
ಇದನ್ನೂ ಓದಿ: ದೇಶದಲ್ಲಿ 3,324 ಹೊಸ ಕೋವಿಡ್ ಪ್ರಕರಣ ಪತ್ತೆ, 40 ಮಂದಿ ಸಾವು