ನವದೆಹಲಿ: ಭಾರತದಲ್ಲಿ ಹೊಸದಾಗಿ 42,766 ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 3.29 ಕೋಟಿಗೆ ಏರಿಕೆಯಾಗಿದೆ. ದೇಶದಲ್ಲಿ ಚೇತರಿಕೆ ಪ್ರಮಾಣ ಶೇಕಡಾ 97.42 ರಷ್ಟಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ.
ಕೇರಳದಲ್ಲಿ ಅಧಿಕ ಕೇಸ್ಗಳು ಪತ್ತೆ
ಹೊಸ ಪ್ರಕರಣಗಳ ಪೈಕಿ 29,682 ಕೇಸ್ಗಳು ಕೇರಳವೊಂದರಲ್ಲೇ ಪತ್ತೆಯಾಗಿವೆ. ಅಲ್ಲದೆ, ರಾಜ್ಯದಲ್ಲಿ 142 ಮಂದಿ ವೈರಸ್ಗೆ ಬಲಿಯಾಗಿದ್ದಾರೆ. ದೇಶದಲ್ಲಿ ನಿನ್ನೆ 308 ಮಂದಿ ಸೋಂಕಿಗೆ ಬಲಿಯಾಗಿದ್ದು, ಮೃತಪಟ್ಟವರ ಸಂಖ್ಯೆ 4,40,533 ಕ್ಕೆ ಏರಿದೆ. ಸದ್ಯ 4,10,048 ಆ್ಯಕ್ಟಿವ್ ಕೇಸ್ಗಳಿವೆ.
53 ಕೋಟಿಗೂ ಅಧಿಕ ಜನರ ತಪಾಸಣೆ
ಸೆಪ್ಟೆಂಬರ್ 4 ರಂದು 17,47,476 ಸ್ಯಾಂಪಲ್ಗಳನ್ನು ಟೆಸ್ಟ್ ಮಾಡಲಾಗಿದೆ. ಈವರೆಗೆ 53,00,58,218 ಮಾದರಿಗಳನ್ನು ತಪಾಸಣೆ ಮಾಡಲಾಗಿದೆ ಎಂದು ಐಸಿಎಂಆರ್(ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ) ತಿಳಿಸಿದೆ.
66 ಕೋಟಿ ಲಸಿಕೆ ಡೋಸ್ಗಳ ಪೂರೈಕೆ
ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಈವರೆಗೆ 66.8 ಕೋಟಿಗೂ ಅಧಿಕ ಲಸಿಕೆ ಡೋಸ್ಗಳನ್ನು ಪೂರೈಸಲಾಗಿದ್ದು, 1.53 ಕೋಟಿ ಡೋಸ್ಗಳು ಪೂರೈಕೆ ಹಂತದಲ್ಲಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಅಲ್ಲದೆ, ರಾಜ್ಯ ಮತ್ತು ಕೇಂದ್ರಾಳಿತ ಪ್ರದೇಶಗಳ ಬಳಿ 4.37 ಕೋಟಿಗೂ ಅಧಿಕ ಡೋಸ್ಗಳು ಲಭ್ಯವಿದೆ ಅಂತಾ ಹೇಳಿದೆ.
ಇದನ್ನೂ ಓದಿ: ಕೇರಳದಲ್ಲಿ ಮತ್ತೆ ಕಾಣಿಸಿಕೊಂಡ ನಿಫಾ.. ವೈರಸ್ಗೆ 12 ವರ್ಷದ ಬಾಲಕ ಬಲಿ