ನವದೆಹಲಿ: ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 16,678 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ಕಳೆದ 24 ಗಂಟೆಯೊಳಗೆ 26 ಮಂದಿ ಸೋಂಕಿಗೆ ಬಲಿಯಾಗಿದ್ದು, ಒಟ್ಟು ಸಾವಿನ ಸಂಖ್ಯೆಯನ್ನು 5,25,428ಕ್ಕೆ ಏರಿಕೆಯಾಗಿದೆ. ಭಾನುವಾರಕ್ಕೆ ಹೋಲಿಸಿದರೆ, ಶೇ 8ರಷ್ಟು ಕಡಿಮೆ ಪ್ರಕರಣಗಳು ದಾಖಲಾಗಿವೆ.
ಸದ್ಯ ದೇಶದಲ್ಲಿ 1,30,713 ಸಕ್ರಿಯ ಪ್ರಕರಣಗಳಿವೆ. ನಿನ್ನೆ ದೇಶದಾದ್ಯಂತ 14,629 ಮಂದಿ ಚೇತರಿಸಿಕೊಂಡು ವಿವಿಧ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. ಈವರೆಗೆ ಸೋಂಕಿನಿಂದ ಚೇತರಿಸಿಕೊಂಡವರ ಸಂಖ್ಯೆ 4,29,83,162ಕ್ಕೆ ಏರಿದೆ. ಸಾವಿನ ಪ್ರಮಾಣ ಶೇ. 1.20 ರಷ್ಟಿದ್ದರೆ, ಚೇತರಿಕೆ ದರ ಶೇ. 98.50 ರಷ್ಟಿದೆ.
-
#COVID19 | India reports 16,678 fresh cases, 14,629 recoveries and 26 deaths in the last 24 hours.
— ANI (@ANI) July 11, 2022 " class="align-text-top noRightClick twitterSection" data="
Active cases 1,30,713
Daily positivity rate 5.99% pic.twitter.com/A2M7HQprWW
">#COVID19 | India reports 16,678 fresh cases, 14,629 recoveries and 26 deaths in the last 24 hours.
— ANI (@ANI) July 11, 2022
Active cases 1,30,713
Daily positivity rate 5.99% pic.twitter.com/A2M7HQprWW#COVID19 | India reports 16,678 fresh cases, 14,629 recoveries and 26 deaths in the last 24 hours.
— ANI (@ANI) July 11, 2022
Active cases 1,30,713
Daily positivity rate 5.99% pic.twitter.com/A2M7HQprWW
ದೈನಂದಿನ ಪಾಸಿಟಿವಿಟಿ ದರ ಶೇ. 5.99 ಮತ್ತು ಸಾಪ್ತಾಹಿಕ ಪಾಸಿಟಿವಿಟಿ ದರ ಶೇ. 4.18 ರಷ್ಟಿದೆ. ರಾಷ್ಟ್ರವ್ಯಾಪಿ ಕೋವಿಡ್-19 ವ್ಯಾಕ್ಸಿನೇಷನ್ ಡ್ರೈವ್ ಅಡಿಯಲ್ಲಿ ಈವರೆಗೆ 198..88 ಕೋಟಿ ಕೋವಿಡ್ ಲಸಿಕೆಗಳನ್ನು ನೀಡಲಾಗಿದೆ.
ಇದನ್ನೂ ಓದಿ: ಜೆಇಇ ಮುಖ್ಯ ಪರೀಕ್ಷೆ ಸೆಷನ್ 1ರ ಫಲಿತಾಂಶ ಪ್ರಕಟ