ETV Bharat / bharat

ದೇಶದಲ್ಲಿ 13 ಸಾವಿರ ಕೋವಿಡ್‌ ಸೋಂಕಿತರು ಪತ್ತೆ: ಚೇತರಿಕೆ ಪ್ರಮಾಣ ಶೇ 98.49 - ಭಾರತದಲ್ಲಿ ಒಮಿಕ್ರಾನ್ ಸೋಂಕಿತರ ಪ್ರಮಾಣ

ದೇಶದಲ್ಲಿ ಈವರೆಗೆ ಒಟ್ಟು 4,22,46,884 ಮಂದಿ ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದಾರೆ. ಅಂದರೆ ಕೋವಿಡ್ ಸೋಂಕಿನಿಂದ ಗುಣಮುಖರಾಗಿರುವವರ ಪ್ರಮಾಣ ಶೇಕಡಾ 98.49ರಷ್ಟಿದೆ ಎಂದು ಆರೋಗ್ಯ ಇಲಾಖೆಯ ಅಂಕಿ-ಅಂಶಗಳು ದೃಢಪಡಿಸಿವೆ.

India corona latest news
India Corona :ದೇಶದಲ್ಲಿ ಕಡಿಮೆ ಕೋವಿಡ್ ಸೋಂಕಿತರು ಪತ್ತೆ
author img

By

Published : Feb 25, 2022, 9:44 AM IST

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ತೀವ್ರಗತಿಯಲ್ಲಿ ಇಳಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ 13,166 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, 302 ಮಂದಿಗೆ ಸೋಂಕಿಗೆ ಬಲಿಯಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.

ದಿನವೊಂದಕ್ಕೆ ಸೋಂಕು ಕಾಣಿಸುವವರ ಪ್ರಮಾಣ ಶೇಕಡಾ 1.28ರಷ್ಟಿದ್ದು, ಈಗ ದೇಶದಲ್ಲಿ ಒಟ್ಟು 1,34,235 ಮಂದಿ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ದೇಶದಲ್ಲಿ ಈವರೆಗೆ ಕಾಣಿಸಿಕೊಂಡಿರುವ ಒಟ್ಟು ಸೋಂಕಿತರಲ್ಲಿ ಶೇಕಡಾ 0.31ರಷ್ಟು ಮಂದಿ ಸಕ್ರಿಯ ಸೋಂಕಿತರಿದ್ದಾರೆ.

ಕಳೆದ 24 ಗಂಟೆಯಲ್ಲಿ 26,988 ಮಂದಿ ಕೋವಿಡ್​​ನಿಂದ ಚೇತರಿಕೆ ಕಂಡಿದ್ದಾರೆ. ಈವರೆಗೆ ಒಟ್ಟು 4,22,46,884 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ಅಂದರೆ ಕೋವಿಡ್ ಸೋಂಕಿನಿಂದ ಗುಣಮುಖರಾಗಿರುವವರ ಪ್ರಮಾಣ ಶೇಕಡಾ 98.49ರಷ್ಟಿದೆ ಎಂದು ಆರೋಗ್ಯ ಇಲಾಖೆಯ ಅಂಕಿ-ಅಂಶಗಳು ದೃಢಪಡಿಸಿವೆ.

ಕೋವಿಡ್​​ನಿಂದ ಈವರೆಗೆ ಸಾವನ್ನಪ್ಪಿದವರ ಸಂಖ್ಯೆ 5,13,226 ಕ್ಕೆ ಏರಿಕೆಯಾಗಿದ್ದು, ಒಟ್ಟು ಸೋಂಕಿತರಲ್ಲಿ ಸೋಂಕಿಗೆ ಬಲಿಯಾದವರ ಪ್ರಮಾಣ ಶೇಕಡಾ 1.20ರಷ್ಟಿದೆ.

ಇದನ್ನೂ ಓದಿ: ಭಾರತದಲ್ಲಿ ಬಾಯಿಯ ಕ್ಯಾನ್ಸರ್​ನಿಂದ ಪ್ರತಿ ಗಂಟೆಗೆ 5 ಜನ ಬಲಿ: ಇದಕ್ಕೆ ಕಾರಣ ಹೀಗಿದೆ..

ಟೆಸ್ಟಿಂಗ್ ಮತ್ತು ವ್ಯಾಕ್ಸಿನೇಷನ್​: ಈವರೆಗೆ ಸುಮಾರು 76,35,69,165 ಮಂದಿಗೆ ಸೋಂಕು ಪರೀಕ್ಷೆ ಮಾಡಲಾಗಿದೆ. ಗುರುವಾರ ಒಂದೇ ದಿನ 11,55,147 ಮಂದಿಗೆ ಸೋಂಕು ಪರೀಕ್ಷೆ ಮಾಡಲಾಗಿದೆ ಎಂದು ಇಂಡಿಯನ್ ಇನ್ಸ್​ಟಿಟ್ಯೂಟ್ ಆಫ್ ಮೆಡಿಕಲ್ ರಿಸರ್ಚ್​ (ಐಸಿಎಂಆರ್​) ಮಾಹಿತಿ ನೀಡಿದೆ.

ಈವರೆಗೆ ಸುಮಾರು 1,76,86,89,266 ಕೋಟಿ ಡೋಸ್​ ವ್ಯಾಕ್ಸಿನೇಷನ್ ನೀಡಲಾಗಿದೆ. ಗುರುವಾರ ಒಂದೇ ದಿನದಲ್ಲಿ 32,04,426 ಮಂದಿಗೆ ಲಸಿಕೆ ನೀಡಲಾಗಿದೆ ಎಂದು ಆರೋಗ್ಯ ಇಲಾಖೆ ಹೇಳಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.