ನವದೆಹಲಿ: ಪೂರ್ವ ಲಡಾಖ್ ಗಡಿ ಸಂಘರ್ಷದ ವಿಚಾರವಾಗಿ ಭಾರತ-ಚೀನಾ ಇಂದು ಹನ್ನೆರಡನೇ ಸುತ್ತಿನ ಕಾರ್ಪ್ಸ್ ಕಮಾಂಡರ್ ಮಟ್ಟದ ಮಾತುಕತೆ ನಡೆಸಲಿವೆ ಎಂದು ಸೇನಾ ಮೂಲಗಳು ತಿಳಿಸಿವೆ. ನಿರಂತರ ಮಾತುಕತೆಯಿಂದ ಪಾಂಗಾಂಗ್ ಸರೋವರದಿಂದ ಉಭಯ ಸೇನೆಗಳು ಹಿಂದೆ ಸರಿದಿವೆ. ಕಳೆದ ವರ್ಷ ಲಡಾಖ್ ಗಡಿಯಲ್ಲಿ ಚೀನಾದ ಆಕ್ರಮಣ ನಂತರ ಪರಿಸ್ಥಿತಿ ಉದ್ವಿಗ್ನಗೊಂಡಿತ್ತು.
ಇಂದು ಬೆಳಗ್ಗೆ 10.30 ಕ್ಕೆ ಭಾರತ-ಚೀನಾ ನಡುವಿನ 12 ನೇ ಕಾರ್ಪ್ಸ್ ಕಮಾಂಡರ್ ಮಟ್ಟದ ಮಾತುಕತೆಯು ಮೊಲ್ಡೊದಲ್ಲಿ ನಡೆಯಲಿದೆ. ಘರ್ಷಣೆಯ ಕೇಂದ್ರ ಬಿಂದುಗಳಾಗಿರುವ ಗೊಗ್ರಾ ಹೈಟ್ಸ್ ಮತ್ತು ಹಾಟ್ ಸ್ಟ್ರಿಂಗ್ಸ್ ಪ್ರದೇಶಗಳಿಂದಲೂ ಸೇನೆ ಹಿಂದೆ ಸರಿಯುವ ಕುರಿತು ಚರ್ಚೆ ನಡೆಯಲಿದೆ.
ಇದನ್ನೂ ಓದಿ: ಪಾಕಿಸ್ತಾನ - ಚೀನಾ ಸಂಬಂಧ ಸದೃಢವಾಗಿದೆ: ಸೇನಾ ಮುಖ್ಯಸ್ಥ ಬಜ್ವಾ ಬಣ್ಣನೆ
ಉಭಯ ದೇಶಗಳು ಸುಮಾರು ಒಂದು ವರ್ಷದಿಂದ ಮಿಲಿಟರಿ ಘರ್ಷಣೆಯಲ್ಲಿ ತೊಡಗಿದ್ದವು. ಮಿಲಿಟರಿ-ರಾಜಕೀಯ ಮಟ್ಟದಲ್ಲಿ ಮಾತುಕತೆ ನಡೆಸಿದ ಬಳಿಕ ಪಾಂಗಾಂಗ್ ಸರೋವರದಿಂದ ಉಭಯ ಸೇನೆಗಳು ಹಿಂದೆ ಸರಿದಿದ್ದವು.