ನವದೆಹಲಿ: ಗಡಿ ವಿವಾದ ಬಗೆಹರಿಸಲು ಪೂರ್ವ ಲಡಾಖ್‌ನ ಚುಶುಲ್‌ನಲ್ಲಿ ಭಾರತ ಮತ್ತು ಚೀನಾ ನಡುವಿನ ಮಿಲಿಟರಿ ಮಾತುಕತೆ ಸ್ಥಗಿತಗೊಂಡಿದೆ. ಆದರೆ ಶಾಂತಿಯುತ ಇತ್ಯರ್ಥಕ್ಕೆ ಸಂವಾದವನ್ನು ಮುಂದುವರಿಸಲು ಉಭಯ ದೇಶಗಳು ಒಪ್ಪಿಕೊಂಡಿವೆ ಎಂದು ರಕ್ಷಣಾ ಸಚಿವಾಲಯ ಮಾಹಿತಿ ನೀಡಿದೆ.
ಮಿಲಿಟರಿ ಮತ್ತು ರಾಜತಾಂತ್ರಿಕ ಮಾರ್ಗಗಳ ಮೂಲಕ ಸಂವಾದ ಮತ್ತು ಸಂವಹನವನ್ನು ಮುಂದುವರೆಸಲು, ಸಮಸ್ಯೆಗಳ ಇತ್ಯರ್ಥಕ್ಕೆ ಮುಂದಾಗಲು, ಗಡಿ ಪ್ರದೇಶಗಳಲ್ಲಿ ಜಂಟಿಯಾಗಿ ಶಾಂತಿಯನ್ನು ಕಾಪಾಡಿಕೊಳ್ಳಲು ಉಭಯ ದೇಶಗಳು ಸಮ್ಮತಿಸಿವೆ ಎಂದು ರಕ್ಷಣಾ ಸಚಿವಾಲಯ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
"ಭಾರತ-ಚೀನಾ ಗಡಿ ಪ್ರದೇಶಗಳ ಪಶ್ಚಿಮ ವಲಯದಲ್ಲಿನ ವಾಸ್ತವಿಕ ನಿಯಂತ್ರಣ ರೇಖೆಯ ಉದ್ದಕ್ಕೂ ನಿಷ್ಕ್ರಿಯಗೊಳಿಸುವ ಬಗ್ಗೆ ಉಭಯ ದೇಶಗಳು ಆಳವಾದ ಮತ್ತು ರಚನಾತ್ಮಕ ಅಭಿಪ್ರಾಯಗಳನ್ನು ಹೊಂದಿವೆ" ಎಂದು ಸಚಿವಾಲಯ ಹೇಳಿದೆ.
ಉಭಯ ದೇಶಗಳು, ಎರಡೂ ದೇಶದ ನಾಯಕರು ಒಪ್ಪಿದ ಪ್ರಮುಖ ನಿರ್ಣಯಗಳನ್ನು ಶ್ರದ್ಧೆಯಿಂದ ಕಾರ್ಯಗತಗೊಳಿಸಲು ಒಪ್ಪಿಕೊಂಡಿವೆ. ಶೀಘ್ರದಲ್ಲೇ ಮತ್ತೊಂದು ಸುತ್ತಿನ ಸಭೆ ನಡೆಸಲು ಅವರು ಒಪ್ಪಿಕೊಂಡಿದ್ದಾರೆ" ಎಂದು ಸಚಿವಾಲಯ ವಿವರಿಸಿದೆ.
ಉಭಯ ದೇಶಗಳ ನಡುವಿನ 8ನೇ ಕಾರ್ಪ್ಸ್ ಕಮಾಂಡರ್ ಮಟ್ಟದ ಮಾತುಕತೆ ಶುಕ್ರವಾರ ಬೆಳಗ್ಗೆ 9.30 ಕ್ಕೆ ಪ್ರಾರಂಭವಾಗಿ ಸಂಜೆ 7 ಗಂಟೆಗೆ ಕೊನೆಗೊಂಡಿತ್ತು. ಮೊದಲ ಬಾರಿಗೆ ಲೆಫ್ಟಿನೆಂಟ್ ಜನರಲ್ ಪಿಜಿಕೆ ಮೆನನ್ ಅವರು ಭಾರತೀಯ ಮಿಲಿಟರಿ ಪ್ರತಿನಿಧಿಗಳ ನೇತೃತ್ವ ವಹಿಸಿದ್ದರು.