ನವದಹೆಲಿ: ಕೋವಿಡ್ ವೈರಸ್ ಜಗತ್ತಿನ ಎಲ್ಲಾ ದೇಶಗಳ ಮೇಲೆ ಪರಿಣಾಮ ಬೀರಿದೆ. ಈವರೆಗೆ ಭಾರತ 90 ದೇಶಗಳಿಗೆ ಕೋವಿಡ್ -19 ಲಸಿಕೆಗಳನ್ನು ಪೂರೈಸಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಹೇಳಿದ್ದಾರೆ.
ದೆಹಲಿಯಲ್ಲಿ ನಡೆಯುತ್ತಿರುವ ಭಾರತ-ಮಧ್ಯ ಏಷ್ಯಾದ 3ನೇ ಶೃಂಗಸಭೆಯಲ್ಲಿ ಮಾತನಾಡಿದ ಸಚಿವರು, ವೈರಸ್ ಸಮಯದಲ್ಲಿ ಭಾರತದೊಂದಿಗಿನ ಸಂಬಂಧವನ್ನು ಸುಧಾರಿಸಲು ಮತ್ತು ಭಾರತೀಯ ವಿದ್ಯಾರ್ಥಿಗಳ ಕಲ್ಯಾಣಕ್ಕಾಗಿ ಇತರೆ ದೇಶಗಳು ಒಟ್ಟಾಗಿ ಕೆಲಸ ಮಾಡಬೇಕೆಂದು ಕರೆ ನೀಡಿದರು.
ನಾವು ಅಫ್ಘಾನಿಸ್ತಾನದೊಂದಿಗೆ ಬಲವಾದ ಸಂಬಂಧವನ್ನು ಹೊಂದಿದ್ದೇವೆ. ಆ ದೇಶದ ಬಗ್ಗೆ ಹೆಚ್ಚಿನ ಕಾಳಜಿ ಹೊಂದಿದ್ದು, ಭಯೋತ್ಪಾದನೆ, ಮಾದಕವಸ್ತು ಕಳ್ಳಸಾಗಣೆ, ಮಹಿಳೆಯರು, ಮಕ್ಕಳು ಹಾಗೂ ಅಲ್ಪಸಂಖ್ಯಾತರ ಹಕ್ಕುಗಳ ರಕ್ಷಣೆಗೆ ಬದ್ಧರಾಗಿರುವುದಾಗಿ ಸಚಿವ ಜೈಶಂಕರ್ ಹೇಳಿದ್ದಾರೆ.
ಕಿರ್ಗಿಸ್ತಾನ್ ವಿದೇಶಾಂಗ ಸಚಿವ ರುಸ್ಲಾನ್ ಕಜಖ್ಬೋವ್, ತಜಿಕಿಸ್ತಾನ್ ವಿದೇಶಾಂಗ ಸಚಿವ ಸಿರೋಜಿದ್ದಿನ್ ಮುಹ್ರಿದ್ದೀನ್ ಹಾಗೂ ಕಜಿಕಿಸ್ತಾನ್ ಸಚಿವ ಮುಖ್ತಾರ್ ತಿಲಿಬಾರ್ದಿ ಸೇರಿದಂತೆ ಹಲವು ದೇಶಗಳ ಪ್ರತಿನಿಧಿಗಳು ಈ ಶೃಂಗ ಸಭೆಯಲ್ಲಿ ಭಾಗವಹಿಸಿದ್ದರು.
ಇದನ್ನೂ ಓದಿ: Omicron: ಭಾರತದಲ್ಲೂ ಪ್ರತಿದಿನ 14 ಲಕ್ಷ ಒಮಿಕ್ರಾನ್ ಕೇಸ್... ಕೇಂದ್ರ ಸರ್ಕಾರದ ಎಚ್ಚರಿಕೆ ಗಂಟೆ