ನವದೆಹಲಿ: ಪ್ರತಿಪಕ್ಷಗಳ 'ಇಂಡಿಯಾ' ಮೈತ್ರಿಕೂಟದಲ್ಲಿ ಮಂಗಳವಾರ ಮಹತ್ವದ ಬೆಳವಣಿಗೆ ನಡೆದಿದೆ. ಪ್ರಧಾನಿ ಅಭ್ಯರ್ಥಿಯಾಗಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಹೆಸರನ್ನು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಪ್ರಸ್ತಾಪಿಸಿದ್ದಾರೆ. ಆದರೆ, ವರಿಷ್ಠ ನಾಯಕ ಖರ್ಗೆ, ಮೊದಲು ಚುನಾವಣೆಯಲ್ಲಿ ಗೆಲ್ಲುವುದು ಮುಖ್ಯವಾಗಿದೆ. ಉಳಿದೆಲ್ಲವನ್ನೂ ನಂತರ ನಿರ್ಧರಿಸಬಹುದು ಎಂದು ಹೇಳಿದ್ದಾರೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇಂದು ಇಂಡಿಯಾ ಮೈತ್ರಿಕೂಟದ ನಾಲ್ಕನೇ ಸಭೆ ಜರುಗಿದ್ದು. 28 ಪ್ರತಿಪಕ್ಷಗಳ ನಾಯಕರು ಭಾಗವಹಿಸಿದ್ದರು. ಈ ವೇಳೆ, 'ಇಂಡಿಯಾ' ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿಯನ್ನಾಗಿ ಕಾಂಗ್ರೆಸ್ ಅಧ್ಯಕ್ಷ ಖರ್ಗೆ ಅವರ ಹೆಸರನ್ನು ತೃಣಮೂಲ ಕಾಂಗ್ರೆಸ್ ಅಧಿನಾಯಕಿ ಮಮತಾ ಬ್ಯಾನರ್ಜಿ ಹಾಗೂ ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಪ್ರಸ್ತಾಪಿಸಿದ್ದಾರೆ. ಆದರೆ, ಈ ಕುರಿತು ಅಂತಿಮ ಯಾವುದೇ ನಿರ್ಧಾರವಾಗಿಲ್ಲ ಎಂದು ಮೂಲಗಳು ಹೇಳಿವೆ.
-
#WATCH | After the INDIA Alliance meeting, VCK MP Thol. Thirumavalavan says, "...Mamata Banerjee and Arvind Kejriwal proposed that Mallikarjun Kharge must be the coordinator of this INDIA team and we will project him as the Prime Minister in the forthcoming elections. But Kharge… pic.twitter.com/OZUYnIqXvC
— ANI (@ANI) December 19, 2023 " class="align-text-top noRightClick twitterSection" data="
">#WATCH | After the INDIA Alliance meeting, VCK MP Thol. Thirumavalavan says, "...Mamata Banerjee and Arvind Kejriwal proposed that Mallikarjun Kharge must be the coordinator of this INDIA team and we will project him as the Prime Minister in the forthcoming elections. But Kharge… pic.twitter.com/OZUYnIqXvC
— ANI (@ANI) December 19, 2023#WATCH | After the INDIA Alliance meeting, VCK MP Thol. Thirumavalavan says, "...Mamata Banerjee and Arvind Kejriwal proposed that Mallikarjun Kharge must be the coordinator of this INDIA team and we will project him as the Prime Minister in the forthcoming elections. But Kharge… pic.twitter.com/OZUYnIqXvC
— ANI (@ANI) December 19, 2023
ಮತ್ತೊಂದೆಡೆ, ದೇಶದ ಮೊದಲ ದಲಿತ ಪ್ರಧಾನಿಯಾಗುವ ನಿಟ್ಟಿನಲ್ಲಿ ತಮ್ಮ ಹೆಸರನ್ನು ಪ್ರಸ್ತಾಪಕ್ಕೆ ಪುಷ್ಟಿ ನೀಡುವಂತೆ ಹಾಗೂ ಚುನಾವಣೆ ಗೆಲ್ಲುವುದೇ ತಮ್ಮ ಮೈತ್ರಿಕೂಟದ ಗುರಿಯಾಗಬೇಕೆಂಬ ಪ್ರತಿಪಾದನೆಯನ್ನು ಖರ್ಗೆ ಮಾಡಿದ್ದಾರೆ. ಸಭೆ ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ವರಿಷ್ಠ ನಾಯಕ ಖರ್ಗೆ, ನಮ್ಮ ಮೊದಲ ಆದ್ಯತೆ ಚುನಾವಣೆ ಗೆಲ್ಲುವುದು, ಪ್ರಧಾನಿ ಹೆಸರನ್ನು ನಿರ್ಧರಿಸುವ ಮೊದಲು ನಾವು ಗೆಲ್ಲುವ ಬಗ್ಗೆ ಯೋಚಿಸುತ್ತೇವೆ. ಸಂಸದರು ಇಲ್ಲದಿದ್ದರೆ ಪ್ರಧಾನಿ ಬಗ್ಗೆ ಮಾತನಾಡುವುದರಲ್ಲಿ ಅರ್ಥವಿಲ್ಲ. ಮೊದಲು ಬಹುಮತ ಗಳಿಸಲು ಒಗ್ಗಟ್ಟಿನಿಂದ ಕೆಲಸ ಮಾಡಬೇಕಿದೆ ಎಂದು ಸ್ಪಷ್ಟಪಡಿಸಿದ್ದಾರೆ.
-
#WATCH | After the conclusion of the INDIA Alliance meeting, Congress president Mallikarjun Kharge says" Our first priority is to win (elections). We will think about winning before deciding the name of the Prime Minister. If there will be no MPs, it makes no sense talking about… pic.twitter.com/11rf9YoCOz
— ANI (@ANI) December 19, 2023 " class="align-text-top noRightClick twitterSection" data="
">#WATCH | After the conclusion of the INDIA Alliance meeting, Congress president Mallikarjun Kharge says" Our first priority is to win (elections). We will think about winning before deciding the name of the Prime Minister. If there will be no MPs, it makes no sense talking about… pic.twitter.com/11rf9YoCOz
— ANI (@ANI) December 19, 2023#WATCH | After the conclusion of the INDIA Alliance meeting, Congress president Mallikarjun Kharge says" Our first priority is to win (elections). We will think about winning before deciding the name of the Prime Minister. If there will be no MPs, it makes no sense talking about… pic.twitter.com/11rf9YoCOz
— ANI (@ANI) December 19, 2023
ಇದೇ ವೇಳೆ, ಸುದ್ದಿಗಾರರೊಂದಿಗೆ ಮಾತನಾಡಿದ ವಿಸಿಕೆ ಸಂಸದ ತಿರುಮಾವಲವನ್, ಮಮತಾ ಬ್ಯಾನರ್ಜಿ ಮತ್ತು ಅರವಿಂದ್ ಕೇಜ್ರಿವಾಲ್ ಅವರು 'ಇಂಡಿಯಾ' ಒಕ್ಕೂಟದ ಸಂಯೋಜಕರಾಗಿ ಮಲ್ಲಿಕಾರ್ಜುನ ಖರ್ಗೆ ಅವರು ಇರಬೇಕು. ಮುಂಬರುವ ಚುನಾವಣೆಯಲ್ಲಿ ನಾವು ಅವರನ್ನು ಪ್ರಧಾನ ಮಂತ್ರಿಯಾಗಿ ಬಿಂಬಿಸುತ್ತೇವೆ ಎಂದು ಪ್ರಸ್ತಾಪಿಸಿದರು. ಆದರೆ, ಖರ್ಗೆಯವರು ಇದನ್ನು ಸಾರಾಸಗಟಾಗಿ ತಿರಸ್ಕರಿಸಿದರು. ಅಲ್ಲದೇ, ಈ ಸಲಹೆಯ ಅಗತ್ಯವಿಲ್ಲ, ಚುನಾವಣೆಯ ನಂತರವೇ ನಾವು ಪ್ರಧಾನಿ ಯಾರೆಂದು ನಿರ್ಧರಿಸಬಹುದು ಎಂದು ಖರ್ಗೆ ಹೇಳಿದರು ಎಂಬುವುದಾಗಿ ಮಾಹಿತಿ ನೀಡಿದರು.
ಬಿಹಾರದಲ್ಲಿ ನಿತೀಶ್ ಕುಮಾರ್ ಪೋಸ್ಟರ್: ಮತ್ತೊಂದೆಡೆ, ಇಂದಿನ 'ಇಂಡಿಯಾ' ಒಕ್ಕೂಟದ ಸಭೆಗೂ ಮುನ್ನವೇ ಬಿಹಾರದಲ್ಲಿ ಸಿಎಂ ನಿತೀಶ್ ಕುಮಾರ್ ಅವರನ್ನು ಪ್ರಧಾನಿಯನ್ನಾಗಿ ಸೂಚಿಸುವ ಪೋಸ್ಟರ್‌ಗಳನ್ನು ಹಾಕಲಾಗಿತ್ತು.
ಆದರೆ, ಇಂಡಿಯಾ ಸಭೆಯಲ್ಲಿ ಮಮತಾ ಬ್ಯಾನರ್ಜಿ ಮತ್ತು ಕೇಜ್ರಿವಾಲ್ ಮಲ್ಲಿಕಾರ್ಜುನ್ ಖರ್ಗೆ ಅವರ ಹೆಸರು ಪ್ರಸ್ತಾಪ ಮಾಡುವ ಮೂಲಕ ಹೊಸ ದಾಳ ಉರುಳಿಸಿದ್ದಾರೆ. ವಿಶೇಷ ಎಂದರೆ ಮಿತ್ರಪಕ್ಷಗಳನ್ನು ಒಟ್ಟುಗೂಡಿಸಲು ಮೊದಲ ಪ್ರಯತ್ನ ಮಾಡಿದ್ದೇ ನಿತೀಶ್ ಕುಮಾರ್.
ಇದನ್ನೂ ಓದಿ: ರಾಜ್ಯಸಭಾ ಸಭಾಪತಿಯಂತೆ ಅಣಕ ಪ್ರದರ್ಶನ ಮಾಡಿದ ಟಿಎಂಸಿ ಸದಸ್ಯ: ಸ್ವೀಕಾರಾರ್ಹವಲ್ಲ ಎಂದ ಧನಕರ್