ನವದೆಹಲಿ : ಜಮ್ಮು ಕಾಶ್ಮೀರದ ಗಡಿ ನಿಯಂತ್ರಣ ರೇಖೆ (ಎಲ್‌ಒಸಿ) ಯಲ್ಲಿ ಕದನ ವಿರಾಮ ಕಾಪಾಡಿಕೊಳ್ಳುವ ಒಪ್ಪಂದದ ಅನುಸಾರವಾಗಿ ಭಾರತ ಮತ್ತು ಪಾಕಿಸ್ತಾನ ಸೇನೆಗಳು ಪೂಂಚ್-ರಾವಲ್ಕೋಟ್ ಕ್ರಾಸಿಂಗ್‌ನಲ್ಲಿ ಬ್ರಿಗೇಡಿಯರ್ ಮಟ್ಟದ ಸಭೆ ನಡೆಸಿದವು.
ಕಳೆದ ತಿಂಗಳು ಭಾರತ ಮತ್ತು ಪಾಕಿಸ್ತಾನ ಸೇನೆಗಳು 2003 ರ ಕದನ ವಿರಾಮ ಒಪ್ಪಂದದ ಕುರಿತು ಮರುಬದ್ದತೆ ಪ್ರದರ್ಶಿಸಿದವು. ಕದನ ವಿರಾಮ ಕಾಪಾಡಿಕೊಳ್ಳುವ ಬಗ್ಗೆ ಉಭಯ ದೇಶಗ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರು ಒಪ್ಪಿಗೆ ಸೂಚಿಸಿದ್ದರು.
ಇದನ್ನೂ ಓದಿ : ಬಾಂಗ್ಲಾ ಸ್ವಾತಂತ್ರ್ಯ ಹೋರಾಟದಲ್ಲಿ ಜೈಲುವಾಸ ಅನುಭವಿಸಿದ್ದೇನೆ : ಪ್ರಧಾನಿ ಮೋದಿ
ಐದಾರು ವರ್ಷಗಳ ಬಳಿಕ ಎಲ್‌ಒಸಿ ಮೌನವಾಗಿದೆ. ಮಾರ್ಚ್ ತಿಂಗಳಲ್ಲಿ ಗಡಿಯಲ್ಲಿ ಯಾವುದೇ ಗುಂಡಿನ ದಾಳಿಗಳು ನಡೆದಿಲ್ಲ ಎಂದು ಸೇನಾ ಮುಖ್ಯಸ್ಥ ಜನರಲ್ ಎಂ.ಎಂ ನರವಾನೆ ಹೇಳಿದ್ದಾರೆ.
ಮಾರ್ಚ್ ಇಡೀ ತಿಂಗಳಲ್ಲಿ, ಒಂದು ಸಣ್ಣ ಘಟನೆ ಹೊರತುಪಡಿಸಿದರೆ ಗಡಿ ನಿಯಂತ್ರಣ ರೇಖೆಯಲ್ಲಿ ಒಂದೇ ಒಂದು ಗುಂಡು ಹಾರಾಟ ನಡೆದಿಲ್ಲ ಎಂದು ತಿಳಿಸಲು ನನಗೆ ಸಂತೋಷವಾಗುತ್ತಿದೆ. ಸುಮಾರು ಐದಾರು ವರ್ಷಗಳಲ್ಲಿ ಮೊದಲ ಬಾರಿಗೆ ಎಲ್‌ಒಸಿ ಮೌನವಾಗಿದೆ. ಇದು ನಿಜವಾಗಿಯೂ ಭವಿಷ್ಯದ ದೃಷ್ಠಿಯಿಂದ ಒಳ್ಳೆಯದು ಎಂದು ಅವರು ತಿಳಿಸಿದ್ದಾರೆ.