ಹೈದರಾಬಾದ್ (ತೆಲಂಗಾಣ): ಹೈದರಾಬಾದ್‌ನಲ್ಲಿ ಸೆಪ್ಟೆಂಬರ್ 25ರಂದು ನಡೆಯಲಿರುವ ಭಾರತ - ಆಸ್ಟ್ರೇಲಿಯಾ ನಡುವಿನ ಮೂರನೇ ಟಿ20 ಪಂದ್ಯದ ಟಿಕೆಟ್ ಖರೀದಿಗೆ ಕ್ರಿಕೆಟ್ ಖರೀದಿಗೆ ಅಭಿಮಾನಿಗಳು ಮುಗಿಬಿದ್ದಿದ್ದಾರೆ. ಇಂದು ಸಿಕಂದರಾಬಾದ್ ಜಿಮ್ಖಾನಾ ಮೈದಾನದಲ್ಲಿ ಟಿಕೆಟ್ಗಾಗಿ ನೂಕುನುಗ್ಗಲು ಹಾಗೂ ಕಾಲ್ತುಳಿತ ಉಂಟಾಗಿದೆ. ಇದರಿಂದ ನಾಲ್ಕಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ.
ಇಂದಿನಿಂದ ಆಫ್ಲೈನ್ನಲ್ಲಿ ಟಿಕೆಟ್ ಮಾರಾಟದ ಬಗ್ಗೆ ಘೋಷಿಸುತ್ತಿದ್ದಂತೆ ಕ್ರಿಕೆಟ್ ಪ್ರೇಮಿಗಳು ಜಿಮ್ಖಾನಾ ಮೈದಾನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಆದರೆ, ಟಿಕೆಟ್ ಖರೀದಿಗೆ ಸಾಕಷ್ಟು ಜನ ಬರುವ ನಿರೀಕ್ಷೆಯಿದ್ದರೂ ಸರಿಯಾದ ವ್ಯವಸ್ಥೆ ಮಾಡಿರಲಿಲ್ಲ ಎಂದು ಹೇಳಲಾಗಿದೆ.
ಹೀಗಾಗಿ ಅಭಿಮಾನಿಗಳಿಂದ ನೂಕುನುಗ್ಗಲು ಉಂಟಾಗಿ ಕಾಲ್ತುಳಿತ ಸಂಭವಿಸಿದೆ. ಈ ಹಿನ್ನಲೆಯಲ್ಲಿ ಪರಿಸ್ಥಿತಿ ಕೈ ಮೀರುತ್ತಿದ್ದಂತೆ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಕೆಲವರು ಪ್ರಜ್ಞೆ ತಪ್ಪಿ ಬಿದ್ದಿದ್ದು, ಇನ್ನು ಕೆಲವರು ಗಾಯಗೊಂಡಿದ್ದು, ಆಸ್ಪತ್ರೆಗೆ ರವಾನಿಸಲಾಗಿದೆ.
ಬಹಳ ದಿನಗಳ ನಂತರ ಕ್ರಿಕೆಟ್ ಪಂದ್ಯ: ಪಾಸ್ ವಿತರಣೆ ವಿಚಾರದಲ್ಲಿ ಹೈದರಾಬಾದ್ ಕ್ರಿಕೆಟ್ ಸಂಸ್ಥೆ ವಿರುದ್ಧ ತೀವ್ರ ಟೀಕೆ ವ್ಯಕ್ತವಾಗಿದೆ. ಕೋವಿಡ್ ಪರಿಸ್ಥಿತಿಯಿಂದಾಗಿ ಹೈದರಾಬಾದ್ ಸೇರಿದಂತೆ ತೆಲಂಗಾಣದ ಅಭಿಮಾನಿಗಳಿಗೆ ಕ್ರಿಕೆಟ್ ಪಂದ್ಯಗಳನ್ನು ವೀಕ್ಷಿಸಲು ಹೆಚ್ಚಿನ ಅವಕಾಶವಿರಲಿಲ್ಲ.
-
#WATCH | Telangana: A stampede broke out at Gymkhana Ground after a huge crowd of cricket fans gathered there to get tickets for #INDvsAUS match, scheduled for 25th Sept at Rajiv Gandhi International Stadium, Hyderabad. Police baton charged to disperse the crowd
— ANI (@ANI) September 22, 2022 " class="align-text-top noRightClick twitterSection" data="
4 people injured pic.twitter.com/J2OiP1DMlH
">#WATCH | Telangana: A stampede broke out at Gymkhana Ground after a huge crowd of cricket fans gathered there to get tickets for #INDvsAUS match, scheduled for 25th Sept at Rajiv Gandhi International Stadium, Hyderabad. Police baton charged to disperse the crowd
— ANI (@ANI) September 22, 2022
4 people injured pic.twitter.com/J2OiP1DMlH#WATCH | Telangana: A stampede broke out at Gymkhana Ground after a huge crowd of cricket fans gathered there to get tickets for #INDvsAUS match, scheduled for 25th Sept at Rajiv Gandhi International Stadium, Hyderabad. Police baton charged to disperse the crowd
— ANI (@ANI) September 22, 2022
4 people injured pic.twitter.com/J2OiP1DMlH
ಹೈದರಾಬಾದ್‌ನಲ್ಲಿ ಐಪಿಎಲ್ ಪಂದ್ಯಗಳನ್ನೂ ಆಯೋಜಿಸಿರಲಿಲ್ಲ. ಈ ಹಿನ್ನಲೆಯಲ್ಲಿ ಬಹಳ ದಿನಗಳ ನಂತರ ಹೈದರಾಬಾದ್‌ನಲ್ಲಿ ಪಂದ್ಯ ನಡೆಯುತ್ತಿದೆ. ಆದರೆ, ಹೈದರಾಬಾದ್ ಕ್ರಿಕೆಟ್ ಸಂಸ್ಥೆ ಈಗ ಅಭಿಮಾನಿಗಳಿಗೆ ಸುಲಭ ಪ್ರಕ್ರಿಯೆಯಲ್ಲಿ ಟಿಕೆಟ್ ನೀಡಲು ಸಂಪೂರ್ಣ ವಿಫಲವಾಗಿದೆ ಎಂದು ಆರೋಪ ಕೇಳಿ ಬಂದಿದೆ.
ಕೇವಲ 2 ಕೌಂಟರ್ ತೆರೆದಿದ್ದ ಎಚ್‌ಸಿಎ: ಹೈದರಾಬಾದ್ ಕ್ರಿಕೆಟ್ ಸಂಸ್ಥೆಯ ಕ್ರಮದ ವಿರುದ್ಧ ಪೊಲೀಸರು ಕೂಡ ಅಸಮಾಧಾನ ಹೊರ ಹಾಕಿದ್ದಾರೆ. ಟಿಕೆಟ್ ಖರೀದಿ ವೇಳೆ ನಡೆದ ಘಟನೆಗೆ ಮುಖ್ಯ ಕಾರಣವೆಂದರೆ ಎಚ್‌ಸಿಎ ಮಾಡಿದ ತಪ್ಪು. ಯಾಕೆಂದರೆ, ಕೇವಲ 2 ಕೌಂಟರ್‌ಗಳನ್ನು ತೆರೆಯಲಾಗಿತ್ತು.
ಅಲ್ಲದೇ, ಈ ವೇಳೆ ಮಳೆ ಕೂಡ ಸುರಿಯಿತು. ಆಗ ಎಲ್ಲರೂ ಒಳಗೆ ಪ್ರವೇಶಿಸಲು ಪ್ರಯತ್ನಿಸಿದರು. ಹೀಗಾಗಿ ನೂಕುನುಗ್ಗಲು ಉಂಟಾಗಿ ಕೆಲವರು ಕೆಳಗಡೆ ಬಿದ್ದಿದ್ದಾರೆ. ಒಟ್ಟಾರೆ ಘಟನೆ ಬಗ್ಗೆ ತನಿಖೆ ನಡಲಾಗುತ್ತಿದೆ ಎಂದು ಹೈದರಾಬಾದ್ನ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ತಿಳಿಸಿದ್ದಾರೆ.
7 ಗಂಟೆ ನಂತರ ಆನ್‌ಲೈನ್ ಟಿಕೆಟ್: ಜಿಮ್ಖಾನಾ ಮೈದಾನದಲ್ಲಿ ಟಿಕೆಟ್ಗಾಗಿ ನೂಕುನುಗ್ಗಲು ಹಾಗೂ ಕಾಲ್ತುಳಿತ ಉಂಟಾದ ಬೆನ್ನಲ್ಲೇ ಹೈದರಾಬಾದ್ ಕ್ರಿಕೆಟ್ ಸಂಸ್ಥೆ (ಎಚ್‌ಸಿಎ) ಎಚ್ಚೆತ್ತುಕೊಂಡಿದೆ. ಇದೀಗ ಇಂದು ಸಂಜೆ 7 ಗಂಟೆಯ ನಂತರ ಆನ್‌ಲೈನ್ ಟಿಕೆಟ್‌ಗಳು ಲಭ್ಯವಿರುತ್ತವೆ ಎಂದು ಎಚ್‌ಸಿಎ ಸಂಘಟಕರು ಘೋಷಿಸಿದ್ದಾರೆ.
ಇನ್ನು, ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಆಸ್ಟ್ರೇಲಿಯಾ ತಂಡ ಈಗಾಗಲೇ 1-0 ಅಂತರದಿಂದ ಮುನ್ನಡೆ ಸಾಧಿಸಿದೆ. ಪಂಜಾಬ್ನಲ್ಲಿ ಮೊಹಾಲಿಯಲ್ಲಿ ಸೆಪ್ಟೆಂಬರ್ 20ರಂದು ನಡೆದ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ವಿರುದ್ಧ ನಾಲ್ಕು ವಿಕೆಟ್ಗಳಿಂದ ಆಸ್ಟ್ರೇಲಿಯಾ ಗೆಲುವು ಸಾಧಿಸಿದೆ. ಸೆಪ್ಟೆಂಬರ್ 23ರಂದು ನಾಗ್ಪುರದಲ್ಲಿ ಎರಡನೇ ಪಂದ್ಯ ಜರುಗಲಿದ್ದು, ಸೆಪ್ಟೆಂಬರ್ 25ರಂದು ಹೈದರಾಬಾದ್‌ನಲ್ಲಿ ನಡೆಯಲಿದೆ.
ಇದನ್ನು ಓದಿ:CPL 2022: ಒಂದೇ ಓವರ್ನಲ್ಲಿ 5 ಸಿಕ್ಸರ್ ಸಿಡಿಸಿದ ಸ್ಮಿತ್: 3 ಓವರ್ಗಳಲ್ಲಿ 74 ರನ್ಗಳಿಸಿದ ತಂಡ!