ETV Bharat / bharat

ಏಷ್ಯಾದ ಅತ್ಯಂತ ಬಲಶಾಲಿ ದೇಶಗಳಲ್ಲಿ ಭಾರತಕ್ಕೆ 4ನೇ ಸ್ಥಾನ.. ಪವರ್ ಇಂಡೆಕ್ಸ್ ವರದಿ

ಲೋವಿ ಇನ್​ಸ್ಟಿಟ್ಯೂಟ್​ ಏಷ್ಯಾ ಪವರ್ ಇಂಡೆಕ್ಸ್-2021 ಏಷ್ಯಾದ ಅತ್ಯಂತ ಶಕ್ತಿಶಾಲಿ ದೇಶಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ಭಾರತ ಏಷ್ಯಾದ 4ನೇ ಅತ್ಯಂತ ಶಕ್ತಿಶಾಲಿ ರಾಷ್ಟ್ರವಾಗಿ ಹೊರಹೊಮ್ಮಿದೆ.

author img

By

Published : Dec 6, 2021, 8:58 PM IST

powerful country
ಏಷ್ಯಾದ ಅತ್ಯಂತ ಬಲಶಾಲಿ ದೇಶ

ನವದೆಹಲಿ: ಲೋವಿ ಇನ್​ಸ್ಟಿಟ್ಯೂಟ್​ ಏಷ್ಯಾ ಪವರ್ ಇಂಡೆಕ್ಸ್-2021 ಏಷ್ಯಾದ ಅತ್ಯಂತ ಶಕ್ತಿಶಾಲಿ ದೇಶಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ಭಾರತ ಏಷ್ಯಾದ 4ನೇ ಅತ್ಯಂತ ಶಕ್ತಿಶಾಲಿ ರಾಷ್ಟ್ರವಾಗಿ ಹೊರಹೊಮ್ಮಿದೆ.

ವರದಿಯು ಭಾರತವನ್ನು ಏಷ್ಯಾದ ಮಧ್ಯಮ ಶಕ್ತಿ ಎಂದು ಹೇಳಿದೆ. ಸಿಡ್ನಿ ಮೂಲದ ಲೋವಿ ಇನ್‌ಸ್ಟಿಟ್ಯೂಟ್ 2021 ರ ಏಷ್ಯಾ ಪವರ್ ಇಂಡೆಕ್ಸ್‌ನಲ್ಲಿ 26 ಶಕ್ತಿಶಾಲಿ ದೇಶಗಳ ಪಟ್ಟಿಯನ್ನು ಪ್ರಕಟಿಸಿದೆ. ದೇಶದ ಸಂಪನ್ಮೂಲ ಮತ್ತು ಪ್ರಭಾವದ ಆಧಾರದ ಮೇಲೆ ಈ ಶ್ರೇಯಾಂಕವನ್ನು ನೀಡಲಾಗಿದೆ.

ಅಮೆರಿಕ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರೆ, ಚೀನಾ ಎರಡನೇ ಸ್ಥಾನ ಪಡೆದುಕೊಂಡಿದೆ. ಬಳಿಕ ಜಪಾನ್, ಭಾರತ, ರಷ್ಯಾ, ಆಸ್ಟ್ರೇಲಿಯಾ, ದಕ್ಷಿಣ ಕೊರಿಯಾ, ಸಿಂಗಪುರ್, ಇಂಡೋನೇಷ್ಯಾ ಮತ್ತು ಥೈಲ್ಯಾಂಡ್ ಸ್ಥಾನ ಪಡೆದುಕೊಂಡಿವೆ.

ಕಳೆದ ವರ್ಷಕ್ಕಿಂತ 2 ಅಂಕ ಕಳೆದುಕೊಂಡ ಭಾರತ

ಭಾರತ ಏಷ್ಯಾದ ನಾಲ್ಕನೇ ಶಕ್ತಿಶಾಲಿ ದೇಶವಾದರೂ 2020 ಕ್ಕೆ ಹೋಲಿಸಿದರೆ 2021ರಲ್ಲಿ 2 ಅಂಕ ಕಳೆದುಕೊಂಡಿದೆ. ಆದಾಗ್ಯೂ, ವರದಿಯು ಭವಿಷ್ಯದ ಸಂಪನ್ಮೂಲ ಮಾಪನದಲ್ಲಿ ಭಾರತವನ್ನು ಅತ್ಯುತ್ತಮ ಪ್ರದರ್ಶನ ನೀಡುವುದರಲ್ಲಿ ಒಂದಾಗಿದೆ ಎಂದು ಪರಿಗಣಿಸಿದೆ.

ಕೊರೊನಾ ವೈರಸ್ ಸಾಂಕ್ರಾಮಿಕ ರೋಗದಿಂದ ಏಷ್ಯಾದ ಮೂರನೇ ಅತಿದೊಡ್ಡ ಆರ್ಥಿಕತೆಯಾದ ಭಾರತ 2030 ರ ಆರ್ಥಿಕ ಪ್ರಗತಿಯಲ್ಲಿ ಕುಂಠಿತ ಉಂಟಾಗಲಿದೆ ಎಂದು ಲೋವಿ ಸಂಸ್ಥೆ ಹೇಳಿದೆ. ರಕ್ಷಣಾ ವಲಯದಲ್ಲಿ ಭಾರತಕ್ಕೆ ಏಳನೇ ಸ್ಥಾನವಿದ್ದರೆ, ಆರ್ಥಿಕ ಪ್ರಗತಿಯಲ್ಲಿ ದೇಶ 8ನೇ ಸ್ಥಾನಕ್ಕೆ ಕುಸಿದಿದೆ.

ಪ್ರಾದೇಶಿಕ ಸ್ವಾಯತ್ತತೆಗೆ ಹೆಚ್ಚಿನ ಆದ್ಯತೆ

ನೇಪಾಳ ಭಾರತದಿಂದ ಹೆಚ್ಚು ಪ್ರಭಾವಿತವಾಗಿರುವ ದೇಶವಾಗಿದೆ. ನವದೆಹಲಿ, ಚೀನಾದ ಮೇಲೆ ಹೆಚ್ಚು ಅವಲಂಬಿತವಾಗಿದೆ. ಇದಲ್ಲದೇ, ಅಮೆರಿಕ ಮತ್ತು ಯುರೋಪಿಯನ್ ಯೂನಿಯನ್ ದೇಶಗಳ ಮೇಲೂ ರಾಜಧಾನಿ ಅವಲಂಬಿತವಾಗಿದೆ. ಭಾರತ ಈ ದೇಶಗಳೊಂದಿಗೆ ಹೆಚ್ಚಿನ ವ್ಯಾಪಾರ ಸಂಬಂಧವನ್ನು ಹೊಂದಿದೆ ಎಂದು ವರದಿ ತಿಳಿಸಿದೆ. ಜಪಾನ್​ ಮತ್ತು ಭಾರತ ಪ್ರಾದೇಶಿಕ ಉತ್ಪಾದನೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿವೆ. 2021ರಲ್ಲಿ ಭಾರತ ಮತ್ತು ಜಪಾನ್​ ಚೀನಾಕ್ಕಿಂತಲೂ ಹೆಚ್ಚಿನ ಪ್ರಾದೇಶಿಕ ಸ್ವಾಯತ್ತತೆ ಸಾಧಿಸಿವೆ ಎಂದಿದೆ ವರದಿ.

ಇದನ್ನೂ ಓದಿ: ಪ್ರತಿಪಕ್ಷವನ್ನು ಎಷ್ಟು ದಿನ ದೂರ ಇಡ್ತೀರಿ?... ಕಾಂಗ್ರೆಸ್​ ನಾಯಕ ಮಲ್ಲಿಕಾರ್ಜುನ ಖರ್ಗೆ ಪ್ರಶ್ನೆ

ಭಾರತ ತನ್ನ ಸಂಪನ್ಮೂಲಗಳು ಮತ್ತು ಸಾಮರ್ಥ್ಯ ಎರಡಕ್ಕೂ ಹೋಲಿಸಿದರೆ ಕಡಿಮೆ ಸಾಧನೆಯನ್ನು ಹೊಂದಿದೆ. ದೇಶವು ನೆರೆಯ ಚೀನಾಕ್ಕಿಂತ ಮಿಲಿಟರಿ ಮತ್ತು ಆರ್ಥಿಕ ಸಾಮರ್ಥ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಬಲಗೊಳಿಸಬಹುದು. ಇದರ ಸಾಕಾರಕ್ಕೆ ದಶಕಗಳವರೆಗೂ ಸಮಯ ಹಿಡಿಯಬಹುದು. 2021ರಲ್ಲಿ ಭಾರತ ತನ್ನ ಸ್ಥಿತಿಸ್ಥಾಪಕತ್ವ ಮತ್ತು ಸೇನಾ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡಿದೆ. ಆದರೂ, ಕೊರೊನಾ ವೈರಸ್​ ದಾಳಿಗೂ ಮುನ್ನದ ಬೆಳವಣಿಗೆಗೆ ಹೋಲಿಸಿದರೆ ಇದು ಕಡಿಮೆಯೇ ಎಂದು ವರದಿ ಉಲ್ಲೇಖಿಸಿದೆ.

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.