ETV Bharat / sports

'ಟಿ20 ವಿಶ್ವಕಪ್​ ಫೈನಲ್​ನಲ್ಲಿ ರಿಷಭ್ ಗಾಯದ ನಾಟಕವಾಡಿದ್ದ' ಎಂಬ ರೋಹಿತ್​ ಹೇಳಿಕೆಗೆ ಮೌನ ಮುರಿದ ಪಂತ್ - ROHIT SHARM STATEMENT ON PANT

ಟಿ20 ಫೈನಲ್​ ಪಂದ್ಯದ ವೇಳೆ ರಿಷಭ್​ ಪಂತ್​ ಮೊಣಕಾಲಿನ ಗಾಯದ ನಾಟಕವಾಡಿ ಕೆಲ ನಿಮಷಗಳ ಕಾಲ ಪಂದ್ಯವನ್ನು ತಡೆದಿದ್ದರು.

ರೋಹಿತ್​ ಶರ್ಮಾ ಮತ್ತು ರಿಷಭ್​ ಪಂತ್​
ರೋಹಿತ್​ ಶರ್ಮಾ ಮತ್ತು ರಿಷಭ್​ ಪಂತ್​ (AP)
author img

By ETV Bharat Sports Team

Published : Oct 12, 2024, 1:14 PM IST

ಹೈದರಾಬಾದ್​: ಈ ವರ್ಷ ನಡೆದಿದ್ದ ಟಿ20 ವಿಶ್ವಕಪ್​ ಫೈನಲ್​ ಪಂದ್ಯದಲ್ಲಿ ಟೀಂ ಇಂಡಿಯಾ ದಕ್ಷಿಣ ಆಫ್ರಿಕಾವನ್ನು 7 ರನ್​ಗಳಿಂದ ಮಣಿಸಿ ವಿಶ್ವಕಪ್​ ಗೆದ್ದುಕೊಂಡಿತ್ತು. ದಕ್ಷಿಣ ಆಫ್ರಿಕಾ ಗೆಲುವಿಗೆ ಕೊನೆಯ 30 ಎಸೆತಗಳಲ್ಲಿ 30 ರನ್​ಗಳು ಬೇಕಿತ್ತು. ಈ ವೇಳೆ, ಭಾರತೀಯ ಬೌಲರ್​ಗಳು ಅದ್ಬುತ ಪ್ರದರ್ಶನ ತೋರಿ ಕೈಜಾರಿ ಹೋಗಿದ್ದ ಪಂದ್ಯವನ್ನು ಮರಳಿ ಗೆಲ್ಲುವಂತೆ ಮಾಡಿದ್ದರು.

ಆದರೆ ಕೆಲ ದಿನಗಳ ಹಿಂದೆ ಕಪಿಲ್​ ಶರ್ಮಾ ಅವರ ಕಾರ್ಯಕ್ರಮವೊಂದರಲ್ಲಿ ಈ ಪಂದ್ಯದ ಬಗ್ಗೆ ರೋಹಿತ್​ ಶರ್ಮಾ ಮಾತನಾಡಿದ್ದರು. ಈ ವೇಳೆ, ಫೈನಲ್​ ಪಂದ್ಯದಲ್ಲಿ ರಿಷಭ್​ ಪಂತ್​ ಮೊಣಕಾಲಿನ ಗಾಯದ ನಾಟಕವಾಡಿ ಪಂದ್ಯವನ್ನು ನಾಲ್ಕೈದು ನಿಮಿಷಗಳ ಕಾಲ ತಡೆಯವಂತೆ ಮಾಡಿದ್ದರು. ಇದುಕೂಡ ನಮಗೆ ಪಂದ್ಯ ಗೆಲ್ಲುವಲ್ಲಿ ಸಹಾಯ ಮಾಡಿತ್ತು ಎಂದು ಹೇಳಿದ್ದರು.

ಮೌನ ಮುರಿದ ಪಂತ್​: ರೋಹಿತ್ ಅವರ ಹೇಳಿಕೆ ಪಂತ್​ ಕೂಡ ಪ್ರತಿಕ್ರಿಯೆ ನೀಡಿದ್ದು, ಹೌದು, ಅಂದು ನಾನು ಹಾಗೆ ಮಾಡಿದ್ದೆ. ಅಲ್ಲದೇ ನನ್ನ ಪರಿಶೀಲಿಸಲು ಮೈದಾನದಕ್ಕೆ ಬಂದ ಫಿಸಿಯೋಗೂ ನಿಧಾನವಾಗಿ ಸಮಯ ಕಳೆಯುವಂತೆ ಕೇಳಿಕೊಂಡೆ. ಏಕೆಂದರೆ ಅಂದು ಪಂದ್ಯ ವೇಗವಾಗಿ ಸಾಗುತ್ತಿತ್ತು. ದಕ್ಷಿಣ ಆಫ್ರಿಕಾ ಬ್ಯಾಟರ್​ಗಳು 2-3 ಓವರ್​ಗಳಲ್ಲಿ ಸಾಕಷ್ಟು ರನ್ ಸಿಡಿಸಿದ್ದರು.​ ಇಂತಹ ಸಮಯದಲ್ಲಿ ಯೋಜನೆ ರೂಪಿಸಲು ನಮ್ಮ ತಂಡಕ್ಕೆ ಕೆಲ ಸಮಯ ಬೇಕಿತ್ತು. ಆಗ ಫಿಸಿಯೋಗೆ ಹೇಳುತ್ತಿದ್ದೆ. ಹೇಗಾದರೂ ಮಾಡಿ ಸಮಯ ವ್ಯರ್ಥ ಮಾಡಿ ಎಂದು ಕೇಳಿಕೊಂಡಿದ್ದೆ. ಅಲ್ಲದೇ ನಾನು ನಟಿಸುತ್ತಿರುವುದಾಗಿಯೂ ಅವರಿಗೆ ಹೇಳಿದ್ದೆ. ನನ್ನ ಈ ಐಡಿಯಾ ಆ ಸಮಯಕ್ಕೆ ಕೆಲಸ ಮಾಡಿತು.

ಪ್ರತಿ ಸಂದರ್ಭದಲ್ಲೂ ಇದು ವರ್ಕ್​ ಆಗುತ್ತೆ ಎಂದು ಹೇಳಲ್ಲ ಆದರೆ ಕೆಲವೊಂದು ಸಂದರ್ಭಗಳಲ್ಲಿ ಖಂಡಿತವಾಗಿ ಇಂತಹ ಐಡಿಯಾಗಳು ವರ್ಕಾಗುತ್ತವೆ ಎಂದು ಹೇಳಿದ್ದಾರೆ. ಅವರ ಈ ಹೇಳಿಕೆಯ ವಿಡಿಯೋ ಸದ್ಯ ವೈರಲ್​ ಆಗಿದೆ.

ಇದನ್ನೂ ಓದಿ: ಟಿ20 ವಿಶ್ವಕಪ್ ಗೆಲುವಿಗೆ ರಿಷಭ್​ ಪಂತ್​ ಬುದ್ಧಿವಂತಿಕೆಯೂ ಕಾರಣ: ರೋಹಿತ್ ಶರ್ಮಾ - Rohit Reveals Pant Tactics

ETV Bharat Logo

Copyright © 2025 Ushodaya Enterprises Pvt. Ltd., All Rights Reserved.