ETV Bharat / bharat

ಶಾಸಕ ಕೃಷ್ಣ ಕಲ್ಯಾಣಿ ನಿವಾಸ, ಕಚೇರಿಗಳ ಮೇಲೆ ಐಟಿ, ಇಡಿ ದಾಳಿ..

ಶಾಸಕ ಕೃಷ್ಣ ಕಲ್ಯಾಣಿ ನಿವಾಸ, ಕಚೇರಿಗಳ ಮೇಲೆ ಆದಾಯ ತೆರಿಗೆ ಇಲಾಖೆ ಹಾಗೂ ಜಾರಿ ನಿರ್ದೇಶನಾಲಯ ದಾಳಿ ನಡೆಸಿವೆ. ಇದನ್ನು ವಿರೋಧಿಸಿ ಕೃಷ್ಣಬಾಬು ಅವರ ಕಾರ್ಯಕರ್ತರು ಹಾಗೂ ಬೆಂಬಲಿಗರು ಶಾಸಕರ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

MLA Krishna Kalyani
ಶಾಸಕ ಕೃಷ್ಣ ಕಲ್ಯಾಣಿ ನಿವಾಸ, ಕಚೇರಿಗಳ ಮೇಲೆ ಐಟಿ, ಇಡಿ ದಾಳಿ
author img

By

Published : May 3, 2023, 7:48 PM IST

ರಾಯಗಂಜ್ (ಪಶ್ಚಿಮ ಬಂಗಾಳ): ರಾಯಗಂಜ್ ಶಾಸಕ ಕೃಷ್ಣ ಕಲ್ಯಾಣಿ ಅವರ ಮನೆ ಮೇಲೆ ಬುಧವಾರ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಕೃಷ್ಣ ಕಲ್ಯಾಣಿ ಅವರ ಮನೆ, ಬುಲೆಟ್ ಶೋ ರೂಂ, ತೃಣಮೂಲ ಕಾಂಗ್ರೆಸ್ ಕಚೇರಿ, ಕಲ್ಯಾಣಿ ಸಾಲ್ವೆಕ್ಸ್, ಟ್ರೈಬ್ ಟಿವಿ, ವಾ ಬಜಾರ್, ಪಿಆರ್‌ಎಂ ಶಾಪಿಂಗ್ ಮಾಲ್, ರಿಲಯನ್ಸ್ ಸ್ಮಾರ್ಟ್ ಮತ್ತು ಕೃಷ್ಣ ಕಲ್ಯಾಣಿಯ ಎಲ್ಲಾ ಸಂಸ್ಥೆಗಳ ಮೇಲೆ ಆದಾಯ ತೆರಿಗೆ ಇಲಾಖೆ ಏಕಕಾಲದಲ್ಲಿ ದಾಳಿ ನಡೆಸಿತು.

ಇದರ ಬೆನ್ನಲ್ಲೆ ಜಾರಿ ನಿರ್ದೇಶನಾಲಯ ಕೂಡಾ ದಾಳಿ ನಡೆಸಿದೆ. ಐಟಿಯ ತಂಡವೊಂದು ಬುಧವಾರ ಬೆಳಗ್ಗೆ ಶಾಸಕರ ಮನೆ ಮೇಲೆ ಏಕಾಏಕಿ ದಾಳಿ ಮಾಡಿದೆ. ಈ ವೇಳೆ ಶಾಸಕರ ಮನೆಯಿಂದ ಹೊರ ಬರಲು ಯಾರಿಗೂ ಅವಕಾಶ ನೀಡಿಲ್ಲ. ತನಿಖಾಧಿಕಾರಿಗಳು ಹಲವು ಗಂಟೆಗಳ ಕಾಲ ಮನೆಯೊಳಗೆ ಇದ್ದರು. ವಿಚಾರಣೆ ವೇಳೆ ಎಲ್ಲರ ಫೋನ್ ಕಿತ್ತುಕೊಂಡಿದ್ದಾರೆ ಎಂಬುದು ವರದಿಯಾಗಿದೆ.

ದಾಳಿಗೆ ನಿಖರವಾದ ಕಾರಣ ತಿಳಿದಿಲ್ಲ- ಪ್ರದೀಪ್ ಕಲ್ಯಾಣಿ: ಆದರೆ, ಈ ದಾಳಿ ಯಾವ ಪ್ರಕರಣಕ್ಕೆ ಎಂಬುದು ಇನ್ನೂ ಕೂಡಾ ಸ್ಪಷ್ಟವಾಗಿಲ್ಲ. ತೃಣಮೂಲ ಕಾಂಗ್ರೆಸ್ ವಾರ್ಡ್ ನಂ.18ರ ಸಂಯೋಜಕ ಕೃಷ್ಣ ಕಲ್ಯಾಣಿ ಅವರ ಸಹೋದರ ಪ್ರದೀಪ್ ಕಲ್ಯಾಣಿ ಮಾತನಾಡಿ, ''ಐಟಿ ಅಧಿಕಾರಿಗಳು ಏಕಾಏಕಿ ಶಾಸಕರ ಮನೆಗೆ ಪ್ರವೇಶಿಸಿದ್ದಾರೆ. ಇಲಾಖೆ ಕಾರ್ಯ ರಾಜಕೀಯ ಪ್ರೇರಿತವಾಗಿದೆ. ಈ ದಾಳಿಯ ನಿಖರವಾದ ಕಾರಣವನ್ನು ಅರ್ಥಮಾಡಿಕೊಳ್ಳಲು ಹಲವರಿಗೆ ಸಾಧ್ಯವಾಗುತ್ತಿಲ್ಲ. ಸುವೇಂದು ಅಧಿಕಾರಿ ವಿಧಾನಸಭೆಯೊಳಗೆ ನನ್ನ ಅಜ್ಜನಿಗೆ ಬೆದರಿಕೆ ಹಾಕಿದ್ದರು" ಎಂದು ಅವರು ಹೇಳಿದರು.

ಬೆಂಬಲಿಗರಿಂದ ಶಾಸಕರ ಕಚೇರಿ ಎದುರು ಪ್ರತಿಭಟನೆ: ಮತ್ತೊಂದೆಡೆ, ಕೃಷ್ಣ ಕಲ್ಯಾಣಿ ಅವರ ಆಪ್ತ ಕಾರ್ಯದರ್ಶಿ ಸೌರಭ್ ದಾಸ್ ಮಾತನಾಡಿ, "ಅಧಿಕಾರಿಗಳು ಪ್ರವೇಶಿಸಿ ಸುಮಾರು ಎರಡು ಗಂಟೆಗಳು ಕಳೆದಿವೆ. ಅವರು ಶಾಸಕರ ಕುಟುಂಬ ಸದಸ್ಯರು ಸೇರಿದಂತೆ ಶಾಸಕರ ಫೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಶಾಸಕರ ಪಕ್ಷ ಸೇರಿದಂತೆ ಶಾಸಕರ ಎಲ್ಲಾ ವ್ಯಾಪಾರ ಸಂಸ್ಥೆಗಳು, ಕಚೇರಿ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದೆ. ಇದೊಂದು ರಾಜಕೀಯ ಷಡ್ಯಂತ್ರ'' ಎಂದು ಅವರು ಕಿಡಿಕಾರಿದರು. ಈ ಸುದ್ದಿ ತಿಳಿದ ತಕ್ಷಣ ಕೃಷ್ಣಬಾಬು ಅವರ ಕಾರ್ಯಕರ್ತರು ಮತ್ತು ಬೆಂಬಲಿಗರು ಶಾಸಕರ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಇದನ್ನೂ ಓದಿ: ಇಂಗ್ಲೆಂಡ್​​: ಬಕ್ಕಿಂಗ್​​​ಹ್ಯಾಮ್​​ ಅರಮನೆ ಹೊರಗೆ ಅನುಮಾಸ್ಪದ ವ್ಯಕ್ತಿಯ ಬಂಧನ

ಘಟನಾ ಸ್ಥಳದಲ್ಲಿದ್ದ ತೃಣಮೂಲ ಕಾರ್ಯಕರ್ತರೊಬ್ಬರು ಮಾತನಾಡಿ,'' ಕೃಷ್ಣ ಕಲ್ಯಾಣಿ ಅವರು ಜನಪ್ರಿಯ ಶಾಸಕರು. ಅನೇಕ ಜನರು ಸಹಾಯಕ್ಕಾಗಿ ಅವರ ಬಳಿಗೆ ಬರುತ್ತಾರೆ. ಐಟಿ ಇಲಾಖೆ ಉದ್ದೇಶಪೂರ್ವಕವಾಗಿ ದಾಳಿ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ನಿನ್ನೆ ಅಭಿಷೇಕ್ ಬ್ಯಾನರ್ಜಿ ಅವರ ಸಭೆ ನಡೆದಿದ್ದು, ಈ ಮಧ್ಯೆ ಶಾಸಕರ ಕೋಲ್ಕತ್ತಾ ಮತ್ತು ಉತ್ತರ ಬಂಗಾಳದ ಕಚೇರಿಗಳಲ್ಲಿಯೂ ದಾಳಿಗಳು ನಡೆದಿವೆ.

ಇದನ್ನೂ ಓದಿ: 300 ಕಿಮೀ ವೇಗದಲ್ಲಿ ಬೈಕ್ ಚಾಲನೆಯೊಂದಿಗೆ ವಿಡಿಯೋ ಮಾಡಲು ಯತ್ನ: ಯೂಟ್ಯೂಬರ್ - ಬೈಕರ್ ದಾರುಣ ಸಾವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.