ಮುಂಬೈ: ಷೇರು ಮಾರುಕಟ್ಟೆ ಅವ್ಯವಹಾರ ಆರೋಪದ ಹಿನ್ನೆಲೆಯಲ್ಲಿ ಸಿಬಿಐ, ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದ ಮಾಜಿ ಜಿಒಒ ಆನಂದ್ ಸುಬ್ರಮಣಿಯನ್ ಅವರನ್ನು ಬಂಧಿಸಿದ್ದು, ಮತ್ತೊಂದೆಡೆ ಬೃಹನ್ಮುಂಬೈ ಮಹಾನಗರ ಪಾಲಿಕೆಯ ಸ್ಥಾಯಿ ಸಮಿತಿ ಅಧ್ಯಕ್ಷ ಯಶವಂತ್ ಜಾಧವ್ ಅವರಿಗೆ ಸಂಬಂಧಿಸಿದ ಸ್ಥಳಗಳಲ್ಲಿ ಐಟಿ ದಾಳಿ ನಡೆಸಿದ್ದು, ದಾಖಲೆ ಪರಿಶೀಲನೆ ನಡೆಯುತ್ತಿದೆ.
ಯಶವಂತ್ ಜಾಧವ್ ಅವರು ಶಿವಸೇನಾ ಪಕ್ಷದ ಕಾರ್ಪೊರೇಟರ್ ಕೂಡಾ ಆಗಿದ್ದು, ಇಂದು ಬೆಳಗ್ಗೆ 6 ಗಂಟೆ ವೇಳೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅಂದಹಾಗೆ ಯಶವಂತ್ ಜಾಧವ್ ಅವರ ವಿರುದ್ಧ ಅಕ್ರಮ ಹಣ ವರ್ಗಾವಣೆ ಮತ್ತು ಭ್ರಷ್ಟಾಚಾರದ ಆರೋಪಗಳಿವೆ.
ಐಟಿ ದಾಳಿಯ ಜೊತೆಜೊತೆಗೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳೂ ಕೂಡಾ ಯಶವಂತ್ ಜಾಧವ್ ಅವರ ನಿವಾಸಕ್ಕೆ ಆಗಮಿಸಿದ್ದು, ಪರಿಶೀಲನೆ ನಡೆಸುತ್ತಿದೆ ಎಂದು ಎಎನ್ಐ ಟ್ವೀಟ್ ಮಾಡಿದೆ. ಕೆಲವು ದಿನಗಳಿಂದ ಬಿಜೆಪಿ ನಾಯಕ ಮತ್ತು ಮಾಜಿ ಸಂಸದರಾದ ಕಿರಿಟ್ ಸೋಮೈಯಾ ಅವರು ಯಶವಂತ್ ಜಾಧವ್ ಅವರ ಮೇಲೆ ಕೆಲವು ದಿನಗಳ ಹಿಂದೆ ಭ್ರಷ್ಟಚಾರ ಆರೋಪ ಮಾಡಿದ್ದರು.
ಇದನ್ನೂ ಓದಿ: ರಾಷ್ಟ್ರೀಯ ಷೇರು ಮಾರುಕಟ್ಟೆ ಅವ್ಯವಹಾರ: ಮಾಜಿ ಜಿಒಒ ಆನಂದ್ ಸುಬ್ರಮಣಿಯನ್ ಬಂಧಿಸಿದ ಸಿಬಿಐ