ಸೂರತ್(ಗುಜರಾತ್): ಇಲ್ಲಿನ ಸರ್ತಾನಾ ಪ್ರದೇಶದ ಯೋಗಿ ಚೋಕ್ ಶಿವಧಾರಾ ಕಾಂಪ್ಲೆಕ್ಸ್‌ನಲ್ಲಿ 31 ವರ್ಷದ ಮಹಿಳೆ ತನ್ನ 2 ವರ್ಷದ ಮಗುವಿಗೆ ವಿಷ ನೀಡಿ, ಬಳಿಕ ತಾವೂ ವಿಷ ಸೇವಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಆತ್ಮಹತ್ಯೆ ಪ್ರಕರಣ ಬಯಲಾಗಿದ್ದು ಹೀಗೆ: ಸಾರ್ಥನಾ ಪೊಲೀಸರು ಗಸ್ತಿನಲ್ಲಿದ್ದಾಗ ಕಪೋದ್ರಾದ ಜಟಿಯಾ ಸರ್ಕಲ್‌ನಲ್ಲಿ ತಾಯಿ ಮತ್ತು ಮಗು ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಹೀಗೆ ಪ್ರಜ್ಞಾಹೀನ ಸ್ಥಿತಿಯಲ್ಲಿ ತಾಯಿ ಮತ್ತು ಮಗುವನ್ನು ಕಂಡ ಪೊಲೀಸರು ತಕ್ಷಣ 108ಕ್ಕೆ ಕರೆ ಮಾಡಿ, ಸಿವಿಲ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ್ದರು. ತಾಯಿ ಆಸ್ಪತ್ರೆಗೆ ದಾಖಲಾದ ಸ್ಪಲ್ಪ ಸಮಯದಲ್ಲೇ ಮೃತಪಟ್ಟರೆ, ಅದೇ ರಾತ್ರಿ ಮಗು ಸಹ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದೆ. ಈ ನಡುವೆ ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಇದು ಕೊಲೆಯೋ ಅಥವಾ ಆತ್ಮಹತ್ಯೆಯಾ ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
ಅತ್ತ ಪತಿಯಿಂದ ಪತ್ನಿ ಕಾಣೆಯಾಗಿರುವ ದೂರು ದಾಖಲು: ಇನ್ನೊಂದು ಕಡೆ ಆತ್ಮಹತ್ಯೆ ಮಾಡಿಕೊಂಡ ಮಹಿಳೆಯ ಪತಿ, ತನ್ನ ಹೆಂಡತಿ ಮತ್ತು ಮಗ ಕಾಣೆಯಾಗಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದ. ಈ ನಡುವೆ ಸಾರ್ಥನಾ ಪೊಲೀಸರು ತಾಯಿ ಮತ್ತು ಮಗನನ್ನು ಗುರುತಿಸಿದ್ದರು. ಅಷ್ಟೇ ಅಲ್ಲ ಈ ಬಗ್ಗೆಅವರ ಮನೆಯವರಿಗೂ ಮಾಹಿತಿ ನೀಡಿದ್ದರು.
ಇನ್ನು ಆತ್ಮಹತ್ಯೆ ಮಾಡಿಕೊಂಡಿರುವ ಮಹಿಳೆ ಹೆಸರು ಚೇತನಾ ಎಂದು ಗುರುತಿಸಲಾಗಿದ್ದು, ಇವರು ಡೈಮಂಡ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಕಳೆದ ನಾಲ್ಕು ವರ್ಷಗಳ ಹಿಂದೆ ಜಿಗ್ನೇಶ್ ಜೊತೆ ಮದುವೆ ಆಗಿದ್ದರು ಎಂದು ಸರ್ತಾನಾ ಪೊಲೀಸರು ಮಾಹಿತಿ ನೀಡಿದ್ದಾರೆ. ಮೂಲತಃ ಸಾವರ್ ಕುಂಡ್ಲಾದವರಾದ ಜಿಗ್ನೇಶ್ ಮತ್ತು ಚೇತನಾ, ಸೂರತ್‌ನ ಸರ್ತಾನದಲ್ಲಿ ವಾಸಿಸುತ್ತಿದೆ. ಈ ದಂಪತಿಗೆ ಒಬ್ಬ ಮಗ ಕೂಡಾ ಇದ್ದ. ಜಿಗ್ನೇಶ್ ಸಹ ವಜ್ರ ಸಂಸ್ಥೆಯೊಂದರಲ್ಲೇ ಉದ್ಯೋಗಿಯಾಗಿದ್ದಾರೆ.
ಮೃತಪಟ್ಟ ಮಹಿಳೆ ಮಾನಸಿಕ ಅಸ್ವಸ್ಥಳೇ?: ಈ ನಡುವೆ ಪ್ರಕರಣ ದಾಖಲಿಸಿಕೊಂಡಿರುವ ಸರ್ತಾನ ಪೊಲೀಸರು ಪತಿಯನ್ನು ವಿಚಾರಣೆಗೊಳಪಡಿಸಿದ್ದು, ಪತ್ನಿ ಕಳೆದ 3 ವರ್ಷಗಳಿಂದ ಮಾನಸಿಕ ಅಸ್ವಸ್ಥರಾಗಿದ್ದರು ಎಂದು ಪತಿ ಜಿಗ್ನೇಶ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಇದನ್ನು ಓದಿ:ದಿಶಾ ಆರೋಪಿಗಳ ಎನ್‌ಕೌಂಟರ್ ನಕಲಿ: ಸಿರ್ಪುರ್ಕರ್ ಆಯೋಗದ ವರದಿ