ETV Bharat / bharat

ರಾಜಸ್ಥಾನದಲ್ಲಿ ಕಾಂಗ್ರೆಸ್​​ ಗ್ಯಾರಂಟಿ ಜಪ: ₹ 500ಗೆ ಗ್ಯಾಸ್ ಸಿಲಿಂಡರ್‌, ಮನೆ ಯಜಮಾನಿಗೆ ವಾರ್ಷಿಕ ₹ 10 ಸಾವಿರ ನೀಡುವ ಭರವಸೆ - NCW chairperson Mamta Sharma

ರಾಜಸ್ಥಾನದಲ್ಲಿ 500 ರೂ. ಬೆಲೆಗೆ ಅಡುಗೆ ಅನಿಲ ಸಿಲಿಂಡರ್‌ ಮತ್ತು ಕುಟುಂಬದ ಯಜಮಾನಿಗೆ ವಾರ್ಷಿಕ 10 ಸಾವಿರ ರೂ. ನೀಡುವ 'ಗ್ಯಾರಂಟಿ' ಯೋಜನೆಗಳನ್ನು ಕಾಂಗ್ರೆಸ್​ ಘೋಷಣೆ ಮಾಡಿದೆ.

In Rajasthan, Congress promises LPG cylinder at Rs 500, Rs 10000 to woman head of family a year
ರಾಜಸ್ಥಾನದಲ್ಲಿ ಕಾಂಗ್ರೆಸ್​​ ಗ್ಯಾರಂಟಿ ಜಪ: ₹ 500ಗೆ ಗ್ಯಾಸ್ ಸಿಲಿಂಡರ್‌, ಮನೆ ಯಜಮಾನಿಗೆ ವಾರ್ಷಿಕ ₹ 10 ಸಾವಿರ ನೀಡುವ ಭರವಸೆ
author img

By PTI

Published : Oct 25, 2023, 7:34 PM IST

ಜೈಪುರ (ರಾಜಸ್ಥಾನ): ಐದು ರಾಜ್ಯಗಳ ವಿಧಾನಸಭಾ ಚುನಾವಣೆ ಪೈಕಿ ಪ್ರಮುಖವಾಗಿರುವ ರಾಜಸ್ಥಾನದಲ್ಲಿ ಆಡಳಿತಾರೂಢ ಕಾಂಗ್ರೆಸ್​ ಬುಧವಾರ ಎರಡು ಮಹತ್ವದ 'ಗ್ಯಾರಂಟಿ' ಯೋಜನೆಗಳನ್ನು ಪ್ರಕಟಿಸಿದೆ. ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ 1.05 ಕೋಟಿ ಕುಟುಂಬಗಳಿಗೆ 500 ರೂ. ಬೆಲೆಗೆ ಅಡುಗೆ ಅನಿಲ ಸಿಲಿಂಡರ್‌ ಹಾಗೂ ಕುಟುಂಬದ ಯಜಮಾನಿಗೆ ವಾರ್ಷಿಕ 10 ಸಾವಿರ ರೂ. ಆರ್ಥಿಕ ನೆರವು ಒದಗಿಸುವುದಾಗಿ ಪಕ್ಷ ಘೋಷಿಸಿದೆ.

ಝುಂಝುನು ಜಿಲ್ಲೆಯ ಅರ್ದಾವತಾ ಗ್ರಾಮದಲ್ಲಿ ಇಂದು ನಡೆದ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಕಾಂಗ್ರೆಸ್​ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಹಾಗೂ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್​ ಈ ಗ್ಯಾರಂಟಿ ಯೋಜನೆಗಳು ಪ್ರಕಟಿಸಿದರು. ಒಂದು ವಾರದೊಳಗೆ ಎರಡನೇ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಪ್ರಿಯಾಂಕಾ, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

  • राजस्थान की कांग्रेस सरकार में-

    • 25 लाख रुपए तक का स्वास्थ्य बीमा मिल रहा है

    • ग्रामीण क्षेत्रों की 1000 इंदिरा रसोई में 8 रुपए में पौष्टिक आहार मिल रहा है

    • 500 रुपए में गैस सिलेंडर मिल रहा है

    • 1 करोड़ लोगों को बिजली फ्री मिली है

    • मिनिमम इनकम गारंटी एक्ट लागू है… pic.twitter.com/42TCKhiKnx

    — Congress (@INCIndia) October 25, 2023 " class="align-text-top noRightClick twitterSection" data=" ">

''ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ಕಲ್ಪಿಸುವ ಮಸೂದೆಯನ್ನು ಸಂಸತ್ತಿನಲ್ಲಿ ಅಂಗೀಕರಿಸಲಾಗಿದೆ. ಆದರೆ, ಅದು ಜಾರಿಗೆ ಬರಲು 10 ವರ್ಷ ಬೇಕಾಗುತ್ತದೆ. ಅದೇ ರೀತಿಯಾಗಿ ಪೂರ್ವ ರಾಜಸ್ಥಾನ ಕಾಲುವೆ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸಿ 10 ವರ್ಷಗಳು ಕಳೆದಿವೆ. ಆದರೆ, ಅನುಷ್ಠಾನ ಸರಿಯಾಗಿ ಆಗುತ್ತಿಲ್ಲ. ಕೇಂದ್ರದ ಎಲ್ಲ ಯೋಜನೆಗಳು ಪೊಳ್ಳಾಗಿವೆ. ಮತ್ತೊಂದೆಡೆ, ರಾಜಸ್ಥಾನದ ಕಾಂಗ್ರೆಸ್ ಸರ್ಕಾರದ ತಾನು ಪ್ರಕಟಿಸಿದ ಯೋಜನೆಗಳನ್ನು ನುಡಿದಂತೆ ಅನುಷ್ಠಾನಗೊಳಿಸುತ್ತಿದೆ'' ಹೇಳಿದರು.

ಇದನ್ನೂ ಓದಿ: ತೆಲಂಗಾಣ ಚುನಾವಣೆ: ಬಿಜೆಪಿ ತೊರೆದು ಮರಳಿ ಕಾಂಗ್ರೆಸ್​ನತ್ತ ಮಾಜಿ ಶಾಸಕ ರಾಜಗೋಪಾಲ್​ ರೆಡ್ಡಿ ಚಿತ್ತ

''ಚುನಾವಣಾ ಸಮಯದಲ್ಲಿ ಮಾತ್ರ ಬಿಜೆಪಿ ಧರ್ಮ ಮತ್ತು ಜಾತಿಗಳ ಬಗ್ಗೆ ಮಾತನಾಡುತ್ತದೆ. ಇದರಿಂದ ಮತಗಳು ಸಿಗುತ್ತವೆ ಎಂದು ಆ ಪಕ್ಷ ಭಾವಿಸಿದೆ. ಕೇಂದ್ರ ಸರ್ಕಾರ ಜನರ ದನಿ ಹತ್ತಿಕ್ಕಲು ಪ್ರಯತ್ನಿಸುತ್ತದೆ. ಬಿಜೆಪಿ ತಾನು ಅಧಿಕಾರದಲ್ಲಿ ಇರಬೇಕು ಮತ್ತು ತನ್ನ ಭವಿಷ್ಯವನ್ನು ಭದ್ರಪಡಿಸಿಕೊಳ್ಳಲು ಮಾತ್ರ ಬಯಸುತ್ತದೆ. ಸಾರ್ವಜನಿಕ ಸಮಸ್ಯೆಗಳನ್ನು ಬಿಜೆಪಿ ಆಲಿಸುತ್ತಿಲ್ಲ. ನಿಮಗೆ (ಜನತೆ) ಯಾವ ರೀತಿಯ ನಾಯಕರು ಮತ್ತು ಸರ್ಕಾರಗಳು ಬೇಕಾಗುತ್ತವೆ ಎಂಬುದನ್ನು ನೀವೇ ಅರ್ಥಮಾಡಿಕೊಳ್ಳಬೇಕು. ಚುನಾವಣೆಗಳ ಬಂದಾಗ ಅಧಿಕಾರಕ್ಕೆ ಬರಲೆಂದು ಧರ್ಮದ ಬಗ್ಗೆ ಮಾತನಾಡುವ ನಾಯಕರು ಬೇಕೆ ಅಥವಾ ನಿಮಗಾಗಿ ಹಾಗೂ ನಿಮ್ಮ ಭವಿಷ್ಯಕ್ಕಾಗಿ ಕೆಲಸ ಮಾಡುವ ನಾಯಕರು ಎಂಬುದನ್ನು ನೀವೇ ನಿರ್ಧರಿಸಬೇಕು. ಯಾವುದೇ ನಾಯಕನನ್ನು ಹೊಣೆಗಾರನನ್ನಾಗಿ ಮಾಡುವ ಜವಾಬ್ದಾರಿ ನಿಮ್ಮ ಮೇಲಿದೆ'' ಎಂದು ಜನತೆಗೆ ಪ್ರಿಯಾಂಕಾ ಸಲಹೆ ನೀಡಿದರು.

  • कांग्रेस महासचिव @priyankagandhi जी ने राजस्थान के झुंझुनू में विशाल जनसभा को संबोधित किया।

    राजस्थान सरकार की जनहितैषी योजनाओं ने लोगों को आर्थिक और सामाजिक रूप से मजबूत किया है, उनके जीवन में खुशहाली लेकर आई है।

    यही कारण है कि राजस्थान में फिर से कांग्रेस की सरकार बनने जा रही… pic.twitter.com/a3yL68czwF

ಇದೇ ವೇಳೆ, ''ರಾಜ್ಯ ಸರ್ಕಾರದ ಚಿರಂಜೀವಿ ಆರೋಗ್ಯ ಯೋಜನೆ, ಹಳೆಯ ಪಿಂಚಣಿ ಯೋಜನೆ ಸೇರಿ ಮುಂತಾದ ಯೋಜನೆಗಳನ್ನು ಶ್ಲಾಘಿಸಿದ ಕಾಂಗ್ರೆಸ್​ ನಾಯಕಿ, ''ಮೋದಿ ತಮಗೋಸ್ಕರ ಮತ ನೀಡುವಂತೆ ಕೇಳುತ್ತಾರೆ. ಆದರೆ, ಅವರು ಇಲ್ಲಿ ಬಂದು ಮುಖ್ಯಮಂತ್ರಿ ಆಗಲ್ಲ. ರಾಜ್ಯ ಬಿಜೆಪಿ ಬಣಗಳಾಗಿ ಒಡೆದು ಹೋಗಿದೆ. ಅದು ನಿಮ್ಮ ಭವಿಷ್ಯದ ಬಗ್ಗೆ ಕಾಳಜಿ ವಹಿಸಲ್ಲ. ಆದರೆ, ಕಾಂಗ್ರೆಸ್ ಪಕ್ಷ ನಿಮಗಾಗಿ ಸಮರ್ಪಿತವಾಗಿದೆ. ಸಚಿನ್ ಪೈಲಟ್‌ನಂತಹ ಯುವ ನಾಯಕರು ಹಾಗೂ ಗೆಹ್ಲೋಟ್‌ರಂತಹ ಅನುಭವಿ ನಾಯಕರು ಕಾಂಗ್ರೆಸ್​ನಲ್ಲಿದ್ದಾರೆ'' ಎಂದರು.

ಕಾಂಗ್ರೆಸ್​ ಸೇರಿದ ಬಿಜೆಪಿ ಶಾಸಕಿ: ಇದೇ ಕಾರ್ಯಕ್ರಮದಲ್ಲಿ ಕಳೆದ ವರ್ಷ ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ ಕಾರಣಕ್ಕೆ ಬಿಜೆಪಿಯಿಂದ ಉಚ್ಛಾಟಿತರಾದ ಶಾಸಕಿ ಶೋಭಾರಾಣಿ ಕುಶ್ವಾಹ್ ಕಾಂಗ್ರೆಸ್​ ಸೇರ್ಪಡೆಗೊಂಡರು. ಅಲ್ಲದೇ, ಕಿಶನ್‌ಗಢದ ಬಿಜೆಪಿ ನಾಯಕ ವಿಕಾಸ್ ಚೌಧರಿ ಮತ್ತು ರಾಷ್ಟ್ರೀಯ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಮಮತಾ ಶರ್ಮಾ ಅವರನ್ನೂ ಪ್ರಿಯಾಂಕಾ ಗಾಂಧಿ ಪಕ್ಷಕ್ಕೆ ಸ್ವಾಗತಿಸಿದರು. ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಗೋವಿಂದ್ ಸಿಂಗ್ ದೋತಸ್ರಾ, ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಉಪಸ್ಥಿತರಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.