ಪರಭಾನಿ(ಮಹಾರಾಷ್ಟ್ರ): ಒಂದು ಕಡೆ ಕೊರೊನಾ ಹಾವಳಿ ಮತ್ತೊಂದು ಕಡೆ ಪೆಟ್ರೋಲ್ - ಡೀಸೆಲ್ ಏರಿಕೆ ತಲೆ ಬಿಸಿ. ದೇಶದಲ್ಲಿ ಕಳೆದ ಕೆಲ ದಿನಗಳಿಂದ ಪೆಟ್ರೋಲ್-ಡೀಸೆಲ್ ಬೆಲೆ ಮತ್ತೊಮ್ಮೆ ಗಗನಕ್ಕೇರುತ್ತಿದ್ದು, ಇದೀಗ ಮತ್ತೊಮ್ಮೆ ಇಂಧನ ಬೆಲೆ 100 ರ ಗಡಿ ದಾಟಿದೆ.
ಮಹಾರಾಷ್ಟ್ರದ ಪರಭಾನಿಯಲ್ಲಿ ಪವರ್ ಪೆಟ್ರೋಲ್ ಬೆಲೆ ಪ್ರತಿ ಲೀಟರ್ಗೆ 104.11 ರೂ. ಮಾರಾಟವಾಗುತ್ತಿದ್ದು, ನಾರ್ಮಲ್ ಪೆಟ್ರೋಲ್ ಬೆಲೆ ಪ್ರತಿ ಲೀಟರ್ಗೆ 100.70 ಪೈಸೆ ತಲುಪಿದೆ.
ಡೀಸೆಲ್ ಬೆಲೆ ಕೂಡ 90.67 ರೂ. ಆಗಿದೆ. ದೇಶದಲ್ಲಿ ಕಳೆದ ನಾಲ್ಕೈದು ದಿನಗಳಿಂದ ತೈಲ ಬೆಲೆಯಲ್ಲಿ ಸತತ ಏರಿಕೆಯಾಗುತ್ತಿರುವ ಕಾರಣ 100 ರೂ ಗಿಂತಲೂ ಕಡಿಮೆ ಇದ್ದ ಪೆಟ್ರೋಲ್ ಬೆಲೆ ಇದೀಗ ಮತ್ತೊಮ್ಮೆ ಶತಕದ ಗಡಿ ದಾಟಿದೆ.
ಇದನ್ನೂ ಓದಿ: ಅಡುಗೆ ಎಣ್ಣೆ, ಎಲ್ಪಿಜಿ ಬೆಲೆ ದುಪ್ಪಟ್ಟು.. ಕೊರೊನಾ ಬಿಕ್ಕಟ್ಟಿನಲ್ಲಿ ಜನಸಾಮಾನ್ಯರಿಗೆ ಗಾಯದ ಮೇಲೆ ಬರೆ
ದೇಶದಲ್ಲಿ ಲಾಕ್ಡೌನ್ ಹೇರಿಕೆ ಮಾಡಿರುವುದರಿಂದ ಜನರು ಕೆಲಸವಿಲ್ಲದೇ ಸಮಸ್ಯೆಗೊಳಗಾಗಿದ್ದಾರೆ. ಇದರ ಮಧ್ಯೆ ಕೂಡ ಇಂಧನ ಬೆಲೆ ಏರಿಕೆಯಾಗುತ್ತಿರುವುದು ನಿಜಕ್ಕೂ ನಮಗೆ ಸಂಕಷ್ಟವಾಗಿದೆ ಎಂದು ಅನೇಕರು ತಮ್ಮ ಕಷ್ಟ ಹೊರಹಾಕಿದ್ದಾರೆ. ಪಂಚರಾಜ್ಯ ಚುನಾವಣೆ ವೇಳೆ ತೈಲ ಬೆಲೆ ಏರಿಕೆಗೆ ಬ್ರೇಕ್ ಬಿದ್ದಿತ್ತು. ಫಲಿತಾಂಶ ಬಹಿರಂಗಗೊಂಡ ದಿನದಿಂದಲೇ ದೇಶದಲ್ಲಿ ತೈಲ ಬೆಲೆ ಏರಿಕೆ ಮತ್ತೊಮ್ಮೆ ಆರಂಭಗೊಂಡಿದೆ.
ಈಗಾಗಲೇ ಮಧ್ಯಪ್ರದೇಶ, ರಾಜಸ್ಥಾನದ ಕೆಲವು ಭಾಗಗಳಲ್ಲಿ ಪೆಟ್ರೋಲ್ ದರ 100ರ ಗಡಿ ದಾಟಿದ್ದು, ಇದೀಗ ಮಹಾರಾಷ್ಟ್ರ ಕೂಡ ಸೇರ್ಪಡೆಯಾಗಿದೆ.