ಪುಣೆ/ಸೋಲಾಪುರ: ಎರಡು ಹೃದಯಸ್ಪರ್ಶಿ ಘಟನೆಗಳಲ್ಲಿ ಮುಸ್ಲಿಂ ಮಹಿಳೆಯೊಬ್ಬರ ಕೊನೆಯ ವಿಧಿಗಳನ್ನು ಹಿಂದೂ ಯುವಕರು ಇಸ್ಲಾಂ ಧರ್ಮದ ಆಚರಣೆಗಳ ಪ್ರಕಾರ ಹಾಗೂ ಕ್ರಿಶ್ಚಿಯನ್ ಮಹಿಳೆಯ ಅಂತ್ಯ ಸಂಸ್ಕಾರವನ್ನು ಕ್ರಿಶ್ಚಿಯನ್ ಪದ್ಧತಿಗಳ ಪ್ರಕಾರ ಹಿಂದೂ ಸ್ವಯಂ ಸೇವಕರು ನೆರವೇರಿಸಿದರು.
ಪುಣೆಯಲ್ಲಿ ಕೋವಿಡ್-19ನಿಂದ ನಿಧನರಾದ ಚಗನ್‌ಬಾಯ್ ಕಿಸಾನ್ ಓವಲ್ ಪವಿತ್ರ ರಂಜಾನ್ ತಿಂಗಳಲ್ಲಿ ನಿಧನರಾದರು. ಅವರ ಅಂತಿಮ ವಿಧಿ ವಿಧಾನಗಳನ್ನು ಮುಸ್ಲಿಂ ಪದ್ಧತಿಗಳ ಪ್ರಕಾರ ಹಿಂದೂ ಸ್ವಯಂ ಸೇವಕರು ನೆರವೇರಿಸಿದರು.
ಮತ್ತೊಂದೆಡೆ ಸೋಲಾಪುರ ಜಿಲ್ಲೆಯ ಕುರ್ದುವಾಡಿಯಲ್ಲಿ 59 ವರ್ಷದ ಮಹಿಳೆಯೊಬ್ಬರ ಅಂತಿಮ ವಿಧಿಗಳನ್ನು ಮಾಡಲು ಯಾವುದೇ ಸಂಬಂಧಿಯು ಮುಂದೆ ಬರಲಿಲ್ಲ. ಇದರಿಂದ ಸ್ಥಳೀಯ ಯುವಕನೊಬ್ಬ ಕ್ರಶ್ಚಿಯನ್ನರ ಧಾರ್ಮಿಕ ಪದ್ಧತಿಗಳ ಪ್ರಕಾರ ಕೊನೆಯ ವಿಧಿಗಳನ್ನು ನೆರವೇರಿಸಿದ. ಮಹಿಳೆ ಕುರ್ದುವಾಡಿಯ ರೈಲ್ವೆ ಕಾಲೋನಿಯಲ್ಲಿ ವಾಸಿಸುತ್ತಿದ್ದರು. ಕೆಲ ದಿನಗಳ ಹಿಂದೆ ಕೋವಿಡ್-19 ಸೋಂಕಿಗೆ ತುತ್ತಾಗಿದ್ದರು. ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಕುರ್ದುವಾಡಿಯ ನಿವಾಸಿಗಳು ಕೋವಿಡ್ ಸಹಾಯವಾಣಿ ಸಂಖ್ಯೆಯನ್ನು ಬಿಡುಗಡೆ ಮಾಡಿದ್ದಾರೆ. ಅಗತ್ಯವಿರುವ ಯಾರಾದರೂ 8600698799ಕ್ಕೆ ಸಂಪರ್ಕಿಸಬಹುದು.