ETV Bharat / bharat

ಮತ್ತೆ ಪಂಜಾಬ್​ನಲ್ಲಿ ಹಗಲು ದರೋಡೆ.. ಆರು ಲಕ್ಷ ಲೂಟಿ ಮಾಡಿ ಎಸ್ಕೇಪ್​ ಆದ ಖದೀಮರು! - ಬ್ಯಾಂಕ್ ದರೋಡೆ ಕುರಿತು ಪಂಜಾಬ್ ಪೊಲೀಸರ ಹೇಳಿಕೆ

ಪಂಜಾಬ್‌ನಲ್ಲಿ ದರೋಡೆ ಘಟನೆಗಳು ನಿಲ್ಲುವಂತೆ ಕಾಣುತ್ತಿಲ್ಲ. ಕಳೆದ ತಿಂಗಳಿನಿಂದ ಬ್ಯಾಂಕ್​, ಶಾಪ್ ಸೇರಿದಂತೆ ಅನೇಕ ಸ್ಥಳಗಳಲ್ಲಿ ದರೋಡೆಕೋರರು ತಮ್ಮ ಕೈಚಳಕ ತೋರಿಸಿ ಪರಾರಿಯಾಗುತ್ತಿದ್ದಾರೆ. ಈಗ ಸೆಂಟ್ರಲ್​ ಬ್ಯಾಂಕ್​ನಲ್ಲಿ ಹಗಲು ದರೋಡೆ ನಡೆಸಿ ಯುವಕರು ಎಸ್ಕೇಪ್​ ಆಗಿರುವ ಘಟನೆ ಅಮೃತಸರದಲ್ಲಿ ಸಂಚಲನ ಮೂಡಿಸಿದೆ.

Bank robbery in Amritsar, Bank looted in Punjab, Punjab police statement on Bank robbery, Punjab crime news, ಅಮೃತಸರದಲ್ಲಿ ಬ್ಯಾಂಕ್ ದರೋಡೆ, ಪಂಜಾಬ್‌ನಲ್ಲಿ ಬ್ಯಾಂಕ್ ಲೂಟಿ, ಬ್ಯಾಂಕ್ ದರೋಡೆ ಕುರಿತು ಪಂಜಾಬ್ ಪೊಲೀಸರ ಹೇಳಿಕೆ, ಪಂಜಾಬ್ ಅಪರಾಧ ಸುದ್ದಿ,​
ಮತ್ತೆ ಪಂಜಾಬ್​ನಲ್ಲಿ ಹಗಲು ದರೋಡೆ
author img

By

Published : May 6, 2022, 5:29 PM IST

ಅಮೃತಸರ: ನಗರದಲ್ಲಿ ಕೆಲ ಅಪರಿಚಿತ ಯುವಕರು ಗ್ರಾಹಕರ ಸೋಗಿನಲ್ಲಿ ಬಂದು ಬ್ಯಾಂಕ್​ ದರೋಡೆ ಮಾಡಿ ಎಸ್ಕೇಪ್​ ಆಗಿದ್ದಾರೆ. ಇದರಿಂದಾಗಿ ಪಂಜಾಬ್ ಪೊಲೀಸ್​ ವ್ಯವಸ್ಥೆ ಮೇಲೆ ಪ್ರಶ್ನೆಗಳು ಮೂಡುತ್ತಿವೆ. ಅಮೃತಸರ ಸೆಂಟ್ರಲ್ ಬ್ಯಾಂಕ್‌ನಲ್ಲಿ ಹಗಲು ದರೋಡೆ ನಡೆಸಿರುವ ಪ್ರಕರಣ ಈಗ ನಗರದಲ್ಲಿ ಸಂಚಲನ ಮೂಡಿಸುತ್ತಿದೆ.

ಹಗಲು ದರೋಡೆ: ಅಮೃತಸರ ಸೆಂಟ್ರಲ್ ಬ್ಯಾಂಕ್ ಒಳಗೆ ದರೋಡೆಕೋರರು ಹಗಲು ಹೊತ್ತಿನಲ್ಲಿ ಸುಮಾರು 6 ಲಕ್ಷ ರೂಪಾಯಿ ದರೋಡೆ ನಡೆಸಿದ್ದಾರೆ. ಈ ಪ್ರಕರಣ ನಡೆಸಿದ ಬಳಿಕ ಅಪರಿಚಿತ ಯುವಕರು ಪರಾರಿಯಾಗಿದ್ದಾರೆ ಎಂದು ಬ್ಯಾಂಕ್​ನ ಮ್ಯಾನೇಜರ್​ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಓದಿ: ಹಾಡಹಗಲೇ ಬ್ಯಾಂಕ್​ ದರೋಡೆ.. ಗನ್​ ಪಾಯಿಂಟ್​​ ಇಟ್ಟು 12 ಲಕ್ಷ ಲೂಟಿ!

ಗ್ರಾಹಕರ ಸೋಗಿನಲ್ಲಿ ದರೋಡೆ: ನಾಲ್ವರು ಯುವಕರು ಗ್ರಾಹಕರಂತೆ ಬ್ಯಾಂಕ್ ಒಳಗೆ ಬಂದಿದ್ದು, ಬಂದ ನಂತರ ದರೋಡೆ ನಡೆಸಿ ಸುಮಾರು ಆರು ಲಕ್ಷ ನಗದು ಲೂಟಿ ಮಾಡಿದ್ದಾರೆ. ಬಳಿಕ ಅಲ್ಲಿಂದ ಬಿಳಿ ಬಣ್ಣದ ಕಾರಿನಲ್ಲಿ ಪರಾರಿಯಾಗಿದರು ಎಂದು ಬ್ಯಾಂಕ್​ ಅಧಿಕಾರಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಪೊಲೀಸರ ತನಿಖೆ: ಸದ್ಯ ಈ ಪ್ರಕರಣದ ಬಳಿಕ ಸ್ಥಳಕ್ಕಾಗಮಿಸಿದ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಇದೇ ವೇಳೆ, ಸಮೀಪದಲ್ಲಿ ಅಳವಡಿಸಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ. ಬ್ಯಾಂಕ್​ನಲ್ಲಿ ನಡೆದ ದರೋಡೆಗೆ ಸಂಬಂಧಿಸಿದ ಮಾಹಿತಿ ಸಿಕ್ಕಿದೆ. ಆರು ಲಕ್ಷ ಲೂಟಿಯಾಗಿರುವುದರ ಬಗ್ಗೆ ದೂರು ಬಂದಿದೆ. ಶೀಘ್ರವೇ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಪೊಲೀಸ್ ಆಯುಕ್ತ ಅರುಣ್ಪಾಲ್ ಸಿಂಗ್ ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.