ರಾಯ್ಪುರ: ಕುಡಿದ ಅಮಲಿನಲ್ಲಿ ಚಾಲಕನೊಬ್ಬ ಹಲವರ ಮೇಲೆ ಕಾರು ಹಾಯಿಸಿ ಪರಾರಿಯಾಗುತ್ತಿದ್ದ. ಸುದ್ದಿ ತಿಳಿದ ಪೊಲೀಸರು ಚಾಲಕನ್ನ ಹಿಡಿಯಲು ಚೇಸಿಂಗ್ ಮಾಡಿದ್ದರು. ಪೊಲೀಸರಿಂದ ಆರೋಪಿ ತಪ್ಪಿಸಿಕೊಳ್ಳುವ ಯತ್ನದಲ್ಲಿ ಎದುರಿಗೆ ಬಂದ ಇಡ್ಲಿ ಬಂಡಿಗೆ ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೊಬ್ಬ ಸಾವಿಗೀಡಾಗಿದ್ದಾನೆ. ಛತ್ತೀಸ್ಗಢದ ರಾಯಪುರದಲ್ಲಿ ಈ ಘಟನೆ ನಗರದಲ್ಲಿ ನಡೆದಿದೆ.
ಪೊಲೀಸರು ಹೇಳಿದ್ದೇನು?: ಆರೋಪಿ ದೇವರಾಜ್ ಪಾಲ್ ಕುಡಿದು CG-MA-2200 ಡಬ್ಲ್ಯುಆರ್ವಿ ಕಾರು ಚಲಾಯಿಸುತ್ತಿದ್ದ. ಆರೋಪಿ ಚಾಲಕ ರ್ಯಾಷ್ ಆಗಿ ಕಾರು ಚಲಾಯಿಸಿಕೊಂಡು ಬುಧಾ ತಾಲಾಬ್ ಕಡೆಗೆ ಹೋಗುತ್ತಿದ್ದಾಗ ಭತಗಾಂವ್ ಬಸ್ ನಿಲ್ದಾಣದ ಬಳಿ ಹಲವಾರು ವಾಹನಗಳು ಸೇರಿದಂತೆ 6 ಕ್ಕೂ ಹೆಚ್ಚು ಜನರಿಗೆ ಗುದ್ದಿದ್ದಾನೆ.
ಓದಿ: ಶಾಲಾ ಆವರಣದಲ್ಲಿ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ!
ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಕಾರು ಚಾಲಕನನ್ನು ಬೆನ್ನಟ್ಟಿದ್ದಾರೆ. ಇದೇ ವೇಳೆ, ಕಾರು ಚಾಲಕ ಎದುರುಗಡೆಯಿಂದ ಬರುತ್ತಿದ್ದ ಇಡ್ಲಿ ಬಂಡಿಗೆ ತನ್ನ ಕಾರಿನಿಂದ ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿ ರಭಸಕ್ಕೆ ಆ ಅಂಗಡಿ ಮಾಲೀಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಮೃತ ವ್ಯಾಪಾರಿಯನ್ನ ಉತ್ತರ ಪ್ರದೇಶದ ಜಲೌನ್ ಜಿಲ್ಲೆಯ ಲಕ್ಷ್ಮೀಕಾಂತ್ ಜಾತವ್ ಎಂದು ಗುರುತಿಸಲಾಗಿದೆ. ಈ ನಡುವೆ ಕಾರು ಗುದ್ದಿದ ರಭಸಕ್ಕೆ ರಸ್ತೆ ತುಂಬೆಲ್ಲಾ ಇಡ್ಲಿಗಳು ಚೆಲ್ಲಾಪಿಲ್ಲಾಗಿ ಬಿದ್ದಿದ್ದವು. ಇಡ್ಲಿ ಬಂಡಿಗೆ ಡಿಕ್ಕಿ ಹೊಡೆದ ಚಾಲಕ ಮುಂದೆ ಹೋಗಿ ಬುಧಾಪರ ಕೊಳದ ಗೋಡೆಗೆ ಡಿಕ್ಕಿ ಹೊಡೆದಿದ್ದಾನೆ. ಕೂಡಲೇ ಪೊಲೀಸರು ಆರೋಪಿಯನ್ನು ಸೆರೆ ಹಿಡಿದಿದ್ದಾರೆ. ಈ ವೇಳೆ ಆರೋಪಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಆರೋಪಿ ದೇವರಾಜ್ ಪಾಲ್ ತೇಲಿಬಂದ್ ನಿವಾಸಿ. ಕಳೆದ ಏಳೆಂಟು ವರ್ಷಗಳಿಂದ ರಾಯ್ಪುರದಲ್ಲಿ ಮಠಪಾರಾದ ಬಜರಂಗ ಚೌಕ್ ಬಳಿ ತನ್ನ ಸಹಚರರೊಂದಿಗೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾನೆ ಎಂದು ಪಶ್ಚಿಮ ರಾಯ್ಪುರ್ ಎಎಸ್ಪಿ ಆಕಾಶ್ ರಾವ್ ಗಿರೆಪುಂಜೆ ಮಾಹಿತಿ ನೀಡಿದ್ದಾರೆ.
ಓದಿ: ವೀರಶೈವ ಸಂಪ್ರದಾಯದಂತೆ ನವೀನ್ ಪಾರ್ಥಿವ ಶರೀರಕ್ಕೆ ಅಂತಿಮ ಪೂಜೆ: ಸಂಬಂಧಿಕರ ಆಕ್ರಂದನ
ಗಾಯಾಳು ಶಿವಂ ಮಾತನಾಡಿ, ನಾವು ಊಟ ಮುಗಿಸಿ ವಾಕಿಂಗ್ ಹೋಗಿತ್ತಿದ್ದೆವು. ಅಷ್ಟರಲ್ಲಿ ಎದುರಿನಿಂದ ವೇಗವಾಗಿ ಬಂದ ಬಿಳಿ ಬಣ್ಣದ ಕಾರು ನನಗೆ ಡಿಕ್ಕಿ ಹೊಡೆಯಿತು. ಈ ಅಪಘಾತದಲ್ಲಿ ನನ್ನ ಕೈ ಮೂಳೆ ಮುರಿತವಾಗಿದೆ ಎಂದು ಮಾಹಿತಿ ನೀಡಿದರು.
ಇನ್ನು ಈ ಘಟನೆ ಕುರಿತು ಸಿಸಿಟಿವಿಯಲ್ಲಿ ದೃಶ್ಯ ಸೆರೆಯಾಗಿದ್ದು, ಆರೋಪಿಯ ಕಾರು ಚಾಲನೆ ಭಯ ಮೂಡಿಸುವಂತಿದೆ. ಇನ್ನು ಆರೋಪಿ ವಿರುದ್ಧ ಮೋಟಾರು ವಾಹನ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.