ಮಾಧೇಪುರ : ಜಿಲ್ಲೆಯಲ್ಲಿ ಅಮಾನುಷ ಘಟನೆಯೊಂದು ಬೆಳಕಿಗೆ ಬಂದಿದೆ. ಗ್ರಾಮದ ಪಂಚಾಯ್ತಿ ಎದುರೇ ಯುವಕನೊಬ್ಬ ಬಿದಿರಿನ ಕೋಲಿನಿಂದ ಮಹಿಳೆಗೆ ಮನಬಂದಂತೆ ಥಳಿಸುತ್ತಿದ್ದರೂ ಅಲ್ಲಿ ನೆರೆದಿದ್ದ ಜನ ಮೌನಕ್ಕೆ ಶರಣಾಗಿದ್ದರು. ಮಹಿಳೆ ಪ್ರಜ್ಞೆ ತಪ್ಪಿ ನೆಲದ ಮೇಲೆ ಬೀಳುವವರೆಗೂ ಥಳಿಸಿದ್ದಾರೆ. ಸದ್ಯ ಸಂತ್ರಸ್ತೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.
ಏನಿದು ಘಟನೆ ? : ಕಳೆದ ರಾತ್ರಿ ಜೋಳದ ಗದ್ದೆಯಲ್ಲಿ ಮಹಿಳೆಯೊಬ್ಬಳು ಬೇರೆ ವ್ಯಕ್ತಿಯೊಂದಿಗೆ ಶಾರೀರಿಕ ಸಂಬಂಧ ಬೆಳೆಸಿದ್ದಳು ಎಂದು ಗ್ರಾಮದ ಕೆಲ ಯುವಕರು ಸಂತ್ರಸ್ತೆ ಮೇಲೆ ಆರೋಪಿಸಿದ್ದರು. ಈ ಸಂಬಂಧ ಗ್ರಾಮದಲ್ಲಿ ಪಂಚಾಯ್ತಿ ನಡೆಯುತ್ತಿತ್ತು. ಪಂಚಾಯ್ತಿಯಲ್ಲಿ ಆರೋಪ ಮಾಡಿದ ಯುವಕರು ಮತ್ತು ಮಹಿಳೆ ಸೇರಿದಂತೆ ಗ್ರಾಮದ ಜನರು ನೆರೆದಿದ್ದರು.
ಅರೆಬೆತ್ತಲೆ ಥಳಿತ!: ತನ್ನ ಮೇಲೆ ಆರೋಪ ಮಾಡಿರುವುದು ಸುಳ್ಳು. ನಾನು ಬಹಿರ್ದೆಸೆಗೆಂದು ಜೋಳದ ಗದ್ದೆಗೆ ತೆರಳಿದ್ದೆ. ವಾಪಾಸ್ಸಾಗುತ್ತಿದ್ದ ವೇಳೆ ಶಂಕರ್ ದಾಸ್, ಪ್ರದೀಪ್ ದಾಸ್, ಪಿಂಟು ದಾಸ್, ಅಭಯ್ ದಾಸ್ ಹಾಗೂ ಇತರ ಯುವಕರು ಸೇರಿ ನನ್ನ ಮೇಲೆ ಅತ್ಯಾಚಾರ ಮಾಡಲು ಯತ್ನಿಸಿದರು. ಇದಕ್ಕೆ ವಿರೋಧ ಪಡಿಸಿ ಬೆದರಿಸಿದ್ದೆ. ಈ ಹಿನ್ನೆಲೆ ಅವರು ನನ್ನ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಹೇಳುತ್ತಿದ್ದಂತೆ ಆರೋಪ ಮಾಡಿದ ಯುವಕರಲ್ಲೊಬ್ಬ ಸುಡುತ್ತಿರುವ ಬಿದಿರಿನ ಕೋಲು ತೆಗೆದುಕೊಂಡು ಮನಬಂದಂತೆ ಥಳಿಸಿದ್ದಾನೆ. ಎಲ್ಲರೂ ನೋಡು-ನೋಡುತ್ತಿರುತ್ತಲೇ ಮಹಿಳೆಯನ್ನು ಅರೆಬೆತ್ತಲೆಗೊಳಿಸಿ ಥಳಿಸಿದ್ದಾರೆ.
ಓದಿ: ಭೀಕರ ಸುಂಟರಗಾಳಿಯನ್ನು ಗೆದ್ದು ಬಂದ ಪಿಕಪ್ ವಾಹನ : ವಿಡಿಯೋ ವೈರಲ್
ಜನ ಮೌನಕ್ಕೆ ಶರಣು : ಮಹಿಳೆಗೆ ಆ ಯುವಕ ಮನಬಂದಂತೆ ಥಳಿಸುತ್ತಿದ್ದರೂ ಯಾವೊಬ್ಬ ಗ್ರಾಮಸ್ಥ ತಡೆಯಲಿಲ್ಲ. ಮಹಿಳೆ ಪ್ರಜ್ಞೆತಪ್ಪಿ ನೆಲದ ಮೇಲೆ ಬೀಳುವವರೆಗೂ ಆ ಯುವಕ ಥಳಿಸಿ ಅಮಾನವೀಯವಾಗಿ ನಡೆದುಕೊಂಡಿದ್ದಾನೆ. ಬಳಿಕ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಮಹಿಳೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಹಿಳೆಯ ಆರೋಪ : ರಾತ್ರಿ ಹೊತ್ತು ನಾನು ನಮ್ಮ ಮನೆ ಬಳಿಯ ಜೋಳದ ಗದ್ದೆಯಲ್ಲಿ ಬಹಿರ್ದೆಸೆಗೆ ತೆರಳಿದ್ದೆ. ವಾಪಾಸ್ಸಾಗುತ್ತಿದ್ದ ವೇಳೆ ಗ್ರಾಮದ ನಿವಾಸಿಗಳಾದ ಶಂಕರ್ ದಾಸ್, ಪ್ರದೀಪ್ ದಾಸ್, ಪಿಂಟು ದಾಸ್, ಅಭಯ್ ದಾಸ್ ಹಾಗೂ ಇತರ ಯುವಕರು ಸೇರಿ ನನ್ನ ಎಲ್ಲಿಂದ ಬರುತ್ತಿದ್ದೆ ಎಂದು ಪ್ರಶ್ನಿಸಿದರು. ನನ್ನ ಹೊಟ್ಟೆ ಕೆಟ್ಟಿದೆ, ಆದ್ದರಿಂದ ಮಲವಿಸರ್ಜನೆಗೆ ಬಂದಿದ್ದೇನೆ ಎಂದು ಹೇಳಿದೆ.
ಈ ವೇಳೆ ಅವರು ನನ್ನ ಮೇಲೆ ಅತ್ಯಾಚಾರ ಮಾಡಲು ಯತ್ನಿಸಿದರು. ಆಗ ನನ್ನ ಚಿನ್ನಾಭರಣ ದೋಚಿದರು ಮತ್ತು ಈ ಸಂಪೂರ್ಣ ಘಟನೆ ಮೊಬೈಲ್‌ನಲ್ಲಿ ವಿಡಿಯೋ ಸಹ ಮಾಡಿದ್ರು. ಅತ್ಯಾಚಾರಕ್ಕೆ ವಿರೋಧ ವ್ಯಕ್ತಪಡಿಸಿ ಅವರಿಗೆ ಬೆದರಿಸಿದೆ. ಇದನ್ನು ಮನಸ್ಸಿನಲ್ಲಿಟ್ಟುಕೊಂಡು ನನ್ನ ಮೇಲೆ ಷಡ್ಯಂತ್ರ ರಚಿಸಿ ಈ ರೀತಿ ಮಾಡಿದ್ದಾರೆ ಎಂಬುದು ಮಹಿಳೆಯ ಆರೋಪವಾಗಿದೆ.
ಓದಿ: ನೋಯ್ಡಾ ಮೂಢನಂಬಿಕೆ ಸುಳ್ಳು ಮಾಡಿದ ಯೋಗಿ.. ಇಂದು 2ನೇ ಬಾರಿ ಸಿಎಂ ಆಗಿ ಪ್ರಮಾಣ.. ಕಾಳಿದಾಸ ಮಾರ್ಗಕ್ಕೆ ಸೆಡ್ಡು!
ತಪ್ಪಿತಸ್ಥರಿಗೆ ಶಿಕ್ಷೆ ಆಗುತ್ತೆ : ಸಂತ್ರಸ್ತೆಯ ಮೇಲೆ ಹಲ್ಲೆ ಮಾಡಿರುವ ವಿಚಾರ ಪೊಲೀಸರ ಗಮನಕ್ಕೆ ಬಂದಿದೆ. ಮಾರ್ಚ್ 19ರಂದು ಯುವಕರು ಅಸಭ್ಯವಾಗಿ ನಡೆದುಕೊಂಡಿದ್ದಾರೆ. ಮಾರ್ಚ್ 20ರಂದು ಥಳಿಸಿರುವ ಘಟನೆಯಾಗಿದೆ ಎಂದು ಮಹಿಳೆ ನೀಡಿರುವ ಹೇಳಿಕೆಯಲ್ಲಿ ಉಲ್ಲೇಖವಾಗಿದೆ. ಈಗಾಗಲೇ ಸಂತ್ರಸ್ತೆಗೆ ಮಾದೇಪುರದ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ತಪ್ಪಿತಸ್ಥರು ಯಾರೇ ಆಗಿರಲಿ ಅವರನ್ನು ಬಿಡುವುದಿಲ್ಲ. ಆದರೆ, ಈ ಘಟನೆ ನಡೆದಿರುವ ರೀತಿ ಮಹಿಳೆಯರ ಸುರಕ್ಷತೆಯ ಬಗ್ಗೆ ಮತ್ತೊಮ್ಮೆ ಪ್ರಶ್ನೆ ಎಬ್ಬಿಸಿದೆ. ಪಂಚಾಯತ್ ಮುಂದೆಯೇ ನಡೆದ ಅಮಾನವೀಯ ಘಟನೆಯಿಂದ ಎಲ್ಲರೂ ಬೆಚ್ಚಿಬಿದ್ದಿದ್ದಾರೆ ಎಂದು ಎಸ್ಪಿ ರಾಜೇಶ್ ಕುಮಾರ್ ತಿಳಿಸಿದ್ದಾರೆ.