ETV Bharat / bharat

ಬಿಜೆಪಿಗೆ ಗುಡ್‌ಬೈ ಹೇಳಿದ ಗೋವಾ ಮಾಜಿ ಸಿಎಂ ಪರಿಕ್ಕರ್‌ ಪುತ್ರನಿಂದ ಕೇಸರಿ ನಾಯಕರಿಗೆ ಹೊಸ ಬೇಡಿಕೆ!

ಬಿಜೆಪಿ ತೊರೆದಿರುವ ಗೋವಾ ಮಾಜಿ ಸಿಎಂ ಪರಿಕ್ಕರ್‌ ಪುತ್ರ ಉತ್ಪಾಲ್‌ ಪರಿಕ್ಕರ್‌ ಇದೀಗ ಕೇಸರಿ ನಾಯಕರಿಗೆ ಹೊಸದಾಗಿ ಬೇಡಿಕೆಯೊಂದನ್ನು ಇಟ್ಟಿದ್ದಾರೆ..

i'm ready to withdraw from poll race if the BJP fields a good candidate from Panaji: Utpal Parrikar
ಪಣಜಿಯಲ್ಲಿ ಬಿಜೆಪಿ ಒಳ್ಳೆ ಅಭ್ಯರ್ಥಿ ಕಣಕ್ಕಿಳಿಸಿದ್ರೆ ನಾನು ಸ್ಪರ್ಧಿಯಿಂದ ಹಿಂದೆ ಸರಿಯುತ್ತೇನೆ - ಉತ್ಪಾಲ್‌ ಪರಿಕ್ಕರ್‌
author img

By

Published : Jan 22, 2022, 6:22 PM IST

ಗೋವಾ : ಪಣಜಿಯಲ್ಲಿ ಬಿಜೆಪಿ ಒಳ್ಳೆಯ ಅಭ್ಯರ್ಥಿಯಿನ್ನು ಕಣಕ್ಕಿಳಿಸಿದರೆ ತಾನು ಸ್ಪರ್ಧೆಯಿಂದ ಹಿಂದೆ ಸರಿಯುತ್ತೇನೆ ಎಂದು ಪಕ್ಷೇತರ ಅಭ್ಯರ್ಥಿ ಹಾಗೂ ಗೋವಾ ಮಾಜಿ ಸಿಎಂ ಮನೋಹರ್‌ ಪರಿಕ್ಕರ್‌ ಪುತ್ರ ಉತ್ಪಾಲ್‌ ಪರಿಕ್ಕರ್‌ ಹೇಳಿದ್ದಾರೆ.

ಬಿಜೆಪಿ ತಮ್ಮ ನಡುವಿನ ಸ್ಪರ್ಧೆ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಯನ್ನು ತೊರೆದು ಹೊರ ಬಂದಿದ್ದ ಅತ್ಯಂತ ಕಷ್ಟಕರ ನಿರ್ಧಾರವಾಗಿತ್ತು. ಪಣಜಿಯಲ್ಲಿ ಬಿಜೆಪಿಯಿಂದ ಒಳ್ಳೆ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ರೆ ನಾನು ಚುನಾವಣಾ ರೇಸ್‌ನಿಂದ ಹಿಂದೆ ಸರಿಯುತ್ತೇನೆ ಎಂದಿದ್ದಾರೆ.

ಮಾಜಿ ಸಿಎಂ ಮನೋಹರ್‌ ಪರಿಕ್ಕರ್‌ ಅವರ ಪುತ್ರ ಉತ್ಪಾಲ್‌ಗೆ ಪಣಜಿಯಿಂದ ಬಿಜೆಪಿ ನಾಯಕರು ಟಿಕೆಟ್‌ ನಿರಾಕರಿಸಿದ್ದರು. ಬೇರೆ ಕಡೆ ಸ್ಪರ್ಧಿಸುವಂತೆ ಸೂಚಿಸಿದ್ದರು. ಆದರೆ, ಇದನ್ನು ಉತ್ಪಾಲ್‌ ನಿರಾಕರಿಸಿ ಪಕ್ಷ ತೊರೆದು ಪಕ್ಷೇತರರಾಗಿ ಸ್ಪರ್ಧಿಸುವುದಾಗಿ ಘೋಷಿಸಿದ್ದರು.

ಪಣಜಿ ಕ್ಷೇತ್ರದ ಹಾಲಿ ಬಿಜೆಪಿ ಶಾಸಕ ಮಾನ್ಸರೇಟ್‌ ಈ ಹಿಂದೆ ತಮ್ಮ 10 ಬೆಂಬಲಿಗ ಶಾಸಕರೊಂದಿಗೆ ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿದ್ದರು. ಹೀಗಾಗಿ, ಅವರಿಗೆ ಪಣಜಿಯಲ್ಲಿ ಟಿಕೆಟ್‌ ನಿರಾಕರಿಸಲಾಗುದು ಎಂಬುದು ಬಿಜೆಪಿಯ ವಾದವಾಗಿದೆ.

ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.