ETV Bharat / bharat

'ಸಂದರ್ಶನ ನಮ್ಮದು.. ಉದ್ಯೋಗ ನಿಮ್ಮದು': ಅಕ್ರಮ ದಂಧೆಯಾಗಿ ಮಾರ್ಪಟ್ಟ ನಕಲಿ ಸಂದರ್ಶನ..

author img

By

Published : Jul 13, 2022, 9:12 PM IST

ಈಗ ನಕಲಿ ಸಂದರ್ಶನ ನಡೆಸುವುದು ಸಣ್ಣ ಉದ್ಯಮವಾಗಿ ಮಾರ್ಪಟ್ಟಿದೆ. ಇದಕ್ಕೆ ಸಂಬಂಧಿಸಿದ ಪ್ರಕಟಣೆಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಒಂದು ಸಂದರ್ಶನಕ್ಕೆ 10-15 ಸಾವಿರ ರೂ.ವರೆಗೆ ಪಡೆಯುವ ದಂಧೆಯಾಗಿದೆ.

Illegal business in the name of proxy interview
'ಸಂದರ್ಶನ ನಮ್ಮದು...ಉದ್ಯೋಗ ನಿಮ್ಮದು': ಅಕ್ರಮ ದಂಧೆಯಾಗಿ ಮಾರ್ಪಟ್ಟ ನಕಲಿ ಸಂದರ್ಶನ

ಹೈದರಾಬಾದ್: ನೀವು ಯಾವುದಾದರೂ ಸಾಫ್ಟ್‌ವೇರ್ ಕಂಪನಿಯಲ್ಲಿ ಹುದ್ದೆಗೆ ಅರ್ಜಿ ಸಲ್ಲಿಸಿದ್ದೀರಾ?. ಸಂದರ್ಶನದ ಪ್ರಶ್ನೆಗಳ ಬಗ್ಗೆ ಖಚಿತತೆ ಆಗಿಲ್ಲವೇ?. ನಿಮ್ಮ ಬದಲು ಬೇರೆಯವರು ಸಂದರ್ಶನದಲ್ಲಿ ಭಾಗವಹಿಸಬೇಕೇ?... ಹೀಗೆ 'ಸಂದರ್ಶನ ನಮ್ಮದು.. ಉದ್ಯೋಗ ನಿಮ್ಮದು' ಎಂಬ ಜಾಹೀರಾತುಗಳನ್ನು ನೀವು ನಂಬುತ್ತಿದ್ದರೆ, ಸ್ವಲ್ವ ಹುಷಾರ್​ ಆಗಿರುವುದು ಉತ್ತಮ..

ಹೌದು, ಉದ್ಯೋಗ ಪಡೆಯಬೇಕೆಂದು ಪ್ರತಿಯೊಬ್ಬರ ಕನಸು. ಆದರೆ, ಕಂಪನಿಯ ಸಂದರ್ಶನ ಹೇಗಿರುತ್ತದೆ ಎಂಬ ಭಯ ಎಲ್ಲರಿಗೂ ಇರುತ್ತದೆ. ಇದನ್ನು ಬಂಡವಾಳ ಮಾಡಿಕೊಳ್ಳಲಾಗುತ್ತದೆ. ನಮ್ಮ ಕಂಪನಿಯನ್ನು ಸಂಪರ್ಕಿಸಿ ನಿಮ್ಮ ಪರವಾಗಿ ಆಯಾ ವಿಷಯಗಳ ತಜ್ಞರು ಸಂದರ್ಶನಕ್ಕೆ ಹಾಜರಾಗುತ್ತಾರೆ ಎಂಬ ಜಾಹೀರಾತುಗಳು ಸಾಮಾಜಿಕ ಜಾಲತಾಣಗಳು ಮತ್ತು ವಿವಿಧ ಉದ್ಯೋಗ ಏಜೆನ್ಸಿಗಳ ವೆಬ್‌ಸೈಟ್‌ಗಳಲ್ಲಿ ತುಂಬಿರುತ್ತವೆ.

ಒಬ್ಬರ ಬದಲು ಇನ್ನೊಬ್ಬರು ಸಂದರ್ಶನಕ್ಕೆ ಹಾಜರಾಗುವುದು ಅಪರಾಧ ಎಂದು ಗೊತ್ತಿದ್ದರೂ, ಸಾರ್ವಜನಿಕವಾಗಿ ಇಂತಹ ಜಾಹೀರಾತುಗಳಿಂದ ಅಭ್ಯರ್ಥಿಗಳು ಸಹ ಆಕರ್ಷಿತರಾಗುತ್ತಿದ್ದಾರೆ. ಆದರೆ, ಸಂದರ್ಶನಗಳನ್ನು ನಡೆಸಲು ಪ್ರತ್ಯೇಕವಾದ ಸಂಸ್ಥೆಗಳನ್ನು ಹುಟ್ಟು ಹಾಕಿದ್ದಾರೆ. ಈ ಅಕ್ರಮ ದಂಧೆಗೆ ಕಡಿವಾಣ ಹಾಕಲು ಪೊಲೀಸರು ಸಹ ಗಮನ ಸೆಳೆದಿದ್ದಾರೆ.

ಅಸಲಿ ಅಭ್ಯರ್ಥಿಗಳ ಬದಲಿಗೆ ನಕಲಿ ಅಭ್ಯರ್ಥಿಗಳು: ಉದ್ಯೋಗ ಆಕಾಂಕ್ಷಿಗಳು ಸೂಕ್ತ ವಿದ್ಯಾರ್ಹತೆ ಹೊಂದಿದ್ದಾರೆಯೇ ಅಥವಾ ಇಲ್ಲವೇ ಎಂಬುದನ್ನು ಕಂಡುಹಿಡಿಯಲು ಕಂಪನಿಗಳು ಅನೇಕ ಪರೀಕ್ಷೆಗಳನ್ನು ನಡೆಸುತ್ತವೆ. ಈ ಪರೀಕ್ಷೆಗಳು ಎದುರಿಸಿ ಕೆಲಸವನ್ನು ಸಮರ್ಥವಾಗಿ ನಿರ್ವಹಿಸಬಲ್ಲವರನ್ನು ಮಾತ್ರ ಆಯ್ಕೆ ಮಾಡಲಾಗುತ್ತದೆ. ಆದರೆ, ಇಲ್ಲಿಯೇ ಕೆಲ ಅಭ್ಯರ್ಥಿಗಳು ಅಕ್ರಮಕ್ಕೆ ಮುಂದಾಗಿದ್ದಾರೆ.

ತಮ್ಮ ಬದಲಾಗಿ ಮತ್ತೊಬ್ಬರನ್ನು ಪರೀಕ್ಷೆಗೆ ಕೂಡಿಸುವ ಅಪಾಯ ಮಾಡುತ್ತಾರೆ. ಈ ತಂತ್ರ ಹಿಂದೆಯೂ ಇತ್ತು. ಅಸಲಿ ಅಭ್ಯರ್ಥಿಗಳ ಬದಲಿಗೆ ನಕಲಿ ಅಭ್ಯರ್ಥಿಗಳು ಲಿಖಿತ ಪರೀಕ್ಷೆ ಬರೆಯುತ್ತಿದ್ದರು. ಆದರೆ, ಈಗಿನ ಬದಲಾದ ತಂತ್ರಜ್ಞಾನ ಸಂದರ್ಶನಗಳ ಅಕ್ರಮಕ್ಕೂ ಕುಮ್ಮಕ್ಕು ಕೊಡುತ್ತಿದೆ.

ಕೊರೊನಾ ಹಾವಳಿ ಆರಂಭವಾದ ನೇರ ಮತ್ತು ವೈಯಕ್ತಿಕ ಸಂದರ್ಶನಗಳನ್ನು ತೆಗೆದುಕೊಳ್ಳುವುದು ನಿಲ್ಲಿಸಲಾಗಿದೆ. ಇದರ ಬದಲಿಗೆ ಆನ್‌ಲೈನ್‌ನಲ್ಲಿ ಸಂದರ್ಶನಗಳು ಪ್ರಾರಂಭವಾಗಿವೆ. ಇತ್ತೀಚಿನ ವರ್ಷಗಳಲ್ಲಿ ಸಾಫ್ಟ್‌ವೇರ್ ಕ್ಷೇತ್ರದಲ್ಲಿ ಹೆಚ್ಚುತ್ತಿರುವ ಉದ್ಯೋಗಾವಕಾಶಗಳು ಆಕಾಂಕ್ಷಿಗಳಿಗೆ ವರವಾಗಿ ಪರಿಣಮಿಸಿದೆ. ಸಾಫ್ಟ್‌ವೇರ್ ಬಗ್ಗೆ ಕನಿಷ್ಠ ಜ್ಞಾನ ಇಲ್ಲದವರೂ ಅರ್ಜಿ ಸಲ್ಲಿಸುತ್ತಾರೆ.

ತಮಗೆ ವರ್ಷಗಳ ಅನುಭವವಿದೆ ಎಂದು ಸುಳ್ಳು ದಾಖಲೆಗಳನ್ನೂ ಸಲ್ಲಿಕೆ ಮಾಡುತ್ತಾರೆ. ಆದರೆ, ಕಂಪನಿಗಳು ಸಂದರ್ಶನಕ್ಕೆ ಕರೆದಾಗ ಇಂತಹ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ದೂರ ಉಳಿದು, ಆ ಕ್ಷೇತ್ರದ ಅನುಭವಿಗಳನ್ನು ಸಂದರ್ಶನಕ್ಕೆ ಹಾಜರು ಪಡಿಸುತ್ತಾರೆ. ಅಂದರೆ, ನಕಲಿ ಅಭ್ಯರ್ಥಿಗಳು ಮೂಲ ಅಭ್ಯರ್ಥಿಗಳ ಪರವಾಗಿ ಸಂದರ್ಶನದಲ್ಲಿ ಭಾಗವಹಿಸುತ್ತಾರೆ.

ಒಂದು ಸಂದರ್ಶನಕ್ಕೆ ಇಂತಿಷ್ಟು ಹಣ: ಈಗ ನಕಲಿ ಸಂದರ್ಶನ ನಡೆಸುವುದು ಸಣ್ಣ ಉದ್ಯಮವಾಗಿ ಮಾರ್ಪಟ್ಟಿದೆ. ಇದಕ್ಕೆ ಸಂಬಂಧಿಸಿದ ಪ್ರಕಟಣೆಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಒಂದು ಸಂದರ್ಶನಕ್ಕೆ 10-15 ಸಾವಿರ ರೂ.ವರೆಗೆ ಪಡೆಯುವ ದಂಧೆಯಾಗಿದೆ. ಕೆಲವರು ವಿವಿಧ ಸಾಫ್ಟ್​ವೇರ್ ಕೋರ್ಸ್​ಗಳ ತಜ್ಞರ ನೆರವಿನಿಂದ ಇದನ್ನು ನಡೆಸುತ್ತಿದ್ದಾರೆ.

ನಿಮ್ಮ ಪರವಾಗಿ ಸಂದರ್ಶನದಲ್ಲಿ ಭಾಗವಹಿಸಲು ನಮ್ಮಲ್ಲಿ ಪರಿಣಿತರು ಇದ್ದಾರೆ ಮತ್ತು 'ಕೆಲಸ ಗ್ಯಾರಂಟಿ' ಎಂದೆಲ್ಲ ಪ್ರಚಾರ ಮಾಡುತ್ತಾರೆ. ಸಂದರ್ಶನಗಳು ಮಾತ್ರವಲ್ಲದೇ, ಇಂತಹ ಕಂಪನಿಗಳು ಅಭ್ಯರ್ಥಿಗಳಿಗೆ ಅನುಭವದ ದಾಖಲೆಗಳು ಮತ್ತು ಸಂಬಳದ ಸ್ಲಿಪ್‌ಗಳನ್ನು ಒದಗಿಸುವುದಾಗಿಯೂ ಜಾಹೀರಾತು ನೀಡುತ್ತಿವೆ.

ಗುಣಮಟ್ಟಕ್ಕೆ ಹೊಡೆತ: ಇಂತಹ ನಕಲಿ ಸಂದರ್ಶನಗಳಿಂದ ಕ್ಷೇತ್ರದ ಜ್ಞಾನವಿಲ್ಲದ ಜನರು ಕೆಲಸಕ್ಕೆ ಸೇರುತ್ತಿದ್ದಾರೆ. ಕೆಲಸದ ಗುಣಮಟ್ಟ ಸಹ ಕೆಟ್ಟುಹೋಗಿದೆ. ಕೆಲಸದಲ್ಲಿ ಅನೇಕ ತಪ್ಪುಗಳನ್ನು ಮಾಡಲಾಗುತ್ತದೆ. ಇದು ಇಡೀ ಯೋಜನೆಯು ಪರಿಣಾಮ ಬೀರುತ್ತದೆ. ಅಲ್ಲದೇ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತೀಯ ಸಾಫ್ಟ್‌ವೇರ್ ಉದ್ಯಮಗಳ ಬಗ್ಗೆ ಕೆಟ್ಟ ಅಭಿಪ್ರಾಯವನ್ನೂ ಸೃಷ್ಟಿಸುತ್ತದೆ. ಎಷ್ಟೇ ಮುಂಜಾಗ್ರತೆ ವಹಿಸಿದರೂ ಕೆಲವು ನಕಲಿಗಳು ಸಂದರ್ಶನಕ್ಕೆ ಹಾಜರಾಗುತ್ತಲೇ ಇರುತ್ತಾರೆ. ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳದ ಹೊರತು ಇದನ್ನು ತಡೆಯುವುದು ಕಷ್ಟ ಎನ್ನುತ್ತಾರೆ ಝೀಟಾ ಮೈನ್ ಲ್ಯಾಬ್ಸ್ ಪ್ರೈವೇಟ್ ಲಿಮಿಟೆಡ್​ ಎಂಡಿ ನಾಗೇಶ್ವರ ಗುಪ್ತಾ.

ದೂರು ನೀಡಿದ್ರೆ ಕ್ರಮ: ಪ್ರಾಕ್ಸಿ ಸಂದರ್ಶನಗಳ ಬಗ್ಗೆಯೂ ಪೊಲೀಸ್​ ಇಲಾಖೆಗೂ ಬಳಿ ಮಾಹಿತಿ ಇದೆ. ಸೂಕ್ತ ಸಾಕ್ಷ್ಯಾಧಾರಗಳೊಂದಿಗೆ ಯಾರಾದರೂ ದೂರು ನೀಡಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಹೈದರಾಬಾದ್​ ಸೈಬರ್ ಕ್ರೈಂ ವಿಭಾಗ ಎಸಿಪಿ ಕೆವಿಎನ್ ಪ್ರಸಾದ್ ಹೇಳಿದ್ದಾರೆ.

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.