ETV Bharat / bharat

ಐಐಟಿ ಖರಗ್‌ಪುರದ ಕ್ಯಾಂಪಸ್‌ನಲ್ಲಿ 60 ಜನರಿಗೆ ಕೊರೊನಾ - ವಿದ್ಯಾರ್ಥಿಗಳು ಮತ್ತು ಸಂಶೋಧಕರಿಗೆ ಕೊರೊನಾ

ವಿದ್ಯಾರ್ಥಿ-ಸಂಶೋಧಕರನ್ನು ಹೊರತುಪಡಿಸಿ, ಇತರ 20 ಸೋಂಕಿತರು ಬೋಧಕೇತರ ಸಿಬ್ಬಂದಿಯಾಗಿದ್ದಾರೆ. ಕ್ಯಾಂಪಸ್‌ನಲ್ಲಿರುವ ಆಸ್ಪತ್ರೆಯಲ್ಲಿ ಸೋಂಕಿತರ ಆರೋಗ್ಯ ಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿರುವುದರಿಂದ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ತಮಲ್ ನಾಥ್ ಹೇಳಿದ್ದಾರೆ..

ಐಐಟಿ ಖರಗ್‌ಪುರದ ಕ್ಯಾಂಪಸ್‌ನಲ್ಲಿ 60 ಜನರಿಗೆ ಕೊರೊನಾ

author img

By

Published : Jan 4, 2022, 3:50 PM IST

ಖರಗ್‌ಪುರ : ಐಐಟಿ ಖರಗ್‌ಪುರದ ಕ್ಯಾಂಪಸ್‌ನಲ್ಲಿ ನೆಲೆಸಿರುವ 40 ವಿದ್ಯಾರ್ಥಿಗಳು ಮತ್ತು ಸಂಶೋಧಕರು ಸೇರಿ 60 ಜನರಿಗೆ ಕೊರೊನಾ ದೃಢಪಟ್ಟಿದೆ.

ಸೋಂಕಿತರಲ್ಲಿ ಹೆಚ್ಚಿನವರು ಸೌಮ್ಯವಾದ ರೋಗಲಕ್ಷಣಗಳು ಅಥವಾ ಲಕ್ಷಣರಹಿತರಾಗಿದ್ದಾರೆ. ಇವರೆಲ್ಲರಿಗೂ ಈಗ ಪ್ರತ್ಯೇಕವಾಗಿ ಇರಲು ಅವಕಾಶ ಮಾಡಿಕೊಡಲಾಗಿದೆ ಎಂದು ಐಐಟಿ ಖರಗ್‌ಪುರದ ರಿಜಿಸ್ಟ್ರಾರ್ ತಮಲ್ ನಾಥ್ ಮಾಹಿತಿ ನೀಡಿದ್ದಾರೆ.

ವಿದ್ಯಾರ್ಥಿ-ಸಂಶೋಧಕರನ್ನು ಹೊರತುಪಡಿಸಿ, ಇತರ 20 ಸೋಂಕಿತರು ಬೋಧಕೇತರ ಸಿಬ್ಬಂದಿಯಾಗಿದ್ದಾರೆ. ಕ್ಯಾಂಪಸ್‌ನಲ್ಲಿರುವ ಆಸ್ಪತ್ರೆಯಲ್ಲಿ ಸೋಂಕಿತರ ಆರೋಗ್ಯ ಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿರುವುದರಿಂದ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ತಮಲ್ ನಾಥ್ ಹೇಳಿದ್ದಾರೆ.

ಇದನ್ನೂ ಓದಿ: ಬೆಂಗಳೂರು: ಜಗಳ ಬಿಡಿಸಲು ಹೋಗಿ ಸ್ನೇಹಿತನ ಕೊಲೆಗೈದ ಯುವಕರ ಬಂಧನ

ಐಐಟಿ ಖರಗ್‌ಪುರದಲ್ಲಿರುವ ಸದಸ್ಯರು ಜ್ವರದಂತಹ ರೋಗಲಕ್ಷಣಗಳನ್ನು ಹೊಂದಿದ್ದರೆ ಪರೀಕ್ಷಿಸಿಕೊಳ್ಳುವಂತೆ ನಾವು ಒತ್ತಾಯಿಸುತ್ತಿದ್ದೇವೆ ಮತ್ತು ಅವರು ಸಹ ನಮ್ಮ ಸಲಹೆ ಸ್ವೀಕರಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಕಳೆದ ಎರಡು ದಿನಗಳಲ್ಲಿ ಕೋವಿಡ್ ಹಠಾತ್ ಉಲ್ಬಣ ಹಿನ್ನೆಲೆ ನಾವು ಮತ್ತೆ ತರಗತಿಗಳನ್ನ ಪುನಾರಂಭಿಸದೆ ಮುಂದೂಡುತ್ತಿದ್ದೇವೆ. ಹಾಗೆ ಆನ್‌ಲೈನ್ ತರಗತಿಗಳಿಗೆ ಮಾತ್ರ ಒತ್ತು ನೀಡುತ್ತೇವೆ ಎಂದು ವಿವರಿಸಿದ್ದಾರೆ.

ಡಿಸೆಂಬರ್ 27ರ ನಂತರ ಸುಮಾರು 2000 ವಿದ್ಯಾರ್ಥಿಗಳು ಕ್ಯಾಂಪಸ್‌ಗೆ ಬಂದಿದ್ದರು. ಆದರೆ, ಕೋವಿಡ್ ಮತ್ತೆ ಕಾಣಿಸಿದ ಹಿನ್ನೆಲೆ ಅವರ ಬರುವಿಕೆಯನ್ನು ತಡೆಹಿಡಿಯಲಾಗಿದೆ ಎಂದು ಇನ್ಸ್‌ಟಿಟ್ಯೂಟ್‌ನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.