ETV Bharat / bharat

ಮೂಗಿನ ರಂಧ್ರಕ್ಕೆ ಹಾಕಿಕೊಳ್ಳುವ ಚಿಕ್ಕ ಮಾಸ್ಕ್​ ಆವಿಷ್ಕರಿಸಿದ ದೆಹಲಿ ಐಐಟಿ.. ಎನ್​-95 ಮಾಸ್ಕ್​ನಷ್ಟೇ ಕೆಲಸ ಮಾಡುತ್ತಂತೆ! - ಮೂಗಿನ ರಂಧ್ರಕ್ಕೆ ಹಾಕಿಕೊಳ್ಳುವ ಮಾಸ್ಕ್​

ವಿಮಾನ ನಿಲ್ದಾಣಗಳು, ಭದ್ರತಾ ತಪಾಸಣೆಯ ವೇಳೆ ಮಾಸ್ಕ್​ ಮುಖವಾಡದಂತೆ ಕಾಣುವ ಹಿನ್ನೆಲೆ ಅದನ್ನು ತೆಗೆಯಬೇಕಾಗುತ್ತದೆ. ಅಂತಹ ವೇಳೆ ಈ ನಾಸೋ-95 ಸಹಾಯಕ್ಕೆ ಬರುತ್ತದೆ ಎಂದು ಕಂಪನಿ ತಿಳಿಸಿದೆ..

air-purifier
ಚಿಕ್ಕ ಮಾಸ್ಕ್
author img

By

Published : Feb 27, 2022, 4:52 PM IST

ನವದೆಹಲಿ : ದೆಹಲಿಯ ಇಂಡಿಯನ್​ ಇನ್​ಸ್ಟಿಟ್ಯೂಟ್​ ಆಫ್​ ಟೆಕ್ನಾಲಜಿ(ಐಐಟಿ) ಮೂಲದ ಸ್ಟಾರ್ಟ್​ಅಪ್​ ಅತಿಚಿಕ್ಕದಾದ ಗಾಳಿಯನ್ನು ಶುದ್ಧೀಕರಿಸುವ ಮಾಸ್ಕ್​ನಂತೆ ಧರಿಸಬಹುದಾದ ಸಾಧನವನ್ನು ಆವಿಷ್ಕರಿಸಿದೆ.

ನಾಸೋ-95 ಎಂದು ಹೆಸರಿಸಲಾದ ಈ ಚಿಕ್ಕ ಸಾಧನ ಮೂಗಿನ ರಂಧ್ರಕ್ಕೆ ಅಂಟಿಕೊಂಡು, ಗಾಳಿಯನ್ನು ಶುದ್ಧೀಕರಿಸುತ್ತದೆ. ಅಲ್ಲದೇ, ಬ್ಯಾಕ್ಟೀರಿಯಾ, ವೈರಲ್​ ಸೋಂಕು, ವಾಯುಮಾಲಿನ್ಯವನ್ನು ತಡೆಯುತ್ತದೆ. ಇದು ಈಗಿರುವ ಎನ್​-95 ಮಾಸ್ಕ್​ನಷ್ಟೇ ದಕ್ಷತೆ ಹೊಂದಿದೆ ಎಂಬುದು ಕಂಪನಿಯ ಸ್ಪಷ್ಟನೆ.

Naso95 ಅನ್ನು ಬಳಸುವ ವ್ಯಕ್ತಿಯು ಜೆನೆರಿಕ್ ಫೇಸ್‌ಮಾಸ್ಕ್ ಅಥವಾ ಸಡಿಲವಾಗಿ ಮುಖದ ಮೇಲೆ ಧರಿಸುವ ಮಾಸ್ಕ್‌ಗಿಂತ ಹೆಚ್ಚು ಸುರಕ್ಷಿತವಾಗಿದೆ ಎಂದು ಕಂಪನಿ ಹೇಳಿಕೊಂಡಿದೆ. Naso95 ಫೇಸ್‌ ಮಾಸ್ಕ್‌ನಂತೆ ದೊಡ್ಡದಾಗಿರದೇ 5 ವರ್ಷ ವಯಸ್ಸಿನವರೂ ಸಹ ಇದನ್ನು ಧರಿಸಬಹುದು.

ವಿಭಿನ್ನ ಗಾತ್ರಗಳಲ್ಲಿ ಇದು ಲಭ್ಯವಿದೆ. ಈ ಉತ್ಪನ್ನದ ಸುರಕ್ಷತೆ ಮತ್ತು ದಕ್ಷತೆಯ ಬಗ್ಗೆ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಲ್ಯಾಬ್‌ಗಳಲ್ಲಿ ಪರೀಕ್ಷಿಗೆ ಒಳಗಾಗಿದೆ ಮತ್ತು ಪ್ರಮಾಣೀಕೃತಗೊಂಡಿದೆ ಎಂದು ಕಂಪನಿ ತಿಳಿಸಿದೆ.

ವಿಮಾನ ನಿಲ್ದಾಣಗಳು, ಭದ್ರತಾ ತಪಾಸಣೆಯ ವೇಳೆ ಮಾಸ್ಕ್​ ಮುಖವಾಡದಂತೆ ಕಾಣುವ ಹಿನ್ನೆಲೆ ಅದನ್ನು ತೆಗೆಯಬೇಕಾಗುತ್ತದೆ. ಅಂತಹ ವೇಳೆ ಈ ನಾಸೋ-95 ಸಹಾಯಕ್ಕೆ ಬರುತ್ತದೆ ಎಂದು ಕಂಪನಿ ತಿಳಿಸಿದೆ.

ಓದಿ: ಕೊಳವೆ ಬಾವಿಯೊಳಗೆ ಬಿದ್ದ ಬಾಲಕ.. ರಕ್ಷಣಾ ಕಾರ್ಯಾಚರಣೆ ಚುರುಕು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.