ETV Bharat / bharat

ಐಐಟಿ ಬಾಂಬೆ ಭಾರತದ ಅತ್ಯತ್ತಮ ಶಿಕ್ಷಣ ಸಂಸ್ಥೆ..ಕ್ಯೂಎಸ್ ವರ್ಲ್ಡ್ ಯೂನಿವರ್ಸಿಟಿ ಶ್ರೇಯಾಂಕ - ಕ್ಯೂಎಸ್ ವರ್ಲ್ಡ್ ಯೂನಿವರ್ಸಿಟಿ ಶ್ರೇಯಾಂಕ

ಇತ್ತೀಚೆಗೆ ಲಂಡನ್‌ನಲ್ಲಿ ಬಿಡುಗಡೆಯಾದ ಶ್ರೇಯಾಂಕಗಳಲ್ಲಿ, ಉದ್ಯೋಗ, ಸಾಮಾಜಿಕ ಕಾಳಜಿ ಮತ್ತು ಕಾಲೇಜು ವಾತಾವರಣದ ಉತ್ಕೃಷ್ಟತೆಗಾಗಿ ಐಐಟಿ ಬಾಂಬೆಯನ್ನು ಭಾರತದ ಉನ್ನತ ಉನ್ನತ ಶಿಕ್ಷಣ ಸಂಸ್ಥೆ ಎಂದು ಪರಿಗಣಿಸಿ, ಶ್ರೇಯಾಂಕ ನೀಡಲಾಗಿದೆ. ಐಐಟಿ ದೆಹಲಿ ಎರಡನೇ ಸ್ಥಾನದಲ್ಲಿದೆ.

IIT Bombay best
ಐಐಟಿ ಬಾಂಬೆ ಶಿಕ್ಷಣ ಸಂಸ್ಥೆ
author img

By

Published : Oct 28, 2022, 11:35 AM IST

ನವದೆಹಲಿ: 'ಕ್ಯೂಎಸ್ ವರ್ಲ್ಡ್ ಯೂನಿವರ್ಸಿಟಿ ಶ್ರೇಯಾಂಕಗಳು: ಸುಸ್ಥಿರತೆ 2023' ಪ್ರಕಾರ ಐಐಟಿ ಬಾಂಬೆ ಭಾರತದ ಅತ್ಯುತ್ತಮ ಶಿಕ್ಷಣ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇತ್ತೀಚೆಗೆ ಲಂಡನ್‌ನಲ್ಲಿ ಬಿಡುಗಡೆಯಾದ ಶ್ರೇಯಾಂಕಗಳಲ್ಲಿ, ಉದ್ಯೋಗ, ಸಾಮಾಜಿಕ ಕಾಳಜಿ ಮತ್ತು ಕಾಲೇಜು ವಾತಾವರಣದ ಉತ್ಕೃಷ್ಟತೆಗಾಗಿ ಐಐಟಿ ಬಾಂಬೆಯನ್ನು ಭಾರತದ ಉನ್ನತ ಉನ್ನತ ಶಿಕ್ಷಣ ಸಂಸ್ಥೆ ಎಂದು ಪರಿಗಣಿಸಿ, ಶ್ರೇಯಾಂಕ ನೀಡಲಾಗಿದೆ.

ಐಐಟಿ ಬಾಂಬೆ 281-300 ಶ್ರೇಣಿಯ ಶ್ರೇಯಾಂಕದಲ್ಲಿ ಕಾಣಿಸಿಕೊಂಡಿದ್ದು, ನಂತರದ ಸ್ಥಾನದಲ್ಲಿ ಐಐಟಿ ದೆಹಲಿ 321 - 340ರ ಶ್ರೇಣಿ ಮತ್ತು ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯ (JNU) 361-380 ಶ್ರೇಣಿಯಲ್ಲಿ ಮೂರನೇ ಸ್ಥಾನದಲ್ಲಿ ಗುರುತಿಸಿಕೊಂಡಿದೆ. ಇದಲ್ಲದೇ, ಐಐಟಿ ಬಾಂಬೆ ತನ್ನ ಪದವೀಧರರ ಉದ್ಯೋಗದ ಆಧಾರದ ಮೇಲೆ ವಿಶ್ವದ ಅಗ್ರ 100 ಸಂಸ್ಥೆಗಳಲ್ಲಿ ಒಂದು ಎನಿಸಿಕೊಂಡಿದೆ.

ಐಐಟಿ ದೆಹಲಿ ತನ್ನ ಉದ್ಯೋಗ ಮತ್ತು ಕಾಲೇಜು ವಾತಾವರಣಕ್ಕಾಗಿ ಶ್ರೇಯಾಂಕವನ್ನು ಪಡೆದಿದ್ದರೆ, ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯ (JNU) ಲಿಂಗ ಸಮಾನತೆ ಮತ್ತು ಇತರ ಅಸಮಾನತೆಗಳನ್ನು ತೆಗೆದುಹಾಕುವಲ್ಲಿ ಶ್ರೇಯಾಂಕವನ್ನು ಪಡೆದಿದೆ. ಸ್ಪರ್ಧೆ ಮತ್ತು ಶೈಕ್ಷಣಿಕ ಸ್ವಾತಂತ್ರ್ಯದ ವಿಷಯದಲ್ಲಿ ದೆಹಲಿ ವಿಶ್ವವಿದ್ಯಾಲಯ ಭಾರತದಲ್ಲಿ ನಾಲ್ಕನೇ ಸ್ಥಾನದಲ್ಲಿದೆ.

ಜೆಎನ್​​​ಯು ವಿದ್ಯಾರ್ಥಿಗಳ ಹರ್ಷ: ಜೆಎನ್‌ಯು ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಶ್ರೇಯಾಂಕದಲ್ಲಿ ವಿಶ್ವವಿದ್ಯಾಲಯದ ಸಾಧನೆಗೆ ಹರ್ಷ ವ್ಯಕ್ತಪಡಿಸಿದ್ದಾರೆ. ಜೆಎನ್​ಯು ಉಪಕುಲಪತಿ ಪ್ರೊಫೆಸರ್ ಶಾಂತಿಶ್ರೀ ಡಿ.ಪಂಡಿತ್, ಡಾ. ಭೀಮ್ ರಾವ್ ಅಂಬೇಡ್ಕರ್ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಕನಸನ್ನು ನನಸಾಗಿಸಿದ ಜೆಎನ್​ಯು ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಅಭಿನಂದನೆಗಳು ಎಂದು ಸಂತೋಷ ವ್ಯಕ್ತಪಡಿಸಿದ್ದಾರೆ.

ಶ್ರೇಯಾಂಕದಲ್ಲಿ ಪಶ್ಚಿಮ ಬಂಗಾಳದ ಐಐಟಿ ಖರಗ್‌ಪುರ 551-600 ಶ್ರೇಯಾಂಕದಲ್ಲಿದ್ದು, ವಿಶ್ವವಿದ್ಯಾಲಯ ನಿರಂತರ ಮತ್ತು ನಿಯಮಿತ ಸಂಶೋಧನಾ ಪ್ರಯತ್ನಗಳಲ್ಲಿ ಅತ್ಯುನ್ನತವಾಗಿದೆ. ಐಐಟಿ ಖರಗ್‌ಪುರವು ಜೀವನಶೈಲಿ ಮತ್ತು ಆರೋಗ್ಯವನ್ನು ಸುಧಾರಿಸಲು ಅನೇಕ ವಿಶೇಷ ಉಪಕ್ರಮಗಳನ್ನು ತೆಗೆದುಕೊಂಡಿದ್ದು, ಜಾಗತಿಕವಾಗಿ ಮೆಚ್ಚುಗೆ ಪಡೆಯುತ್ತಿದೆ. ಉತ್ತರಾಖಂಡದ ಐಐಟಿ ರೂರ್ಕಿ ವಿರ್ಶವವಿದ್ಯಾಲಯ ಪಟ್ಟಿಯ 451-500 ಶ್ರೇಣಿಯಲ್ಲಿದೆ.

ಕ್ಯಾಲಿಫೋರ್ನಿಯಾ ವಿವಿಗೆ ಅಗ್ರ ಸ್ಥಾನ: ಜಾಗತಿಕವಾಗಿ, ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯವನ್ನು ಉನ್ನತ ವಿಶ್ವವಿದ್ಯಾಲಯವೆಂದು ಘೋಷಿಸಲಾಗಿದ್ದು, ಟೊರೊಂಟೊ ವಿಶ್ವವಿದ್ಯಾಲಯ ಮತ್ತು ಬ್ರಿಟಿಷ್ ಕೊಲಂಬಿಯಾ ವಿಶ್ವವಿದ್ಯಾಲಯಗಳು ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿವೆ. ಯುಎಸ್​ನ 135 ವಿಶ್ವವಿದ್ಯಾಲಯಗಳು ಶ್ರೇಯಾಂಕ ಗಳಿಸಿದ್ದು, ಒಟ್ಟು 19.2 ಪ್ರತಿಶತದಷ್ಟು ಯುಎಸ್​ ಪ್ರಾಬಲ್ಯ ಹೊಂದಿದೆ. ಅದರಲ್ಲೂ ಯುಎಸ್​ನ 30 ವಿಶ್ವವಿದ್ಯಾಲಯಗಳು ಟಾಪ್​ 100ರಲ್ಲಿ ಸ್ಥಾನ ಗಳಿಸಿವೆ.

67 ಬ್ರಿಟಿಷ್​ ವಿಶ್ವವಿದ್ಯಾಲಯಗಳು ಶ್ರೇಯಾಂಕ ಗಳಿಸುವುದರೊಂದಿಗೆ ಯುಕೆ ಎರಡನೇ ಸ್ಥಾನದಲ್ಲಿದೆ. ಯುಎಸ್ ಮತ್ತು ಯುಕೆ ನಂತರ, ಆಸ್ಟ್ರೇಲಿಯಾ ಮತ್ತು ಜರ್ಮನಿ ಈ ಶ್ರೇಯಾಂಕದಲ್ಲಿ ಮುಂಚೂಣಿಯಲ್ಲಿವೆ.

ಇದನ್ನೂ ಓದಿ: NIRF ರ‍್ಯಾಂಕಿಂಗ್​ ಪಟ್ಟಿ ಬಿಡುಗಡೆ : 76 ರಿಂದ 19ನೇ ರ‍್ಯಾಂಕ್​​ಗೆ ಜಿಗಿದ ಮೈಸೂರು ವಿವಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.