ನವದೆಹಲಿ : ಲಕ್ಷದ್ವೀಪ ಆಡಳಿತಾಧಿಕಾರಿ ಪ್ರಫುಲ್ ಪಟೇಲ್ ಅವರನ್ನು ತಕ್ಷಣ ಅಧಿಕಾರದಿಂದ ತೆಗೆದು ಹಾಕುವಂತೆ ಕಾಂಗ್ರೆಸ್ ಒತ್ತಾಯಿಸಿದ ಒಂದು ದಿನದ ನಂತರ ಮಾತನಾಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ದ್ವೀಪಗಳ ಶಾಂತಿ ಮತ್ತು ಸಂಸ್ಕೃತಿಯನ್ನು ನಾಶಪಡಿಸುತ್ತಿದ್ದಾರೆ. ಅನಿಯಂತ್ರಿತ ನಿರ್ಬಂಧಗಳನ್ನು ವಿಧಿಸುವ ಮೂಲಕ ಜನರಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದರು.
'ಲಕ್ಷದ್ವೀಪ ಭಾರತದ ಆಭರಣವಿದ್ದಂತೆ. ಅಧಿಕಾರದಲ್ಲಿರುವ ಅಜ್ಞಾನದ ಧರ್ಮಾಧಿಕಾರಿಗಳು ಅದನ್ನು ನಾಶಪಡಿಸುತ್ತಿದ್ದಾರೆ. ನಾನು ಲಕ್ಷದ್ವೀಪದ ಜನರೊಂದಿಗೆ ನಿಲ್ಲುತ್ತೇನೆ 'ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
ದ್ವೀಪದಲ್ಲಿ ಮದ್ಯವನ್ನು ನಿಷೇಧಿಸಲಾಗಿತ್ತು. ಆದರೆ, ಇದೀಗ ಪ್ರಫುಲ್ ಪಟೇಲ್ ಅದಕ್ಕೆ ಅನುಮತಿ ನೀಡಿದ್ದಾರೆ. ಸ್ಥಳೀಯರಿಗೆ ಕಿರುಕುಳ ನೀಡುವ ಉದ್ದೇಶದಿಂದ ಸಮಾಜ ವಿರೋಧಿ ಚಟುವಟಿಕೆ (ಪಾಸಾ) ಕಾಯ್ದೆಯನ್ನು ತಂದಿದೆ. ಜೊತೆಗೆ ಪಂಚಾಯತ್‌ಗಳ ಅಧಿಕಾರವನ್ನು ಕಿತ್ತುಕೊಳ್ಳುತ್ತಿದ್ದಾರೆ ಎಂದು ದೂರಿದರು.