ನವದೆಹಲಿ: ಕರ್ನಾಟಕ ಮೂಲದ ಮಹಿಳೆಯೊಬ್ಬರು ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಗುವಿಗೆ ಜನ್ಮ ನೀಡಿದ್ದಾರೆ. ಟರ್ಮಿನಲ್ 3 ರಲ್ಲಿ ಗರ್ಭಿಣಿಗೆ ನೋವು ಕಾಣಿಸಿಕೊಂಡು ಅಲ್ಲಿಯೇ ಜನ್ಮ ಕೊಟ್ಟಿದ್ದಾರೆ. ವಿಮಾನ ನಿಲ್ದಾಣದಲ್ಲೇ ಇದ್ದ ತುರ್ತು ಚಿಕಿತ್ಸಾ ಕೇಂದ್ರಕ್ಕೆ ತಾಯಿ ಮಗುವನ್ನು ದಾಖಲಿಸಿ ಚಿಕಿತ್ಸೆ ನೀಡಿದ್ದಾರೆ. ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ಅಲ್ಲಿನ ವೈದ್ಯರು ತಿಳಿಸಿದ್ದಾರೆ.
"ಟರ್ಮಿನಲ್ 3 ರಲ್ಲಿ ಕರ್ನಾಟಕ ಮೂಲದ ಮಹಿಳೆ ಮಗುವಿಗೆ ಜನ್ಮ ನೀಡಿದ್ದಾರೆ. ಕಿರಿಯ ಪ್ರಯಾಣಿಕರಿಗೆ ಸ್ವಾಗತ ಕೋರಲಾಗುವುದು. ನಿಲ್ದಾಣದಲ್ಲಿ ಮಗು ಜನಿಸಿರುವುದು ಇದೇ ಮೊದಲು" ಎಂದು ವಿಮಾನ ನಿಲ್ದಾಣದ ಟ್ವಿಟರ್ ಖಾತೆಯಲ್ಲಿ ಬರೆಯಲಾಗಿದೆ.
-
Kudos to our team of doctors for safely delivering a healthy baby at Medanta Mediclinic at Delhi Airport’s Terminal 3.
— Medanta (@medanta) November 15, 2022 " class="align-text-top noRightClick twitterSection" data="
This is the first time that a child has been delivered at the Indira Gandhi International Airport!…#BabyDelivery #HealthyBaby #Medanta pic.twitter.com/MTVoaoLvIY
">Kudos to our team of doctors for safely delivering a healthy baby at Medanta Mediclinic at Delhi Airport’s Terminal 3.
— Medanta (@medanta) November 15, 2022
This is the first time that a child has been delivered at the Indira Gandhi International Airport!…#BabyDelivery #HealthyBaby #Medanta pic.twitter.com/MTVoaoLvIYKudos to our team of doctors for safely delivering a healthy baby at Medanta Mediclinic at Delhi Airport’s Terminal 3.
— Medanta (@medanta) November 15, 2022
This is the first time that a child has been delivered at the Indira Gandhi International Airport!…#BabyDelivery #HealthyBaby #Medanta pic.twitter.com/MTVoaoLvIY
ವಿಮಾನ ನಿಲ್ದಾಣದಲ್ಲಿ ಮೆದಾಂತ್ ಎಂಬ ತುರ್ತು ಚಿಕಿತ್ಸಾ ಘಟಕವಿದ್ದು, ವೈದ್ಯರು ಮತ್ತು ಅರೆ ವೈದ್ಯರು ಟರ್ಮಿನಲ್ 3 ರಲ್ಲಿ ಎಲ್ಲಾ ಸಮಯದಲ್ಲೂ ವೈದ್ಯಕೀಯ ಚಿಕಿತ್ಸೆಗೆ ಸನ್ನದ್ಧರಾಗಿರುತ್ತಾರೆ. ಫೋರ್ಟಿಸ್ ಗ್ರೂಪ್ನಿಂದ ಆಸ್ಪತ್ರೆಗಳಲ್ಲಿ ಸಿಗುವ ವೈದ್ಯಕೀಯ ಸೌಲಭ್ಯವನ್ನು ಇಲ್ಲಿ ನೀಡಲಾಗುತ್ತದೆ.
ಓದಿ: ಚಾಲಕನ ಅನುಚಿತ ವರ್ತನೆ: ಚಲಿಸುತ್ತಿದ್ದ ಆಟೋದಿಂದ ಜಿಗಿದ ಯುವತಿ.. ವಿಡಿಯೋ