ಜಮ್ಮು ಮತ್ತು ಕಾಶ್ಮೀರ: ದಕ್ಷಿಣ ಕಾಶ್ಮೀರದ ಅನಂತ್‌ನಾಗ್ ಜಿಲ್ಲೆಯಲ್ಲಿ ಟಿಪ್ಪರ್ ವಾಹನದಲ್ಲಿ ಉಗ್ರರು ಇಟ್ಟಿದ್ದ ಸುಧಾರಿತ ಸ್ಫೋಟಕ ಸಾಧನ (ಐಇಡಿ) ಸ್ಫೋಟಗೊಂಡಿದೆ.
ಅನಂತ್ನಾಗ್ನ ಬಿಜ್‌ಬೆರಾ ಪ್ರದೇಶದ ಪಜಲ್‌ಪೊರಾದಲ್ಲಿ ಸಣ್ಣ ಹಾಗೂ ಕಡಿಮೆ ತೀವ್ರತೆಯ ಐಇಡಿ ಬ್ಲಾಸ್ಟ್ ಆಗಿದ್ದು, ಯಾವುದೇ ಸಾವು - ನೋವು ಸಂಭವಿಸಿಲ್ಲ. ಕೆಲ ವಾಹನಗಳಿಗೆ ಹಾನಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ರಾತ್ರೋರಾತ್ರಿ ಟಿಎಂಸಿ ಶಾಸಕನ ಮನೆ-ಕಚೇರಿ ಧ್ವಂಸಗೊಳಿಸಿದ ದುಷ್ಕರ್ಮಿಗಳು
ಘಟನಾ ಸ್ಥಳವನ್ನು ಅಧಿಕಾರಿಗಳು ಸುತ್ತುವರೆದಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.