ETV Bharat / bharat

ದೆಹಲಿಯಲ್ಲಿ 24 ಸಾವಿರ ಕೋವಿಡ್ ಕೇಸ್​: ಪರಿಸ್ಥಿತಿ ತುಂಬಾ ಗಂಭೀರ ಎಂದ ಕೇಜ್ರಿವಾಲ್​! - ಮಹಾಮಾರಿ ಕೊರೊನಾ

ದೆಹಲಿಯಲ್ಲಿ ಮಹಾಮಾರಿ ಕೊರೊನಾ ಭೀಕರತೆ ಗಂಭೀರವಾಗಿದ್ದು, ಪರಿಸ್ಥಿತಿ ತುಂಬಾ ಗಂಭೀರವಾಗಿದೆ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್​ ತಿಳಿಸಿದ್ದಾರೆ.

Kejriwal
Kejriwal
author img

By

Published : Apr 17, 2021, 6:38 PM IST

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಹಾಮಾರಿ ಕೋವಿಡ್​ ಆರ್ಭಟ ಜೋರಾಗಿದ್ದು, ಕಳೆದ 24 ಗಂಟೆಯಲ್ಲಿ ದಾಖಲೆಯ 24 ಸಾವಿರ ಕೋವಿಡ್​ ಪ್ರಕರಣ ದಾಖಲಾಗಿವೆ.

ಪರಿಸ್ಥಿತಿ ತುಂಬಾ ಗಂಭೀರ ಎಂದ ಕೇಜ್ರಿವಾಲ್

ಇದೇ ವಿಚಾರವಾಗಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್​ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ನಿತ್ಯ ಮಹಾಮಾರಿ ಕೊರೊನಾ ವೈರಸ್ ಹಾವಳಿ ಹೆಚ್ಚಾಗುತ್ತಿರುವುದರಿಂದ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಹಾಗೂ ಹಾಸಿಗೆಗಳ ಕೊರತೆ ಉದ್ಭವವಾಗಿದೆ ಎಂದಿದ್ದಾರೆ.

  • We will keep a close eye on the situation for some days. If the situation deteriorates, we will take whatever step is needed to save your lives: Delhi CM Arvind Kejriwal pic.twitter.com/QfI4HUAOmp

    — ANI (@ANI) April 17, 2021 " class="align-text-top noRightClick twitterSection" data=" ">

ದೆಹಲಿಯಲ್ಲಿ ಸದ್ಯದ ಪರಿಸ್ಥಿತಿ ತುಂಬಾ ಗಂಭೀರವಾಗಿದ್ದು, ಸೋಂಕಿತ ಪ್ರಕರಣ ಹೆಚ್ಚಿನ ಪ್ರಮಾಣದಲ್ಲಿ ದಾಖಲಾಗುತ್ತಿವೆ ಎಂದರು. ಮುಂದಿನ ಎರಡು ದಿನಗಳಲ್ಲಿ ನಾವು 6,000 ಬೆಡ್ ನಿರ್ಮಿಸಲಿದ್ದು, ಪರಿಸ್ಥಿತಿ ಇಷ್ಟೊಂದು ಗಂಭೀರತೆ ಪಡೆದುಕೊಳ್ಳಲಿದೆ ಎಂಬುದು ಗೊತ್ತಿರಲಿಲ್ಲ. ಕೇಂದ್ರ ಸರ್ಕಾರ ಕಳೆದ ಸಲ 4100 ಬೆಡ್ ನೀಡಿತ್ತು. ಆದರೆ, ಈ ಸಲ 1800 ಹಾಸಿಗೆ ನೀಡಿದ್ದು, ಈ ವಿಚಾರವಾಗಿ ಕೇಂದ್ರ ಆರೋಗ್ಯ ಸಚಿವರೊಂದಿಗೆ ಮಾತನಾಡುವೆ ಎಂದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.