ನವದೆಹಲಿ : 24.1 ರಷ್ಟು ಭಾರತೀಯರು ಕೋವಿಡ್-19ಗೆ ತುತ್ತಾಗಿದ್ದಾರೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ನಡೆಸಿದ ಇತ್ತೀಚಿನ ಸರ್ವೆ ಬಹಿರಂಗಪಡಿಸಿದೆ. ಆದಾಗ್ಯೂ, ಕೇಂದ್ರ ಆರೋಗ್ಯ ಸಚಿವಾಲಯ ಜನಸಂಖ್ಯೆಯ ಶೇಕಡಾ 2 ಕ್ಕಿಂತ ಕಡಿಮೆ ಜನರು ಕೋವಿಡ್ ಸೋಂಕಿಗೆ ಒಳಗಾಗಿದ್ದಾರೆ ಎನ್ನುತ್ತದೆ.
ಭಾರತದಲ್ಲಿ 10 ವರ್ಷಕ್ಕಿಂತ ಮೇಲ್ಪಟ್ಟ ನಾಲ್ಕು ಜನರಲ್ಲಿ ಒಬ್ಬರು ಮತ್ತು ಆರೋಗ್ಯ ಕಾರ್ಯಕರ್ತರು ಸಹ SARS-CoV-2 ಗೆ ತುತ್ತಾಗಿದ್ದಾರೆ."ಗ್ರಾಮೀಣ ಪ್ರದೇಶಗಳಿಗೆ ಹೋಲಿಸಿದರೆ ನಗರ ಪ್ರದೇಶಗಳಲ್ಲಿ ಸಿರೊಪ್ರೆವಲೆನ್ಸ್ ಹೆಚ್ಚಾಗಿದೆ. ಡಿಸೆಂಬರ್ 2020 ರ ವೇಳೆಗೆ 25.6 ರಷ್ಟು ಆರೋಗ್ಯ ಕಾರ್ಯಕರ್ತರು ಕೋವಿಡ್ ಸೋಂಕಿಗೆ ತುತ್ತಾಗಿದ್ದಾರೆ ಎಂದು ಸಮೀಕ್ಷೆ ತಿಳಿಸಿದೆ.
ಭಾರತದ ಹಿಂದಿನ ಸಿರೊ ಸರ್ವೇಗಳು 2020 ರ ಮೇ-ಜೂನ್ ಅವಧಿಯಲ್ಲಿ 0.73 ಶೇಕಡಾ ಮತ್ತು ಆಗಸ್ಟ್ - ಸೆಪ್ಟೆಂಬರ್ 2020 ರಲ್ಲಿ 7.1 ಶೇಕಡಾ ಕೋವಿಡ್ ಸಿರೊಪ್ರೆವೆಲೆನ್ಸ್ ಅನ್ನು ಬಹಿರಂಗಪಡಿಸಿವೆ.
"ಭಾರತದ ಸಾಮಾನ್ಯ ಜನರು ಮತ್ತು ಆರೋಗ್ಯ ಕಾರ್ಯಕರ್ತರಲ್ಲಿ ಕೋವಿಡ್ ಸೋಂಕಿನ ಸಿರೊಪ್ರೆವೆಲೆನ್ಸ್ ಅನ್ನು ಅಂದಾಜು ಮಾಡಲು ನಾವು ಡಿಸೆಂಬರ್ 2020 ಮತ್ತು ಜನವರಿ 2021 ರಲ್ಲಿ ಮೂರನೇ ಸಿರೋಸರ್ವೇ ನಡೆಸಿದ್ದೇವೆ" ಎಂದು ಐಸಿಎಂಆರ್ ಹೇಳಿದೆ. ಭಾರತದಾದ್ಯಂತ 21 ರಾಜ್ಯಗಳಿಂದ ಮೊದಲ ಮತ್ತು ಎರಡನೆಯ ಸಮೀಕ್ಷೆಗೆ ಆಯ್ಕೆಯಾದ ಅದೇ 70 ಜಿಲ್ಲೆಗಳಲ್ಲಿ ಸೆರೋ ಸರ್ವೇ ನಡೆಸಲಾಯಿತು.
ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಪ್ರಮಾಣದ ಜನ ಸೋಂಕಿಗೆ ಗುರಿಯಾಗುವುದರಿಂದ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ, ವಿಶೇಷವಾಗಿ ಆಮ್ಲಜನಕ ಹಾಸಿಗೆಗಳಲ್ಲಿ ಸೀಮಿತ ಆರೋಗ್ಯ ಸೌಲಭ್ಯಗಳನ್ನು ಪರಿಗಣಿಸುವುದರಿಂದ, ಗ್ರಾಮೀಣ ಪ್ರದೇಶದ ವೃದ್ಧರ ಜನಸಂಖ್ಯೆಯನ್ನು ಕೋವಿಡ್ ವ್ಯಾಕ್ಸಿನೇಷನ್‌ಗೆ ಆದ್ಯತೆ ನೀಡಬಹುದು ಎಂದು ಸಮೀಕ್ಷೆ ಸೂಚಿಸಿದೆ.
ಸಮೀಕ್ಷೆಯ ಬಗ್ಗೆ ಪ್ರತಿಕ್ರಿಯಿಸಿದ ಐಸಿಎಂಆರ್ ಹಿರಿಯ ಸಲಹೆಗಾರರು ಮತ್ತು ಖ್ಯಾತ ಆರೋಗ್ಯ ತಜ್ಞರಾದ ಡಾ.ಸುನೀಲ್ ಗರ್ಗ್, ಭಾರತದ ಸಾಮಾನ್ಯ ಜನಸಂಖ್ಯೆಯ ಶೇಕಡಾ 24.1 ರಷ್ಟು ಜನರು ಕೋವಿಡ್-19 ಗೆ ಗೆ ತುತ್ತಾಗಿದ್ದಾರೆ, ಉಳಿದ ಜನಸಂಖ್ಯೆಯ ಬಹುಪಾಲು ಸಹ ಹೆಚ್ಚು ಸೋಂಕಿಗೆ ಒಳಗಾಗುವ ಸಾಧ್ಯತೆ ಇದೆ ಎಂದಿದ್ದಾರೆ.