ETV Bharat / bharat

ಲಸಿಕೆ ಹಾಕಿದ, ಹಾಕಿಸಿಕೊಳ್ಳದ ಇಬ್ಬರಿಗೂ Delta ರೂಪಾಂತರ ದಾಳಿ ಇಡುತ್ತದೆ: ICMR - ಡೆಲ್ಟಾ ಬಗ್ಗೆ ಅಚ್ಚರಿ ಮಾಹಿತಿ

ಐಸಿಎಂಆರ್ ನಡೆಸಿದ ಅಧ್ಯಯನದ ಪ್ರಕಾರ, ಡೆಲ್ಟಾ ರೂಪಾಂತರವು ಲಸಿಕೆ ಹಾಕಿದ ಮತ್ತು ಲಸಿಕೆ ಹಾಕಿಸದ ವ್ಯಕ್ತಿಗಳಿಗೂ ಸೋಂಕು ತಗಲುವ ಸಾಮರ್ಥ್ಯ ಹೊಂದಿದೆ.

author img

By

Published : Aug 19, 2021, 3:31 PM IST

ಚೆನ್ನೈ: ಚೆನ್ನೈನಲ್ಲಿ ನಡೆಸಿದ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ಐಸಿಎಂಆರ್) ಅಧ್ಯಯನವು ಡೆಲ್ಟಾ ಬಗ್ಗೆ ಅಚ್ಚರಿ ಮಾಹಿತಿ ಹೊರಹಾಕಿದೆ. ಲಸಿಕೆ ಹಾಕಿದ ಮತ್ತು ಲಸಿಕೆ ಹಾಕದ ವ್ಯಕ್ತಿಗಳಿಗೂ ಈ ಸೋಂಕು ಹರಡುವ ಸಾಮರ್ಥ್ಯ ಹೊಂದಿದೆ ಎಂದು ತಿಳಿದು ಬಂದಿದೆ.

ಆಗಸ್ಟ್ 17 ರಂದು ಜರ್ನಲ್ ಆಫ್ ಇನ್ಫೆಕ್ಷನ್ ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ ಮತ್ತು ಐಸಿಎಂಆರ್-ನ್ಯಾಷನಲ್ ಇನ್ಸಿಟ್ಯೂಟ್ ಆಫ್ ಎಪಿಡೆಮಿಯಾಲಜಿಯ ಸಾಂಸ್ಥಿಕ ನೈತಿಕ ಸಮಿತಿಯಿಂದ ಇದನ್ನು ವರದಿ ಮಾಡಲಾಗಿದೆ.

ಲಸಿಕೆ ಹಾಕಿಸದ ಮತ್ತು ಲಸಿಕೆ ಹಾಕಿಸಿಕೊಂಡ ವ್ಯಕ್ತಿಗಳಿಗೆ ಸೋಂಕು ತಗಲುವ ಸಾಮರ್ಥ್ಯವನ್ನು ಹೊಂದಿದೆ. ಆದಾಗ್ಯೂ, ವ್ಯಾಕ್ಸಿನೇಷನ್ ಮೂಲಕ ಸ್ವಲ್ಪ ಮಟ್ಟಿಗೆ ಸೋಂಕು ಏರುಗತಿಯಲ್ಲಿ ಸಾಗುವುದನ್ನು ತಡೆಗಟ್ಟಬಹುದು. ಆದ್ದರಿಂದ, ಲಸಿಕಾಕರಣದ ವೇಗ ಮತ್ತು ಪ್ರಮಾಣವನ್ನು ಹೆಚ್ಚಿಗೆ ಮಾಡಬೇಕು. ಇದರಿಂದ ಸಾಂಕ್ರಾಮಿಕ ರೋಗದ ಮತ್ತಷ್ಟು ಅಲೆಗಳನ್ನು ತಗ್ಗಿಸಲು ಸಾಧ್ಯ ಎಂದು ವರದಿಯಲ್ಲಿ ಹೇಳಲಾಗಿದೆ.

ವರದಿಯಲ್ಲಿ ಹೇಳಿದ್ದೇನು?

ಹೊಸ ರೂಪಾಂತರಗಳ ಹೊರ ಹೊಮ್ಮುವಿಕೆಯನ್ನು ಮೇಲ್ವಿಚಾರಣೆ ಮಾಡಲು ಮತ್ತು ರೋಗ ನಿರೋಧಕ ಶಕ್ತಿ ಸಾಮರ್ಥ್ಯ ನಿರ್ಣಯಿಸಲು ವ್ಯವಸ್ಥಿತ ಜೀನೋಮಿಕ್ ಕಣ್ಗಾವಲು ನಡೆಸಬೇಕು ಎಂದು ವರದಿಯಲ್ಲಿ ತಿಳಿಸಲಾಗಿದೆ.

ಅದಾಗ್ಯೂ ಡೆಲ್ಟಾ ರೂಪಾಂತರದ ಸೋಂಕಿನ ನಂತರ ಕೋವಿಶೀಲ್ಡ್ ಮತ್ತು ಕೋವಾಕ್ಸಿನ್ ಲಸಿಕೆ ಹಾಕಿಸಿಕೊಂಡವರಲ್ಲಿ ಡೆಲ್ಟಾ ತಟಸ್ಥೀಕರಣಗೊಂಡಿದೆ ಎಂದು ವರದಿ ಮಾಡಿದ ಇತರ ಅಧ್ಯಯನಗಳನ್ನು ಈ ವರದಿಯಲ್ಲಿ ಉಲ್ಲೇಖಿಸಿದೆ.

ಜನವರಿ 2021ರಲ್ಲಿ ಲಸಿಕಾ ಅಭಿಯಾನ ಆರಂಂಭ

ಏಪ್ರಿಲ್ ಮತ್ತು ಮೇ 2021 ರ ತಿಂಗಳುಗಳಲ್ಲಿ ಭಾರತವು SARS-CoV-2 ಸೋಂಕಿನ ತೀವ್ರ ಅಲೆಯನ್ನು ಎದುರಿಸಿದೆ. BBV152 ಲಸಿಕೆ (ಕೋವ್ಯಾಕ್ಸಿನ್; ಭಾರತ್ ಬಯೋಟೆಕ್) ಮತ್ತು ChAdOx1 nCoV-19 ( ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ) ನೊಂದಿಗೆ ಜನವರಿ 2021 ರಲ್ಲಿ ದೇಶದಲ್ಲಿ ಕೊರೊನಾ ಲಸಿಕೆ ಪ್ರಾರಂಭವಾಯಿತು. ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ನೀಡಲಾಯಿತು. ನಂತರ ಎಲ್ಲಾ ವಯಸ್ಕರಿಗೆ ಲಸಿಕೆ ಹಾಕಲಾಯಿತು.

ವರದಿ ಪ್ರಕಾರ, ಭಾರತದಲ್ಲಿ ಕೋವಿಡ್ ಎರಡನೇ ಅಲೆಯಲ್ಲಿ ಚೆನ್ನೈ ಅತ್ಯಂತ ಕೆಟ್ಟ ನಗರಗಳಲ್ಲಿ ಒಂದಾಗಿದ್ದು, ಮೇ ತಿಂಗಳಲ್ಲಿ ಮೊದಲ ಮೂರು ವಾರಗಳಲ್ಲಿ ಪ್ರತಿದಿನ ಸುಮಾರು 6000 ಪ್ರಕರಣಗಳು ವರದಿಯಾಗುತ್ತಿದ್ದವು. ಇನ್ನು ಈ ಅಧ್ಯಯನಕ್ಕೆ ಚೆನ್ನೈನ ಮೂರು ಟ್ರೈಜಿಂಗ್ ಕೇಂದ್ರಗಳ ರೋಗಿಗಳನ್ನು ಒಳಪಡಿಸಲಾಗಿತ್ತು.

ಮೇ ಮೊದಲ ವಾರದ ನಡುವೆ ಟ್ರೈಜ್ ಕೇಂದ್ರಗಳಿಗೆ ಭೇಟಿ ನೀಡಿದ 3,790 ಜನರಲ್ಲಿ 373 ಜನರು ತಮಗೆ ಕೊರೊನಾ ಪಾಸಿಟಿವ್​ ಉಂಟಾಗುವ 14 ದಿನಗಳ ಮೊದಲು ಕನಿಷ್ಠ ಒಂದು ಡೋಸ್ ಲಸಿಕೆಯನ್ನು ಪಡೆದಿದ್ದಾರೆ ಎಂದು ವರದಿ ಮಾಡಿದ್ದಾರೆ. ಉಳಿದ 3,417 ಲಸಿಕೆಯನ್ನೇ ಹಾಕಿಸಿಕೊಂಡಿಲ್ಲ.

ಲಸಿಕೆ ಹಾಕಿಸಿಕೊಂಡವರಲ್ಲಿ ಸಾವಿನ ಸಾಧ್ಯತೆ ಕಡಿಮೆ

ವರದಿಯ ಪ್ರಕಾರ ಸಂಪೂರ್ಣ ಲಸಿಕೆ ಹಾಕಿದ ಗುಂಪಿನಲ್ಲಿ ಯಾವುದೇ ಸಾವುಗಳು ವರದಿಯಾಗಿಲ್ಲ. ಆದರೆ ಮೂರು ಭಾಗಶಃ ಲಸಿಕೆ ಹಾಕಿಸಿಕೊಂಡವರು ಮತ್ತು ಏಳು ಲಸಿಕೆ ಹಾಕಕಿಸಿಕೊಳ್ಳದ ರೋಗಿಗಳು ಸಾವಿಗೀಡಾಗಿದ್ದಾರೆ.

ಲಸಿಕೆ ಹಾಕಿಸಿಕೊಂಡ ಗುಂಪಿನಲ್ಲಿ 373 ರಲ್ಲಿ 354 (ಶೇ. 94.9) ಜನರ ಬಗ್ಗೆ ನಡೆದ ಅಧ್ಯಯನ ದಾಖಲಿಸಲಾಗಿದೆ. ಈ ಪೈಕಿ 241 ಜನರು ಒಂದು ಡೋಸ್ ತೆಗೆದುಕೊಂಡಿದ್ದಾರೆ ಅಥವಾ ಭಾಗಶಃ ಲಸಿಕೆ ಪಡೆದಿದ್ದಾರೆ ಮತ್ತು 113 ಜನರು ಎರಡೂ ಡೋಸ್ ತೆಗೆದುಕೊಂಡಿದ್ದಾರೆ ಅಥವಾ ಸಂಪೂರ್ಣ ಲಸಿಕೆ ಹಾಕಿಸಿಕೊಂಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.