ನವದೆಹಲಿ: ಇನ್ಮುಂದೆ ನೀವು ಕೊರೊನಾ ವೈರಸ್ನ ಹೊಸ ರೂಪಾಂತರವಾದ ಒಮಿಕ್ರಾನ್ ಪತ್ತೆ ಹಚ್ಚಲು ವಾರಗಟ್ಟಲೆ ಕಾಯಬೇಕಿಲ್ಲ. ಕೇವಲ ಎರಡೇ ಗಂಟೆಯಲ್ಲಿ ಫಲಿತಾಂಶ ನೀಡುವ ಕಿಟ್ವೊಂದನ್ನ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಅಭಿವೃದ್ಧಿಪಡಿಸಿದೆ.
ದಕ್ಷಿಣಾ ಆಫ್ರಿಕಾದಲ್ಲಿ ಮೊದಲು ಪತ್ತೆಯಾದ ಒಮಿಕ್ರಾನ್ ಇದೀಗ ಪ್ರಪಂಚದ 90ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಹರಡಿದೆ. ಕರ್ನಾಟಕ, ಮಹಾರಾಷ್ಟ್ರ, ದೆಹಲಿ, ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು, ಕೇರಳ, ಗುಜರಾತ್, ರಾಜಸ್ಥಾನ, ಉತ್ತರ ಪ್ರದೇಶ, ಚಂಡೀಗಢ, ಪಶ್ಚಿಮ ಬಂಗಾಳದಲ್ಲಿ ಸೇರಿ ಭಾರತದಾದ್ಯಂತ 170ಕ್ಕೂ ಅಧಿಕ ಒಮಿಕ್ರಾನ್ ಪ್ರಕರಣಗಳು ಪತ್ತೆಯಾಗಿವೆ.
ಇದನ್ನೂ ಓದಿ: Omicron : ಮಲೆನಾಡಿಗೂ ಕಾಲಿಟ್ಟ ಒಮಿಕ್ರಾನ್.. 20 ವರ್ಷದ ಯುವತಿಯಲ್ಲಿ ಸೋಂಕು ಪತ್ತೆ
Omicron detection kit: ಇದು ಅಷ್ಟೊಂದು ಅಪಾಯಕಾರಿಯಲ್ಲವಾದರೂ ಅತೀ ವೇಗವಾಗಿ ಹರಡುತ್ತಿದೆ. ಒಮಿಕ್ರಾನ್ ಪತ್ತೆ ಹಚ್ಚಲು ಜೀನೋಮ್ ಸೀಕ್ವೆನ್ಸಿಂಗ್ಗೆ ಸ್ಯಾಂಪಲ್ ಕಳುಹಿಸಿ, ವರದಿ ಬರಲು 4-5 ದಿನಗಳು ಕಾಯಬೇಕಿತ್ತು. ಹೀಗಾಗಿ ಅಸ್ಸೋಂ ದಿಬ್ರುಗಢ್‌ನಲ್ಲಿರುವ ಐಸಿಎಂಆರ್ನ ಪ್ರಾದೇಶಿಕ ಸಂಶೋಧನಾ ಕೇಂದ್ರವು ಎರಡೇ ಗಂಟೆಯಲ್ಲಿ ಒಮಿಕ್ರಾನ್ ಪತ್ತೆ ಹಚ್ಚುವ ಕಿಟ್ ಅನ್ನು ಅಭಿವೃದ್ಧಿಪಡಿಸಿದ್ದು, ಇದನ್ನು ವಾಣಿಜ್ಯೀಕರಿಸಲು ಇನ್ ವಿಟ್ರೊ ಡಯಾಗ್ನೋಸ್ಟಿಕ್ಸ್ (IVD) ತಯಾರಕರನ್ನು ಕೇಳಿದೆ.