ETV Bharat / bharat

ಉತ್ತರಾಖಂಡ: ಸೈಕಲ್‌ನಲ್ಲಿ ಕಚೇರಿಗೆ ಆಗಮಿಸ್ತಾರೆ ಹಿರಿಯ ಐಎಎಸ್ ಅಧಿಕಾರಿ ಪುರುಷೋತ್ತಮ್ - ಐಎಎಸ್ ಅಧಿಕಾರಿ ಪುರುಷೋತ್ತಮ್ ಸೈಕಲ್ ಸವಾರಿ

ಐಎಎಸ್ ಅಧಿಕಾರಿ ಪುರುಷೋತ್ತಮ್ ಕಾರಿನ ಬದಲು ಸೈಕಲ್‌ನಲ್ಲಿ ಸಂಚರಿಸಿ ಸುದ್ದಿಯಾಗಿದ್ದಾರೆ.

IAS officer Purushottam goes to office by cycle
ಐಎಎಸ್ ಅಧಿಕಾರಿ ಪುರುಷೋತ್ತಮ್ ಸೈಕಲ್ ಸವಾರಿ
author img

By

Published : Aug 5, 2022, 12:17 PM IST

ಡೆಹ್ರಾಡೂನ್ (ಉತ್ತರಾಖಂಡ್​): ದೇಶದಲ್ಲಿ ಐಎಎಸ್ ಅಧಿಕಾರಿಗಳ ಜೀವನವನ್ನು ನಾವು ಬಹಳ ಐಷಾರಾಮಿ ಆಗಿ ಯೋಚಿಸಿರುತ್ತೇವೆ. ಆದರೆ ಉತ್ತರಾಖಂಡ್ ರಾಜ್ಯದ 2004ರ ಬ್ಯಾಚ್‌ನ ಐಎಎಸ್ ಅಧಿಕಾರಿ ಪುರುಷೋತ್ತಮ್ ಅವರು ಸರಳತೆ ಮತ್ತು ಪ್ರಾಮಾಣಿಕತೆಗೆ ಹೆಸರುವಾಸಿಯಾಗಿದ್ದಾರೆ. ಇವರು ಕಾರಿನ ಬದಲು ಸೈಕಲ್‌ನಲ್ಲಿ ಸಂಚರಿಸಿ ಸುದ್ದಿಯಾಗಿದ್ದಾರೆ.

ಐಎಎಸ್ ಅಧಿಕಾರಿ ಪುರುಷೋತ್ತಮ್ ಸೈಕಲ್ ಸವಾರಿ

ಐಎಎಸ್ ಅಧಿಕಾರಿ ಪುರುಷೋತ್ತಮ್ ಅವರು ಜನತೆಗೆ ಈ ಮೂಲಕ ಉತ್ತಮ ಸಂದೇಶವನ್ನು ನೀಡಿದ್ದಾರೆ. ಇದು ಪರಿಸರಕ್ಕೆ ಮಾತ್ರವಲ್ಲದೇ ಜನರ ಆರೋಗ್ಯದ ದೃಷ್ಟಿಯಿಂದಲೂ ಮುಖ್ಯವಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯಿಂದ ಹಿಡಿದು ದೇಶದ ಪ್ರಧಾನಿಯ ನರೇಂದ್ರ ಮೋದಿ ಕೂಡ ಸೈಕಲ್ ಸವಾರಿಯ ಲಾಭವನ್ನು ಹೇಳುತ್ತಿರುತ್ತಾರೆ. ಇದೀಗ ಐಎಎಸ್ ಅಧಿಕಾರಿ ಬಿ.ವಿ.ಆರ್.ಸಿ ಪುರುಷೋತ್ತಮ್ ಅದನ್ನು ಅವರ ಜೀವನದಲ್ಲಿ ಅಳವಡಿಸಿಕೊಂಡಿದ್ದಾರೆ.

ಇದನ್ನೂ ಓದಿ: ಒಳ್ಳೆಯ ಕ್ರೆಡಿಟ್​ ಸ್ಕೋರ್ ಇಟ್ಟುಕೊಳ್ಳುವುದು ಹೇಗೆ? ಇಲ್ಲಿದೆ ಮಾಹಿತಿ

ಪುರುಷೋತ್ತಮ್ ಅವರು ಉತ್ತರಾಖಂಡದ ಮೀನುಗಾರಿಕೆ, ಸಹಕಾರ, ಪಶುಸಂಗೋಪನೆ, ಗ್ರಾಮೀಣಾಭಿವೃದ್ಧಿಯ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ. ಅವರ ಕಚೇರಿಗೆ ಸೈಕಲ್​ನಲ್ಲೇ ಆಗಮಿಸುತ್ತಾರೆ. ಅಲ್ಲದೇ ಇತರ ಇಲಾಖೆಗಳ ಕಚೇರಿಗಳ ಸಭೆಗಳಿಗೂ ಸೈಕಲ್​ನಲ್ಲೇ ತೆರಳುತ್ತಾರೆ. ಐಎಎಸ್ ಅಧಿಕಾರಿ ಸೈಕಲ್ ಸವಾರಿ ಅವರ ಕಚೇರಿ ಅಲ್ಲದೇ ಸುತ್ತಮುತ್ತಲ ಜನರಲ್ಲೂ ಚರ್ಚೆಯಾಗಿ, ಶ್ಲಾಘನೆ ವ್ಯಕ್ತವಾಗುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.