ಗುವಾಹಟಿ(ಅಸ್ಸೋಂ): ಅಸ್ಸೋಂನಲ್ಲಿ ಕಳೆದ ಕೆಲ ದಿನಗಳಿಂದ ಭೀಕರ ಮಳೆಯಾಗಿರುವ ಪರಿಣಾಮ ಕೆಲ ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣಗೊಂಡಿದೆ. ಇದರ ಮಧ್ಯೆ ಪ್ರವಾಹ ಪರಿಸ್ಥಿತಿ ವೀಕ್ಷಣೆ ಮಾಡಲು ಆಗಮಿಸಿದ್ದ ಐಎಎಸ್ ಮಹಿಳಾ ಅಧಿಕಾರಿ ಕೆಸರಿನಲ್ಲೇ ವಿವಿಧ ಪ್ರದೇಶಗಳಲ್ಲಿ ಭೇಟಿ, ನೀಡಿ ಎಲ್ಲರ ಗಮನ ಸೆಳೆದಿದ್ದಾರೆ.
-
Keerthi Jalli IAS, Deputy Commissioner Cachar.🙏 pic.twitter.com/n5CsOoAFMu
— Awanish Sharan (@AwanishSharan) May 26, 2022 " class="align-text-top noRightClick twitterSection" data="
">Keerthi Jalli IAS, Deputy Commissioner Cachar.🙏 pic.twitter.com/n5CsOoAFMu
— Awanish Sharan (@AwanishSharan) May 26, 2022Keerthi Jalli IAS, Deputy Commissioner Cachar.🙏 pic.twitter.com/n5CsOoAFMu
— Awanish Sharan (@AwanishSharan) May 26, 2022
ಭೀಕರ ಮಳೆಯಿಂದಾಗಿ ಅಸ್ಸೋಂನ ಕ್ಯಾಚಾರ್ ಜಿಲ್ಲೆ ಪ್ರವಾಹಕ್ಕೊಳಗಾಗಿದ್ದು, ಅನೇಕ ಗ್ರಾಮಗಳು ಹಾನಿಗೊಳಗಾಗಿವೆ. ಈ ಸ್ಥಳಕ್ಕೆ ಐಎಎಸ್ ಅಧಿಕಾರಿ ಕೀರ್ತಿ ಜಲ್ಲಿ ಭೇಟಿ ನೀಡಿದ್ದು, ಅದರ ಕೆಲವೊಂದು ಫೋಟೋಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿವೆ.
ವಿವಿಧ ಪ್ರವಾಹ ಪೀಡಿತ ಪ್ರದೇಶಗಳಿಗೆ ಬರಿಗಾಲಲ್ಲಿ, ಕೇಸರಿನಲ್ಲೇ ಪರಿಶೀಲನೆ ನಡೆಸಿರುವ ಮಹಿಳಾ ಐಎಎಸ್ ಅಧಿಕಾರಿ ಕೀರ್ತಿ, ಸೂಕ್ತ ಸೌಕರ್ಯದ ಭರವಸೆ ನೀಡಿದ್ದಾರೆ. ಇದರ ಫೋಟೋಗಳನ್ನ 2009ರ ಬ್ಯಾಚ್ನ ಐಎಎಸ್ ಅಧಿಕಾರಿ ಅವನೀಶ್ ಶರಣ್ ಟ್ವೀಟ್ ಮಾಡಿದ್ದಾರೆ.
ಇವರ ಬದ್ಧತೆಗೆ ಎಲ್ಲೆಡೆಯಿಂದ ಶ್ಲಾಘನೆ ವ್ಯಕ್ತವಾಗುತ್ತಿದೆ. ಅಸನಿ ಚಂಡಮಾರುತದಿಂದಾಗಿ ಅಸ್ಸೋಂನಲ್ಲಿ ಇತ್ತೀಚೆಗೆ ಸಂಭವಿಸಿರುವ ಪ್ರವಾಹ ಪರಿಸ್ಥಿತಿಯಿಂದಾಗಿ ಕ್ಯಾಚಾರ್ ಜಿಲ್ಲೆ ತೀವ್ರ ಹಾನಿಗೊಳಗಾಗಿದೆ. ಜಿಲ್ಲಾದ್ಯಂತ ಸಾವಿರಾರು ತಾತ್ಕಾಲಿಕ ಶಿಬಿರ ತೆರೆಯಲಾಗಿದ್ದು, ಸಂತ್ರಸ್ತರಿಗೆ ವ್ಯವಸ್ಥೆ ಮಾಡಲಾಗಿದೆ.
ಇದನ್ನೂ ಓದಿ: ವಿಡಿಯೋ: ಪ್ರವಾಹ ವೀಕ್ಷಣೆಗೆ ಬಂದ ಬಿಜೆಪಿ ಶಾಸಕನನ್ನ ಹೆಗಲ ಮೇಲೆ ಹೊತ್ತೊಯ್ದ ರಕ್ಷಣಾ ಸಿಬ್ಬಂದಿ!
ಕಳೆದ ಕೆಲ ದಿನಗಳ ಹಿಂದೆ ಪ್ರವಾಹ ಪರಿಸ್ಥಿತಿ ವೀಕ್ಷಣೆ ಮಾಡಲು ಆಗಮಿಸಿದ್ದ ಬಿಜೆಪಿ ಶಾಸಕ ಸಿಬು ಮಿಶ್ರಾ ರಕ್ಷಣಾ ಸಿಬ್ಬಂದಿ ಹೆಗಲ ಮೇಲೆ ಹತ್ತಿ, ದೋಣಿ ತಲುಪಿರುವ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಶಾಸಕನ ವರ್ತನೆಗೆ ಇನ್ನಿಲ್ಲದ ಆಕ್ರೋಶ ಕೂಡಾ ವ್ಯಕ್ತವಾಗ್ತಿದೆ.